-ಎಂ.ಎಸ್. ಪ್ರಕಾಶ್ ಬಾಬು
ಬಂದೆ ಇಲ್ಲಿಯವರೆಗೆ
ಬರುವುದೆಂದರೆ ಇದೇ ಇರಬೇಕು
ಬಂದೆ ಇಲ್ಲಿಯವರೆಗೆ
ಬಂಡಣದ ಬದುಕಲ್ಲಿ
ನಾ ಭಂಗುರವಾದೆ
ಅಂಗಳದಲಿ ಅಂಬೇಗಾಲಿಟ್ಟು
ಆಡುತ್ತ ನೀ, ಸಿಂಬೆ ಮೇಲೆ
ಕೊಡವನಿಟ್ಟು
ನೀರೆಯರು ಬರುವಾಗ
ಇಟ್ಟ ಅಡಿಯನು
ಹಿಂದಿಟ್ಟು ನೋಡು
ಮುಂದಣದ ದಾರಿ
ಕಂಡಾತು
ಬರುವುದೆಂದರೆ ಇದೇ ಇರಬೇಕು
ನನ್ನೊಡಲ ಭಾವವಿದನು
ಹಿಗ್ಗೀಸಿ ಹಾಡಲ್ಲೊಲ್ಲದು
ಜೀವ
ಒಳಗೊಳಗೇ ಸಾಯುತಿಹುದು
ಎಚ್ಚರಗೊಳ್ಳುವ ಮೊದಲು
ಬರುವುದೆಂದರೆ ಇದೇ ಇರಬೇಕು
ಇದಾವುದೀ ಮಾಯೆ
ಮುಗ್ಗುಲಲೇ ಮರುಗುವುದು
ಸಾವನರಸಿ
ಇಕ್ಕಿಲ್ಲದಾ ಬಕ್ಕರೆಯೊಳಗೆ
ಸಾವನ್ನರಿಸುವುದೆಂತು
ಎಕ್ಕದಾ ಗಿಡದೊಳಗೆ
ಭೃಂಗವು ಹಾಡಿತ್ತು ನೋಡು
ಬರುವುದೆಂದರೆ ಇದೇ ಇರಬೇಕು
ಮತ್ತೆ ಮೂಡಿತ್ತು
ಸೂರ್ಯ ಮೂಡಣದಲಿ
ಪಡುವಣದ ಗಾಳೀಯು
ಬೀಸಿತ್ತು ನೋಡು
ನಿಂತ ನೆಲದಲಿ ಬೇರುಗಳು
ಅಲುಗಾಡಿ ಚಲಿಸುವಾ ಬಂಡಿ
ಮುರಿದ ಕನಸುಗಳ
ಒಟ್ಟು ಮಾಡಿ ಬಿಡು
ಬಿಟ್ಟು ಬಿಡು
ಹರಿದು ಹೋಗಲಿ ನೆನಪುಗಳು
ನಭವನರಿಸಿ
ಬರುವುದೆಂದರೆ ಇದೇ ಇರಬೇಕು
ಬಂದೆ ಇಲ್ಲಿಯವರೆಗೆ






0 Comments