ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲೇಖಕಿಯರ ಸಂಘದ ಶಂಕರಮ್ಮ ಬಳಿಗಾರ್ ಪ್ರಶಸ್ತಿ ಪ್ರಕಟ..

ಕರ್ನಾಟಕ ಲೇಖಕಿಯರ ಸಂಘವು 2025 ನೆಯ ಸಾಲಿನ ಮಾತೋಶ್ರೀ ಶಂಕರಮ್ಮ ಪ. ಬಳಿಗಾರ್ ಪ್ರಶಸ್ತಿಯನ್ನು ಘೋಷಿಸಿದೆ.

ಪ್ರಶಸ್ತಿಯು ಮೂರು ವಿಭಾಗಗಳನ್ನು ಒಳಗೊಂಡಿದ್ದು ಆಯಾ ವಿಭಾಗದಲ್ಲಿ ಸಾಧನೆಗೈದ ಲೇಖಕಿಯರಿಗೆ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಯು ತಲಾ 10000 ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ. ಆರ್. ಸುನಂದಮ್ಮ ತಿಳಿಸಿದ್ದಾರೆ.

ಪ್ರಶಸ್ತಿಯ ಆಯ್ಕೆ ಸಮಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಡಾ. ನಾಡೋಜ ಮನು ಬಳಿಗಾರ್, ಡಾ. ಆರ್. ಸುನಂದಮ್ಮ ಹಾಗೂ ಸುಮಾ ಸತೀಶ್ ಇದ್ದರು.

ಪ್ರಶಸ್ತಿ ಪುರಸ್ಕೃತರು
1) ಕಾವ್ಯ ವಿಭಾಗ – ಶ್ರೀಮತಿ ಮಾಧವಿ ಭಂಡಾರಿ ಕೆರೆಕೋಣ
2) ಗದ್ಯ ವಿಭಾಗ – ಶ್ರೀಮತಿ ಬಿ. ಟಿ. ಜಾಹ್ನವಿ
3) ಸಂಕೀರ್ಣ ವಿಭಾಗ – (ಶಿಕ್ಷಣ ಕ್ಷೇತ್ರ) ಪ್ರೊ. ವಿಜಯಾ ಬಿ. ಕೋರಿಶೆಟ್ಟಿ

ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಜುಲೈ 11 ರಂದು, ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ
ನಡೆಯಲಿದೆ.

‍ಲೇಖಕರು Admin

8 June, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading