ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ರೋಗಗ್ರಸ್ತ ಮನಸ್ಸುಗಳು ನಿರ್ಮಿಸಿದ ಸ್ಥಾವರಗಳಿಗೆ …'

ಬುದ್ಧನ ಮೇಲೆ ಬಾಂಬ್

ಎಂ ಎಂ ಶೇಕ್ ಯಾದಗಿರಿ


ನಿಸ್ತೇಜದ ನಿರ್ವೀರ್ಯದ
ಮನಸ್ಥಿತಿಗಳೇ ಹೀಗೆ..!!!!!
 
ಸಿಡಿಯುವುದಿಲ್ಲ, ಅವನ
ಆ ಶಾಂತ ನಗೆ ..
ಅಚ್ಚೊತ್ತಿದೆ ಬಾನಂಗಳದಲ್ಲಿ .
 
ರೋಗಗ್ರಸ್ತ ಮನಸ್ಸುಗಳು
ನಿರ್ಮಿಸಿದ ಸ್ಥಾವರಗಳಿಗೆ …
ಅಣ್ಣ ನಿಲುಕಲಿಲ್ಲ ……
ಏಸು ಒಲಿಯಲಿಲ್ಲ…..
ಬುದ್ಧ ಬಿರಿಯಲಿಲ್ಲ…. !!!!
 
ಪದೇಪದೆ ನೆಲ ಕೆದರಿ
ಹೀಗೆ ಹೆದರಿಸುವುದೇಕೆ ?
ತಾಕತ್ತಿದ್ದರೆ …
ಒಂದೇ ಸಲ ಕಟ್ಟಿಬಿಡು
ಸೂರ್ಯನಿಗೊಂದು ಬಾಂಬ್ ……!!!!!!
ಆದರೂ ನೆನಪಿರಲಿ ……
ಒಂದೊಂದು ಹನಿ ಕುಡಿದ
ಭೂಮಿಯ ಹಸಿ ಮತ್ತೂ ಆರುವುದಿಲ್ಲ …….!!!!!!!!
 
 

‍ಲೇಖಕರು avadhi

19 July, 2013

3 Comments

  1. raju

    ಉತ್ತಮವಾದ ಕವಿತೆ,ಆದರೆ ಇದೆಲ್ಲ ಮೂಲಭೂತವಾದಿ ಕೊಳಕು ಮನಸ್ಸಿನ ನಿರ್ಲಜ್ಜ ಪಾಖಂಡಿಗಳಿಗೆ ತಿಳಿಯುವುದಾದರು ಹೇಗೆ,

  2. nagaraj hettur

    Superb

  3. Gururaj katriguppe

    ಬುಧ್ದನಿಗೆ, ಅವನು ಬೋಧಿಸಿದ ‘ ಅಹಿಂಸೆ ‘ ಗೆ ಸಾವಿಲ್ಲ, ಒಳ್ಳೆಯ ಕವಿತೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading