ರಾಜೇಶ್ ಎಂಬ ಕನ್ನಡದ ಶಿವಾಜಿಗಣೇಶನ್…

ಗೊರೂರು ಶಿವೇಶ್

 ಬಾಲ್ಯದ ದಿನಗಳಲ್ಲಿ 6 ಗಂಟೆಗೆ ಎದ್ದು ಓಡುತ್ತಿದ್ದದ್ದು ನಮ್ಮ ಮನೆಯ ಎರಡು ಮನೆ ಆಚೆಗೆ ಇದ್ದ ನಮ್ಮ ದೊಡ್ಡಪ್ಪನ ಮಗ ಶ್ರೀಕಾಂತರ ಅಂಗಡಿಗೆ. ಐದೂವರೆಗೆ ಗೆ ಬಂದು ಅಂಗಡಿ ಜೋಡಿಸುವ ಕಾಯಕಕ್ಕೆ ಕೈ ಹಾಕುತ್ತಿದ್ದ ಶ್ರೀಕಾಂತ್ ಆರೂವರೆಗೆ ಬರುತ್ತಿದ್ದ ಪತ್ರಿಕೆಯನ್ನು ತೆಗೆದುಕೊಂಡು ಹೋಗುತ್ತಿದ್ದರು. ಆ ಸಮಯದಲ್ಲಿ ನಾವು ಕನ್ನಡಪ್ರಭ ಪತ್ರಿಕೆಯನ್ನು ಹೆಚ್ಚು ಓದುತ್ತಿದ್ದೇನು.

ಆಗ ಪ್ರಜಾವಾಣಿ ಪತ್ರಿಕೆಗೆ ಹೆಚ್ಚು ಓದುಗರು ಇದ್ದರು ಸಿನಿಮಾ ಪ್ರಿಯರು ಆ ಕಾಲಕ್ಕೆ ಆಶ್ರಯಿಸುತ್ತಿದ್ದ ಪತ್ರಿಕೆ ಕನ್ನಡಪ್ರಭ. ಕನ್ನಡಪ್ರಭ ಪತ್ರಿಕೆಯನ್ನು ಅರಸಲು ಕಾರಣ ಅದರಲ್ಲಿ ಹೆಚ್ಚು ಸಿನಿಮಾ, ಸಿನಿಮಾ ರಂಗಕ್ಕೆ ಸಂಬಂಧಿಸಿದ ಸುದ್ದಿಗಳು ಹಾಗೂ ಜಾಹಿರಾತುಗಳು ಪ್ರಕಟವಾಗುತ್ತಿದ್ದ ದ್ದು. ಜೊತೆಗೆ ಚಿತ್ರಪ್ರಭ ಸಿನಿಮಾ ಪುರವಣಿ ಪ್ರತಿ ಶುಕ್ರವಾರ ಬರುತ್ತಿತ್ತು.

 ಪತ್ರಿಕೆ ಓದುವುದರ ಜೊತೆಜೊತೆಗೆ ಶ್ರೀಕಾಂತ ರನ್ನು ಆಗಾಗ್ಗೆ ಮಾತಿಗೆ ಎಳೆಯುತ್ತಿದ್ದೇನು. ಅವರಿಗೆ ರಾಜಕುಮಾರ್ ಸಿನಿಮಾಗಳಿಗಿಂತ ರಾಜಕುಮಾರರೇತರ ಸಿನಿಮಾಗಳಲ್ಲಿ ಹೆಚ್ಚು ಆಸಕ್ತಿ.ನಾವು ರಾಜಕುಮಾರ ಸಿನಿಮಾಗಳ ಪ್ರಸ್ತಾಪ ಮಾಡಿದಾಗಲೆಲ್ಲ ಅವರು ಉದಯ್ ಕುಮಾರ್ ಅವರ ಚಂದವಳ್ಳಿಯ ತೋಟ, ಕಲ್ಯಾಣ್ ಕುಮಾರ್ ಅಭಿನಯದ ಅಮರಶಿಲ್ಪಿ ಜಕಣಾಚಾರಿ ಜೊತೆಗೆ ರಾಜೇಶ್ ಅಭಿನಯದ ನಮ್ಮ ಊರು ಸಿನಿಮಾಗಳನ್ನು ಪ್ರಸ್ತಾಪಿಸುತ್ತಿದ್ದರು. ನಮ್ಮ ಊರು ಸಿನಿಮಾದ ಹಾಡುಗಳು ಕಾಲಕ್ಕೆ ಅತ್ಯಂತ ಜನಪ್ರಿಯವಾಗಿದ್ದವು ಆ ಕಾಲಕ್ಕೆ ನಮ್ಮ ಊರು ಚಲನಚಿತ್ರದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ಹೋಗದಿರಿ ಸೋದರರೇ ಹೋಗದಿರಿ ಬಂಧುಗಳೇ ಗೀತೆಯನ್ನು ಮೆಲುದನಿಯಲ್ಲಿ ಹಾಡುತ್ತಿದ್ದರು.

ಪ್ರಗತಿಶೀಲ ಕಾದಂಬರಿಕಾರರ ಪ್ರಭಾವವಿದ್ದ ಎಪ್ಪತ್ತರ ದಶಕದ ಸಿನಿಮಾಗಳಲ್ಲಿ ಆದರ್ಶ ಯುವಕರ ಪಾತ್ರಗಳು ಹೆಚ್ಚಾಗಿ ಬರುತ್ತಿದ್ದದ್ದು ನಮ್ಮ ಊರು ಸಿನಿಮಾದಲ್ಲಿ ಆದರ್ಶ ಯುವಕನ ಪಾತ್ರವನ್ನು ರಾಜೇಶ್ ಅಭಿನಯಿಸಿದ್ದರು. ಹಳ್ಳಿಗಳಿಂದ ನಗರಗಳಿಗೆ ವಲಸೆ ಹೋಗುತ್ತಿದ್ದ ಆರಂಭಿಕ ಕಾಲವದು. ಸಿ ವಿ ಶಿವಶಂಕರ್ ಬರೆದು ನಿರ್ದೇಶಿಸಿದ ಚಿತ್ರ ಆ ಕಾಲಕ್ಕೆ ಯಶಸ್ವಿ ಚಿತ್ರವೂ ಹೌದು ಭಾರತ ಹಾಗು ಕನ್ನಡ ಮಣ್ಣಿನ ಹಿರಿಮೆ-ಗರಿಮೆಗಳನ್ನು ಹೇಳುತ್ತಾ” ನೀವೇಲ್ಲಿ ಹೋದರೂ ಬರಲೇಬೇಕು ನಮ್ಮೂರಿನಲ್ಲಿ ಬದುಕಲೇಬೇಕು ಪರದೇಶದಲ್ಲಿ ಸ್ಥಳ ನಿಮಗಿಲ್ಲ ಹುಟ್ಟಿದ ಊರೆ ನಮಗೆಲ್ಲ”.

ಈ ಸಾಲುಗಳು ಮತ್ತೆ ಮುಂಚೂಣಿಗೆ ಬಂದದ್ದು  ಕಳೆದ ವರ್ಷ ಕರೋನ ತನ್ನ ಶೃಂಗ ತಲುಪಿದ ಸಂದರ್ಭದಲ್ಲಿ ನಗರಗಳಿಂದ ಹಳ್ಳಿಗಳಿಗೆ ಮರು ವಲಸೆ ಹೋಗುತ್ತಿದ್ದ ಸಂದರ್ಭ ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡನ್ನು ಬಹಳಷ್ಟು ಜನ ಹಂಚಿಕೊಂಡಿದ್ದರು. ದೇವರ ದುಡ್ಡು ಶ್ರೀಕಾಂತ್ ಬಹಳಷ್ಟು ಸಲ ಹೇಳಿದ್ದರಿಂದ ನೋಡಿದ ಮತ್ತೊಂದು ಸಿನಿಮಾ. ಅದು ತಮಿಳು ಸಿನಿಮಾದ ಕನ್ನಡ ಅವತರಣಿಕೆ. ತಮಿಳಿನಲ್ಲಿ ಬಹುಶಃ ಶಿವಾಜಿಗಣೇಶನ್ ನಡೆಸಿದ ಆ ಪಾತ್ರವನ್ನು ಕನ್ನಡದಲ್ಲಿ ರಾಜೇಶ್ ಅಭಿನಯಿಸಿದ್ದರು.

ಭಾವೋತ್ಕರ್ಷದ ಪಾತ್ರಗಳ ಅಭಿನಯಕ್ಕೆ ಖ್ಯಾತರಾಗಿದ್ದ ಶಿವಾಜಿ ಗಣೇಶ ನ್ ಪಾತ್ರಗಳಿಗೆ ಸಂವಾದಿಯಾಗಿ ಕನ್ನಡದಲ್ಲಿ ರಾಜೇಶರ ಕೆಲವು ಪಾತ್ರಗಳು ಇರುತ್ತಿತ್ತು.ಎತ್ತರದ ನಿಲುವು ಗರಡಿಮನೆಯಲ್ಲಿ ಪಳಗಿಸಿದ ಅಂಗಸೌಷ್ಟವ ಗಂಭೀರವಾದ ವಿಭಿನ್ನ ದನಿ ಅವರನ್ನು ಸ್ಪುರದ್ರೂಪಿ ನಟನಾಗಿ ಸಿತ್ತು.ಆದರೆ ಶಿವಾಜಿ ಗಣೇಶನ್ ಅವರ ಜೊತೆಗಿನ ಹೋಲಿಕೆಯೇ ಅವರಿಗೆ ಅವಕಾಶಗಳಿಗೆ ಕೊರತೆ ಆಯಿತೇ? ಗೊತ್ತಿಲ್ಲ.

ದೇವರ ದುಡ್ಡು ಅವರಿಗೆ ಹೆಸರು ತಂದು ಕೊಟ್ಟ ಮತ್ತೊಂದು ಚಿತ್ರ .ಚಿತ್ರದಲ್ಲಿ ರೀ ಕೃಷ್ಣ ಸ್ವಾಮಿ ಎಂದು ವಿಶಿಷ್ಟವಾಗಿ ಶ್ರೀಕೃಷ್ಣನನ್ನು ಮಾತನಾಡಿಸುವ ರೀತಿ ಮುಂದೆ ಅದೇ ರೀತಿಯ ಅನೇಕ ಪೋಷಕ ಪಾತ್ರಗಳಿಗೆ ನಾಂದಿ ಹಾಡಿತು. ದೇವರ ದುಡ್ಡು ಆ ಕಾಲಕ್ಕೆ ಹೆಚ್ಚು ಪ್ರಸಿದ್ಧಿ ಹೊಂದಲು ಕಾರಣ ಆ ಸಿನಿಮಾದ ತರೀಕೆರೆ ಏರಿ ಮೇಲೆ ಮೂರು ಕರಿ ಕುರಿ ಮರಿ ಮೆಯ್ಯುತಿತ್ತು ಮತ್ತು ನಾನೇ ಎಂಬ ಭಾವ ನಾಶವಾಯಿತು ಗೀತೆ ಅದರಲ್ಲೂ   ಕೃಷ್ಣಾ, ಹೇ ಕೃಷ್ಣಾ, ಕೃಷ್ಣಾ ಎಂದು ಆರಂಭವಾಗುವ ಆದ್ಯಾತ್ಮದ ಗೀತೆ. 

ಗಾಳಿಯ ಪಟದಂತೆ ನಾನಯ್ಯಆಡಿಸೋ ಸೂತ್ರಧಾರೀ ನೀನಯ್ಯಒಳಗಿನ ಕಣ್ಣನು ತೆರೆಸಿದೆಯೋಗೀತೆಯ ಮರ್ಮವ ತಿಳಿಸಿದೆಯೋ

ನಾನೇ ಎಂಬ ಭಾವ ನಾಶವಾಯಿತುನೀನೇ ಎಂಬ ನೀತಿ ನಿಜವಾಯಿತುನಾನೇ ಎಂಬ ಭಾವ ನಾಶವಾಯಿತುನೀನೇ ಎಂಬ ನೀತಿ ನಿಜವಾಯಿತುಶ್ರೀ ಕೃಷ್ಣಾ, ಹೇ ಶ್ರೀ ಕೃಷ್ಣಾ
ಹೇಳಿದ ನೀತಿಯ ಕೇಳದೆ ಹೋದೆಕೇಳಿ ನಡೆಯದೆ ಅವಿವೇಕಿಯಾದೆಎಲ್ಲವು ನಾನು, ನನ್ನದೇ ಎಂದುನಂಬಿದೆನಯ್ಯೋ ಶಾಶ್ವತವೆಂದುಎಲ್ಲಾ ಸುಳ್ಳು, ಎಲ್ಲವು ಪೊಳ್ಳುತಿಳಿದೆನು ಇಂದು, ನಾನು ಮಿಥ್ಯ ನೀನು ಸತ್ಯ//

ಹೆಂಡತಿ ಮಕ್ಕಳು ಬಂಧು ಬಳಗರಾಗ ಭೋಗಗಳ ವೈಭೋಗಕಾಲನು ಬಂದು, ಬಾ ಎಂದಾಗಎಲ್ಲವು ಶೂನ್ಯ ಚಿತೆ ಏರುವಾಗಎಲ್ಲ ಶೂನ್ಯ, ಎಲ್ಲವು ಶೂನ್ಯಉಳಿಯುವುದೊಂದೆ, ದಾನ ಧರ್ಮ ತಂದ ಪುಣ್ಯ//
ಹುಣಸೂರು ಕೃಷ್ಣಮೂರ್ತಿ ಅವರ ರಚನೆಯ ಈ ಗೀತೆ ಜನಪ್ರಿಯವಾಗಲು ಬಸ್ಸ್ಟ್ಯಾಂಡ್ ಬಳಿಯಲ್ಲಿರೈಲಿನಲ್ಲಿ  ಹಾಡುತ್ತಿದ್ದ ಬಿಕ್ಷುಕ  ಹಾಡುಗಾರರು ಕಾರಣ ಎನ್ನಬಹುದು. ಹಾಡಿನ ಕೊನೆಯ ಸಾಲುಗಳನ್ನು ಮತ್ತೆ ಮತ್ತೆ ಹೇಳಿ ತಮ್ಮ ಆದಾಯವನ್ನು ದುಪ್ಪಟ್ಟು ಮಾಡಿಕೊಳ್ಳುತ್ತಿದ್ದರು. 

ಶಿವಾಜಿ ಗಣೇಶನ್ ಅಂತೆ ತಮ್ಮ ಪಾತ್ರವನ್ನು ಸ್ವಲ್ಪ ಸ್ಟೈಲಿಶ್ ಆಗಿ ಮಾತಿನ ವೈಖರಿಯ ಕೂಡ ಉಳಿದ ನಟರಿಗಿಂತ ವಿಭಿನ್ನವಾಗಿ ಮಾಡುತ್ತಿದ್ದ ರಜನಿಕಾಂತ ಗಿಂತ ಮುಂಚೆ ಯೇ ಆ ರೀತಿಯ ಪಾತ್ರಗಳನ್ನು ನಿರ್ವಹಿಸಿದ ನಟ ಎಂದು ಹೇಳಬಹುದು. ಆ ಕಾಲಘಟ್ಟದಲ್ಲಿ ರಾಜಕುಮಾರರವರು ಬಿಡುಗಡೆಯಾಗುತ್ತಿದ್ದ ಅರ್ಧಕ್ಕಿಂತ ಹೆಚ್ಚು ಚಲನಚಿತ್ರಗಳಲ್ಲಿ ನಾಯಕನಟರಾಗಿ ಅಭಿನಯಿಸುತ್ತಿದ್ದರು ಉಳಿದಂತೆ ಅವರ ಕಾಲ್ ಶೀಟ್ ದೊರೆಯದ್ದಿದ್ದ ಉಳಿದ ನಿರ್ಮಾಪಕರು ಇಲ್ಲವೇ ಹೀರೋ ಗಳಿಗಿಂತ ಹೆಚ್ಚು ಹೀರೋಯಿನ್ ಗಳಿಗೆ ಹೆಚ್ಚು ಪ್ರಾಮುಖ್ಯತೆ ಇರುವ ಸಿನಿಮಾಗಳಲ್ಲಿ ರಮೇಶ್ ಗಂಗಾಧರ್ ಶ್ರೀನಾಥ್ ಜೊತೆಗೆ ರಾಜೇಶ್  ಅವರು ಹೆಚ್ಚು ಅಭಿನಯಿಸುತ್ತಿದ್ದರು.

ಯಾವುದೇ ಪಾತ್ರವನ್ನಾದರೂ ರಾಜೇಶ್ ಮಾಡಿದ್ದರೂ ಅದರಲ್ಲಿ ಅವರ ಸ್ಟಾಂಪ್ ಅಂತೂ ಇರುತ್ತಿತ್ತು. ಬೆಳುವಲದ ಮಡಿಲಲ್ಲಿ ಹಾಡುಗಳು ಅತ್ಯಂತ ಜನಪ್ರಿಯವಾದರೂ ಆ ಕಾಲಕ್ಕೆ ವೈಫಲ್ಯ ಕಂಡ ರಾಜೇಶ್ ಮತ್ತು ಕಲ್ಪನಾ ಅಭಿನಯದ ಚಿತ್ರ ‘ಬೆಳವಲದ ಮಡಿಲಲ್ಲಿ ಬೆವರ ಹನಿ ಬಿದ್ದಾಗಒಂದೊಂದು ಬೆವರ ಹನಿ ಮುತ್ತಾಯ್ತಾದೊರಾಗಿಯ, ಜ್ವಾಳದ ತೆನೆಯಾಯ್ತದೊ’ ‘ದುಡಿಮೆಲಿ ಯಾವಾಗ್ಲೂ ಇರಬೇಕು ಭಕ್ತಿಬಡತನದ  ಓಡ್ಸೋಕೆ ಅದು ಒಂದೇ ಯುಕ್ತಿಭೂತಾಯಿ ಭಂಟ ಈ ನೇಗಿಲ ನಂಟಇವನಿಂದ್ಲೆ ಹರಿಯೋದು ಹಸಿವಿನ ಸಂಕಟ’ ಮುಂದೆ ಗೀತೆ ಜನಪ್ರಿಯವಾದರೂ ಚಿತ್ರದ ತಾಂತ್ರಿಕ ದೋಷ ಹಾಗೂ ಚಿತ್ರ ಕಥೆಯಲ್ಲಿನ ಲೋಪದಿಂದಾಗಿ ಚಿತ್ರ ವಿಫಲವಾಯಿತು ಎನ್ನಬಹುದು.

ಅದೇ ಚಿತ್ರದ ಎಲ್ಲರ ಕಾಯೋ ದ್ಯಾವ್ರೇ ನೀನು ಎಲ್ಲಿ ಕುಂತಿದ್ದಿ ಹಾಡು ತುಂಬ ಜನಪ್ರಿಯವಾಗಿತ್ತು. ಅವರ ಅಭಿನಯದ ಮರೆಯದೆ ಹಾಡು ಗಳಲ್ಲಿ ‘ಮುಗಿಯದ ಕಥೆ’ ಚಿತ್ರದ ಹಾಡು  ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ ಹಾಡದೇ ಉಳಿದಿಹ ಮಾತು ನೂರಿದೆ ಈ ಗೀತೆಯನ್ನು ಅಂದಿಗೂ ಇಂದಿಗೂ ಮುಂದಿಗೂ ಉಳಿಯುವ ಹಾಡು ಎಂದೇ ಹೇಳಬಹುದು. ಈ ಕೆಲ ತಿಂಗಳ ಹಿಂದೆ ಯಾರೋ ಇಬ್ಬರು ಅಜ್ಞಾತ ಬೀದಿ ಗಾಯಕರು ಹೆಣ್ಣು-ಗಂಡಿನ ದನಿಯಲ್ಲಿ ಹಾಡಿದ್ದು ಅದನ್ನು ಸಾವಿರಾರು ಜನ ಶೇರ್ ಮಾಡಿ ಲಕ್ಷಾಂತರ ಜನರು ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದು ಉಂಟು. ಅದೇ ರೀತಿ ಸೊಸೆ ತಂದ ಸೌಭಾಗ್ಯ ಚಿತ್ರದ ರವಿವರ್ಮನ ಕಲೆ ಬಲೆ ಸಾಕಾರವೋ ಗೀತೆಯೂ ಕೂಡ ತುಂಬ ಜನಪ್ರಿಯವಾದ ಗೀತೆ.

ಇನ್ನೂ ಬೋರೇಗೌಡ ಬೆಂಗಳೂರಿಗೆ ಬಂದ ಚಿತ್ರದ ಅಲ್ಲಿ ಇಲ್ಲಿ ಹುಡುಕುತ ಕಣ್ಣು ಏನೋ ಹೇಳಿತು ಗೀತೆಯನ್ನು ಆ ಕಾಲಕ್ಕೆ ಚಿ ಉದಯಶಂಕರ್ ಎಷ್ಟು ರೊಮ್ಯಾಂಟಿಕ್ ಹಾಗೂ ಶೃಂಗಾರ ಮಯವಾಗಿ ಬರೆದಿದ್ದಾರೆ ಎಂಬುದನ್ನು ನೀವು ಗೀತೆ ಕೇಳಿ ಆನಂದಿಸಬಹುದು.  19 35 ಏಪ್ರಿಲ್ 15 ರಂದು ಜನಿಸಿದ ವಿದ್ಯಾಸಾಗರ್ ರಾಜೇಶ್ ಆಗಿ ನಾಯಕರಾಗಿ ಬೋರೇಗೌಡ ಬೆಂಗಳೂರಿಗೆ ಬಂದ ಬೆಳುವಲದ ಮಡಿಲಲ್ಲಿ ಕಾವೇರಿ ಮರೆಯದ ದೀಪಾವಳಿ ಪ್ರತಿನಾಯಕರಾಗಿ ಕಲಿಯುಗ ನಮ್ಮ ಊರು’, ‘ಗಂಗೆ ಗೌರಿ’, ‘ಸತೀ ಸುಕನ್ಯ’, ಬೆಳುವಲದ ಮಡಿಲಲ್ಲಿ’, ಮಾಯಾ ಮನುಷ್ಯ, ‘ಕಪ್ಪು ಬಿಳುಪು’, ‘ಬೃಂದಾವನ’, ‘ಬೋರೆ ಗೌಡ ಬೆಂಗಳೂರಿಗೆ ಬಂದ’, ‘ಮರೆಯದ ದೀಪಾವಳಿ’, ‘ಪ್ರತಿಧ್ವನಿ’, ‘ಕಾವೇರಿ’, ‘ದೇವರ ಗುಡಿ’, ‘ಬದುಕು ಬಂಗಾರವಾಯ್ತು’, ‘ಸೊಸೆ ತಂದ ಸೌಭಾಗ್ಯ’, ‘ಮುಗಿಯದ ಕಥೆ’, ‘ಬಿಡುಗಡೆ’, ‘ದೇವರದುಡ್ಡು’, ‘ಕಲಿಯುಗ’, ‘ಪಿತಾಮಹ’ ಮುಂತಾದ ಚಿತ್ರಗಳಲ್ಲಿ ರಾಜೇಶರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು. 

ರಾಜೇಶ್ ಅವರನ್ನು ನೆನಪಿಸಿಕೊಂಡರೆ ಅವರ ಚಿತ್ರದ ಹಾಡುಗಳು ನೆನಪಿಗೆ ಬರುತ್ತಿರುವುದು ಆ ಕಾಲದ ಹಾಡುಗಳ ಸಾಹಿತ್ಯ ಮತ್ತು ಸಂಗೀತ ನಮ್ಮ ಮನಸ್ಸಿನಲ್ಲಿ ಉಳಿದಿರುವುದಕ್ಕೆ ಸಾಕ್ಷಿಯಾಗಿದೆ‌.   

‍ಲೇಖಕರು Admin

February 20, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಮಲ್ಲಿಕಾರ್ಜುನ ಹೊಸಪಾಳ್ಯ

    ಲೇಖನದ ಆಶಯ ಒಳ್ಳೆಯದು ಹಾಗೂ ಸಮಯೋಚಿತ, ಆದರೆ ವಾಕ್ಯ ರಚನೆಯಲ್ಲಿ ತುಂಬಾ ಗೊಂದಲಗಳಿವೆ. ಸರಳವಾಗಿ ಹೇಳಬಹುದಾದ ವಿಷಯವನ್ನು ಸಂಕೀರ್ಣಒಳಿಸಲಾಗಿದೆ. ಉದಾಹರಣೆಗೆ “ಶಿವಾಜಿ ಗಣೇಶನ್ ಅಂತೆ ತಮ್ಮ ಪಾತ್ರವನ್ನು ಸ್ವಲ್ಪ ಸ್ಟೈಲಿಶ್ ಆಗಿ ಮಾತಿನ ವೈಖರಿಯ ಕೂಡ ಉಳಿದ ನಟರಿಗಿಂತ ವಿಭಿನ್ನವಾಗಿ ಮಾಡುತ್ತಿದ್ದ ರಜನಿಕಾಂತ ಗಿಂತ ಮುಂಚೆ ಯೇ ಆ ರೀತಿಯ ಪಾತ್ರಗಳನ್ನು ನಿರ್ವಹಿಸಿದ ನಟ ಎಂದು ಹೇಳಬಹುದು.” ಈ ವಾಕ್ಯ ಏನನ್ನು ಹೇಳುತ್ತಿದೆ. ಅಲ್ಲದೆ ಕೆಲವು ಹಾಡುಗಳ ಮೂಲಕ ರಾಜೇಶ್ ಅವರ ವ್ಯಕ್ತಿತ್ವದ ಪರಿಚಯ ಮಾಡಲು ಪ್ರಯತ್ನಿಸುವಂತಿದೆ ಈ ಲೇಖನ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: