ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಮೇಶ್ ಎಮ್ ಗೋನಾಲ್ ಕವಿತೆ- ನೆನಪುಗಳ ಋಣಭಾರ ಹೊತ್ತು…

ರಮೇಶ್ ಎಮ್ ಗೋನಾಲ್

ಹೀಗೇಕೆ ನೀ ದೂರಾದೇ ಕನಸೇ..
ಒಂದಿನಿತೂ ಹೇಳದೇ; ನನ್ನನೂ ಕೇಳದೇ
ಕಾಡುತಿದೆ ನಾಳೆಯೂ ನನಗೆ ನಿನ್ನದೇ ನೆನಪುಗಳ ಋಣಭಾರ ಹೊತ್ತು…

ಅಂದು
ಆ ಕಗ್ಗತ್ತಲ ರಾತ್ರಿಯಲ್ಲೂ…
ಕಣ್ಣಂಚಿನ ಕಲ್ಪನೆಯಲ್ಲಿ ಕನಸುಗಳ ಜಾಡು ಹೆಣೆದಿದ್ದೆ ನೀನು!
ಇಂದು
ಕಂಡ ಕನಸುಗಳ ದಫನ್ ಮಾಡಿ ಬಹು ದೂರ ನಡೆದಿದ್ದೆ ಗೊತ್ತಿಲ್ಲದಂತೆ ಏನು !

ದಾರಿಯುದ್ದಕ್ಕೂ ನಿನ್ನ ಹೆಜ್ಜೆ ಗುರುತುಗಳು ತಾಕಿ
ಉಳಿಸಿ ಹೋಗಿದೆ ಮಾಯಲೋಲಕದ ಸದ್ದು..
ಮನವೇಕೋ ಮೌನದಿ ಮೆರವಣಿಗೆ ಹೊರಟಿದೆ ನಿನ್ನದೇ ನೆನಪಿನ ಶವಪೆಟ್ಟಿಗೆಯೊಳಗೆ..

ಜಾತಿ ಕೆಸರೊಳಗೆ ಸಿಲುಕಿ ಒಲವ ತಾವರೆ ನರಳಿತ್ತು;
ಕುಡಿಯೊಡೆವ ಮುನ್ನ!
ಪ್ರೀತಿ ಸೋತು ಆಗುವುದೇ ಆಹುತಿ ;
ಕಳೆದುಕೊಂಡು ಪ್ರಕೃತಿ !
ಯಾವುದು ನಿಮ್ಮ ಸಂಸ್ಕೃತಿ!?

‍ಲೇಖಕರು avadhi

26 March, 2023

1 Comment

  1. Agni

    Superb sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading