ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಜಿಯಾ ಡಿ ಬಿ ಹೊಸ ಕವಿತೆ- ಚಂದಿರ ನಕ್ಕ

ರಜಿಯಾ ಡಿ ಬಿ

ಯುಗಾದಿಯ ಈ ಚಂದ್ರ
ಒಂದೇ ಆದ
ರಂಜಾನಿನ ಚಾಂದ್ ಆಗಿ
ಕಣ್ಣೊಳಗೆ ಮನದೊಳಗೇ
ನೋಡುವ ಪ್ಲವವಾಗಿ
ವಿಪ್ಲವ ತಾರದೇ….
ವಿನೂತನ ಹಾದಿಗೆ
ನವೀಕರಿಸುವಂತಾದ;
ಪೂರ್ಣತೆಗೆ ಕರೆದೊಯ್ಯುವ
ಸೌಹಾರ್ದತೆಯ ಚಂದ್ರನಾಗಿ
ಇವರ ಅವರ ಕಣ್ಣಲಿ


ಒಟ್ಟೊಟ್ಟಿಗೆ ಇಣುಕಿದ ಹುಣ್ಣಿಮೆಯಾಗಿ
ಯುಗದ ಆದಿಯಾಗಿ
ಅನಂತತೆಯ ಆಗರವಾಗಿ
ಭಾವೈಕ್ಯತೆಯ ಬೀಡಾಗಿ
ಈ ನಾಡಿಗೆ—
ಅವ ಇವ ಎನ್ನದೇ
ಸೋದರರೆಂಬ ಸತ್ವವಾಗಿ ಸತ್ಯವಾಗಿ
ಸೈತಾನರ ಬಡಿದೋಡಿಸಿ
ಧರ್ಮದ ತಿರುಳೊಂದೇ ಎಂದೂ
ಚಂದಿರ ಪ್ರತಿಫಲಿಸಿದ.

‍ಲೇಖಕರು Avadhi

22 April, 2021

1 Comment

  1. ಡಾ.ಮಿರ್ಜಾ ಬಷೀರ್.ತುಮಕೂರು

    *ಸೈತಾನನ ಬಡಿದೋಡಿಸಿ
    ಧರ್ಮದ ತಿರುಳೊಂದೇ*
    ಚಂದದ ಸಾಲುಗಳು ಮೇಡಂ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading