-ದೇವಿಕಾ ನಾಗೇಶ್
ಯುದ್ಧ
ಆರಿಸಬಹುದು ಈ ಕಿಚ್ಚು
ನೀತಿಯ ಒಕ್ಕಣೆ ಇಲ್ಲದೆ
ಪ್ರೀತಿಯ ದಾರ ಹಿಡಿದು
ಕೈಗನ್ನಡಿಗೆ ಮೆತ್ತಿದ ಮಬ್ಬು
ಪರಸ್ಪರ ತೊಳೆದರೆ
ಎದೆ ಗುದಿಗೆ ಕಿವಿಯಾದರೆ
ಒಳಗಣ್ಣು ತೆರೆದರೆ
ಆರಿಸಬಹುದು ಈ ಕಿಚ್ಚು
ಕಿರಾತಕ ಮೌನವ ಸೀಳಿದರೆ
ಎದೆಯ ದೀಪ ಬೆಳಗಿದರೆ
ಕಣ್ಣ ಮಿಂಚು ಒಳಗೆ ಸುಳಿದು
ಮಿಸುಕಾಡಿ ಆತ್ಮ ದ ಕದವ
ತೆರೆದರೆ… ನೆಲ ಜಲ ಕಾನನ
ಒಡಲ ತಂಪು ಕಾದು
ಕಾರುಣ್ಯ ಮಡುಗಟ್ಟಿ
ಚಿಮ್ಮುವ ಒರತೆಯಾಗಿ
ಅರಿವಿನ ಬೆಳಕಾಗಿ ಕಾಡಿದರೆ
ಆರಿಸಬಹುದು ಈ ಕಿಚ್ಚು
ಯುದ್ಧ ಜಿದ್ದಾಗದೆ
ಬಯಕೆ ಕಾರ್ಮೋಡವಾಗದೆ
ಮೋಹ ಕಂಬಿಯಾಗದೆ
ಕಡಲು ಒಡಲು
ಮಾರ್ಧ್ವನಿಸುವ ಮಡಿಲು
ಮುಕ್ಕಾಗದೆ ಕಾಯಬೇಕೆಂದರೆ
ಒಳಗಿನ ಹೊರಗಿನ
ಯುದ್ಧ ನಿಲ್ಲಬೇಕಿದೆ
ಆಗ
ಆರಿಸಬಹುದು ಈ ಕಿಚ್ಚು






0 Comments