ಸಾಯಿ ಸಂಗೀತ ವಿದ್ಯಾಲಯದ ವತಿಯಿಂದ ಇಂದು ಇಡೀ ದಿನ ರಘುವನಹಳ್ಳಿಯ ನಾದಶ್ರೀ ಆರ್ಟ್ ಸ್ಪೇಸ್‌ನಲ್ಲಿ ಹತ್ತನೇ ವರ್ಷದ ಗುರುಪೂರ್ಣಿಮೆ ಸಂಭ್ರಮ, ಪಂ. ರಂಗನಾಥ ಹೆಗಡೆ ಶೀಗೇಹಳ್ಳಿ ಸಂಸ್ಮರಣಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಸಂಜೆ ೭.೩೦ರ ತನಕ ವಿದ್ಯಾಲಯದ ಪ್ರಾಚಾರ್ಯ ಪಂ. ಎಂ.ಪಿ. ಹೆಗಡೆ ಪಡಿಗೆರೆ ಅವರ ಶಿಷ್ಯರಿಂದ ಹಿಂದೂಸ್ತಾನಿ ಗಾಯನ ಜರುಗಲಿದೆ. ಸಂ. ೭.೩೦ಕ್ಕೆ ಯುವ ಗಾಯಕ ಧನಂಜಯ ಹೆಗಡೆ ಅವರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ. ಕಿರುತೆರೆಯ ಖ್ಯಾತ ನಿರ್ದೇಶಕ, ಲೇಖಕ ಬ.ಲ. ಸುರೇಶ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ನಂತರ ಧನಂಜಯ ಹೆಗಡೆ ಹಾಗೂ ಎಂ.ಪಿ. ಹೆಗಡೆ ಅವರ ಗಾಯನ ಕಛೇರಿಗಳು ನಡೆಯಲಿವೆ.







0 Comments