-ಡಾ ರವಿಶಂಕರ್ ಎ ಕೆ
ಯುದ್ಧ ಮುಗಿಯುವುದಿಲ್ಲ
ದೇಶವೆಂದರೆ
ಭಯವಾಗುತ್ತದೆ.
ಯುದ್ಧಗಳಿಗೆ ಕಾರಣವಾಗಿ
ಯುದ್ಧಗಳನ್ನೇ ಕಾರಣಮಾಡಿ
ರಾಜಕೀಯವೋ, ಅರ್ಥಜ್ಞಾನವೋ
ವಿನಾಶದ ಲಕ್ಷಣವಿರುವ
ಈ ಅಭಿವೃದ್ಧಿಯು
ಯಾರಿಗೆ ಬೇಕು ಹೇಳಿ?
ವಿಶ್ವ ಈಗ ಉರಿಯುವ ಉಂಡೆ
ಸುಟ್ಟು ಬೂದಿಯಾಗಿ
ಇತಿಹಾಸವಾದ ಭವಿಷ್ಯವು
ಎಲ್ಲ ಇದ್ದವರನ್ನೂ ಅನಾಥರಾಗಿಸಿದೆ.
ಕ್ಷಣದಲ್ಲಿಯೇ ಸುಟ್ಟ
ಗಗನಚುಂಬಿಗಳಲ್ಲಿ
ಬಾಡಿಗೆಯೋ, ಸ್ವಂತವೋ
ಸಾಲವೋ ಶೂಲವೋ
ಅನ್ನದ ದುಡಿಮೆಯೋ
ಕೋಟಿಕನಸುಗಳೆಲ್ಲಾ
ಮಿಂಚಿನಂತೆ ಮರೆಯಾದ
ಈ ನೋವುಗಳಿಗೆ ‘ಯುದ್ಧ’ ಉತ್ತರಿಸಬಹುದೇ?
ಸೇಡು, ಪ್ರತಿಕಾರ, ಬಲಾಬಲಗಳ
ಹಿಂಸೆಯ ಚರಿತ್ರೆಯನ್ನು ಓದಿ
ಶಾಂತಿಯ ಅರ್ಥಗಳನ್ನು ಕಲಿತ
ದೇಶಗಳೇ ನೀವು ರಕ್ತಕ್ರಾಂತಿ
ಹಾಡಿದರೆ, ದುಡಿವನೆದೆಯ
ಮಿಡಿತಕ್ಕೆ, ಹುಟ್ಟು ಸಾವುಗಳ ಲೆಕ್ಕವುಂಟೆ!
ಯುದ್ಧ ಬೇಕಿಲ್ಲ ನಮಗೆ..
ಈಗಾಗಲೇ ನೋವಿನಲ್ಲೆ
ಬೇಯುತ್ತಿದ್ದೇವೆ.
ಅನ್ನವಿಲ್ಲದೆ, ಶಿಕ್ಷಣವಿಲ್ಲದೆ
ಆರೋಗ್ಯವಿಲ್ಲದೆ ಈ ವ್ಯವಹಾರ
ಲೋಕದಲ್ಲಿ ಈಗಾಗಲೇ
ಶ್ರೀಸಾಮಾನ್ಯರು ಸತ್ತಿದ್ದಾರೆ.
ಈಗ ಹೇಳಿ,
ಇದೆಲ್ಲಾ ಸಾಧ್ಯವೇ!
ನಿಜ ತಾನೇ…
ಯುದ್ಧ ಮುಗಿಯುವುದಿಲ್ಲ.

ಹೌದು ಸರ್.
ಇಂದು ನಮಗೆ ಬೇಕಿರುವುದು ಯುದ್ಧವಲ್ಲ, ಶಾಂತಿ.
ಈ ಕವಿತೆಯನ್ನು ಓದಿದಾಗ ಮನಸ್ಸಿಗೆ ಮೊದಲು ತಟ್ಟುವುದು ಅದರಲ್ಲಿರುವ ಹತಾಶೆ ಮತ್ತು ಸತ್ಯ…
ಕವಿತೆಯ ಸಾಲುಗಳು ಇಂದಿನ ಜಾಗತಿಕ ರಾಜಕೀಯದ ಮುಖವಾಡವನ್ನು ಕಳಚುವಲ್ಲಿ ಗೆದ್ದಿದೆ. “ಯುದ್ಧ ಮುಗಿಯುವುದಿಲ್ಲ” ಎಂಬ ಸತ್ಯವು ಒಂದು ಎಚ್ಚರಿಕೆಯ ಗಂಟೆಯಂತೆ ನಮ್ಮ ಕಿವಿಯಲ್ಲಿ ಮೊಳಗುತ್ತಲೇ ಇರುವ ಈ ಸಮಯದಲ್ಲಿ ಈ ಕವಿತೆ ಅತ್ಯಂತ ಅವಶ್ಯಕ…
ಒಟ್ಟಾರೆ ಮನಕಲಕುವ ಸಾಲುಗಳು ಸರ್..
ಯುದ್ಧದ ಭೀಕರತೆ ಮತ್ತು ರಾಜಕೀಯ ಹಿತಾಸಕ್ತಿಗಳ ನಡುವೆ ನಲುಗುವ ಸಾಮಾನ್ಯ ಮನುಷ್ಯನ ಅಸಹಾಯಕತೆಯನ್ನು ಈ ಕವಿತೆ ಅತ್ಯಂತ ಮಾರ್ಮಿಕವಾಗಿ ಚಿತ್ರಿಸಿದೆ.
ತುಂಬಾ ಚೆನ್ನಾಗಿ ಮೂಡಿಬಂದಿದೆ ಈ ಕವಿತೆ.
ಕವಿತೆ ವರ್ತಮಾನದ ಜೀವಂತ ಉಸಿರಾಟವಾಗಿದೆ. ಪ್ರತಿಯೊಬ್ಬರ ತಲ್ಲಣವೇ ಈ ಕವಿತೆ ಎನಿಸುತ್ತದೆ.
ಸುಂದರ ಕವಿತೆ….. ಯುದ್ಧದ ಕುರಿತು ವಿಶ್ಲೇಷಣೆ ಅದ್ಭುತವಾಗಿದೆ..
ಯುದ್ಧ ಮುಗಿಯುತ್ತದೆ.. ಆರಂಭಿಸಿದವರು ಕೊನೆಯಾದಾಗ!
ಅದ್ಬುತ ಕವಿತೆ, ಪ್ರತಿ ಸಾಲು ಸಹ ವಾಸ್ತವಕ್ಕೆ ಕನ್ನಡಿ ಹಿಡಿದಂತಿದೆ. ಯಾವುದೋ ಕಾರಣಕ್ಕೆ ರಾಜಕೀಯಗಳು ಮಾಡುವ ಯುದ್ಧದಿಂದ ದುಡಿಯುವ, ಹಸಿವಿನ ಹಪಾಹಪಿಯಿಂದ ತಮ್ಮ ನೆಲವನ್ನು ಬಿಟ್ಟು ಬೇರೆ ನೆಲಕ್ಕೆ ಹೋಗುವ ಪ್ರತಿಯೊಬ್ಬರ ನೋವನ್ನು ೬ ಪ್ಯಾರಾಗಳಲ್ಲಿ ಹಿಡಿದಿರುವುದು ವಿಶೇಷವೇ ಸರಿ.
ನೆನ್ನೆ ಪಾಠ ಮಾಡುವಾಗ ಮೋಟು ಮರದ ಮೇಲೊಂದು ಮುದಿ ಗಿಳಿ ಕವಿತೆಯನ್ನು ವಿದ್ಯಾರ್ಥಿಗಳಿಗೆ ಅರ್ಥೈಸುವಾಗ ನಿಮ್ಮ ಅನಿಸಿಕೆಗಳನ್ನು ಸಹ ಮಕ್ಕಳಿಗೆ ಹೇಳಿದ್ದೇನೆ ಇದು ಎಲ್ಲರ ಮನಸ್ಸು ಸಹ ಹೌದು ಅಲ್ಲವೇ ಸರ್ ಯುದ್ಧ ಯಾರಿಗೆ ಬೇಕು ಹೇಳಜ್ಜ ಈ ತಲೆಯೊಡು ಯಾರದು ಹೇಳಜ್ಜ ಬಿಎಂಶ್ರೀ ಅವರ ಯುದ್ಧ ಕವಿತೆ ನಮಗೆ ಜ್ಞಾಪಕಕ್ಕೆ ಬರುತ್ತದೆ
ಈ ಕವಿತೆಯನ್ನು ಓದಿದಾಗ ಮನಸ್ಸಿಗೆ ಮೊದಲು ತಟ್ಟುವುದು ಅದರಲ್ಲಿರುವ ಹತಾಶೆ ಮತ್ತು ಸತ್ಯ…
ಕವಿತೆಯ ಸಾಲುಗಳು ಇಂದಿನ ಜಾಗತಿಕ ರಾಜಕೀಯದ ಮುಖವಾಡವನ್ನು ಕಳಚುವಲ್ಲಿ ಗೆದ್ದಿದೆ. “ಯುದ್ಧ ಮುಗಿಯುವುದಿಲ್ಲ” ಎಂಬ ಸತ್ಯವು ಒಂದು ಎಚ್ಚರಿಕೆಯ ಗಂಟೆಯಂತೆ ನಮ್ಮ ಕಿವಿಯಲ್ಲಿ ಮೊಳಗುತ್ತಲೇ ಇರುವ ಈ ಸಮಯದಲ್ಲಿ ಈ ಕವಿತೆ ಅತ್ಯಂತ ಅವಶ್ಯಕ…
ಒಟ್ಟಾರೆ ಮನಕಲಕುವ ಸಾಲುಗಳು ಸರ್..
ಅಭಿವೃದ್ಧಿಯ ವಿನಾಶದಲ್ಲಿ
ರಕ್ತಕ್ರಾಂತಿಯ ಹಾಡೊಂದಿಗೆ
ಕೋಟಿಕನಸುಗಳ ಮಿಂಚಿನಂತೆ ಸುಟ್ಟ ಕ್ಷಣ,
ವಿಶ್ವವೇ ಸೂರ್ಯನಂತೆ ಬಿಸಿ ಉಂಡೆಯಾದದ್ದು
ಯುದ್ಧದ ನೋಟವನ್ನು ತೆರೆದಿಡುತ್ತದೆ.
ಹೌದು ಇವೆಲ್ಲ ಸಮರಿಗರ ಕಣ್ಣು ಕುಕ್ಕಲಿ, ಯುದ್ಧದ ಹೊಸ್ತಿಲಲ್ಲೆ ಇರುವವರ ಬೆನ್ನು ಸುಡಲಿ. ದುಡಿವವರ ಶ್ರೀಸಾಮಾನ್ಯರ ಜೀವಕ್ಕೂ ಜೀವನಕ್ಕೂ ಕಿಂಚಿತ್ತಾದರೂ ಬೆಲೆ ಬರಲಿ. ಒಟ್ಟಿನಲ್ಲಿ ಯುದ್ಧ ನಿಲ್ಲುವಂತಾಗಲಿ.
ಪ್ರಸ್ತುತ ಜಗವೇ ಜಗಳದಲ್ಲಿ ಮುಳುಗಿರುವಾಗ ಈ ಕವಿತೆ ಓದುಗರಲ್ಲಿ ಹೊಸತೊಂದು ಆಶಯವನ್ನು ಬಿತ್ತುವಲ್ಲಿ ಯಶಸ್ವಿಯಾಗಿದೆ.
ಹೌದು ಯುದ್ಧ ಮುಗಿಯುವುದೇ ಇಲ್ಲ. ಮುಗಿದಾಗ ನಮ್ಮದ್ಯಾವುದೂ ಇರುವುದಿಲ್ಲ.
ಅಭಿವೃದ್ಧಿಯ ವಿನಾಶದಲ್ಲಿ
ರಕ್ತಕ್ರಾಂತಿಯ ಹಾಡೊಂದಿಗೆ
ಕೋಟಿಕನಸುಗಳ ಮಿಂಚಿನಂತೆ ಸುಟ್ಟ ಕ್ಷಣ,
ವಿಶ್ವವೇ ಸೂರ್ಯನಂತೆ ಬಿಸಿ ಉಂಡೆಯಾದದ್ದು
ಯುದ್ಧದ ನೋಟವನ್ನು ತೆರೆದಿಡುತ್ತದೆ.
ಹೌದು ಇವೆಲ್ಲ ಸಮರಿಗರ ಕಣ್ಣು ಕುಕ್ಕಲಿ, ಯುದ್ಧದ ಹೊಸ್ತಿಲಲ್ಲೆ ಇರುವವರ ಬೆನ್ನು ಸುಡಲಿ. ದುಡಿವವರ ಶ್ರೀಸಾಮಾನ್ಯರ ಜೀವಕ್ಕೂ ಜೀವನಕ್ಕೂ ಕಿಂಚಿತ್ತಾದರೂ ಬೆಲೆ ಬರಲಿ. ಒಟ್ಟಿನಲ್ಲಿ ಯುದ್ಧ ನಿಲ್ಲುವಂತಾಗಲಿ.
ಪ್ರಸ್ತುತ ಜಗವೇ ಜಗಳದಲ್ಲಿ ಮುಳುಗಿರುವಾಗ ಈ ಕವಿತೆ ಓದುಗರಲ್ಲಿ ಹೊಸತೊಂದು ಆಶಯವನ್ನು ಬಿತ್ತುವಲ್ಲಿ ಯಶಸ್ವಿಯಾಗಿದೆ.
ಹೌದು ಯುದ್ಧ ಮುಗಿಯುವುದೇ ಇಲ್ಲ. ಮುಗಿದಾಗ ನಮ್ಮದ್ಯಾವುದೂ ಇರುವುದಿಲ್ಲ