
ಮೂರು ತಲೆಮಾರು
ಒಂದು ತಾನೂ ಸ್ವಾವಲಂಬಿಯಾಗಿ, ಸಮಾಜದಲ್ಲಿರುವ ಕಟ್ಟಕಡೆಯ ಹೆಣ್ಣುಮಗಳೂ ಸ್ವಾವಲಂಬಿಯಾಗಿಸುವಂತೆ ಶ್ರಮಿಸಿದ್ದು
ಇನ್ನೊಂದು ಮಾಧ್ಯಮದಲ್ಲಿದ್ದೂ ತನ್ನೊಳಗಿನ ಮಾತುಗಳನ್ನೂ ಮಿದುವಾಗಿಸಿಕೊಂಡಿದ್ದು ಮತ್ತೊಂದು ತನ್ನೊಳಗಿನ ಸಂಘರ್ಷವನ್ನು ಪದಗಳಾಗಿ ಹೊಸೆದಿದ್ದು ಮೂರು ತಲೆಮಾರು, ಅನುಭವಿಸಿದ ಸವಾಲುಗಳೂ ಬೇರೆ, ಬದುಕುತ್ತಿರುವ ಸಮಾಜವೂ ಬೇರೆ. ಈ ಬೇರೆಬೇರೆಯಾಗಿರುವ ಎಲ್ಲರ ಬದುಕಿನ ಬೇರು ಬರೆಹ ಮಾತ್ರ.
ಎಲ್ಲಾರೂ ಭಾನುವಾರ ಐದನೆಯ ಏಪ್ರಿಲ್ ಬಿಡುವು ಮಾಡ್ಕೊರಿ, ನಮ್ಕೂಡ ನ್ಯಾರಿ ಮಾಡ್ರಿ. ಮೂರು ಪುಸ್ತಕಗಳನ್ನು ನಮ್ಮ ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ಟರು ಬಿಡುಗಡೆ ಮಾಡ್ತಾರ. ಮೂರು ತಲೆಮಾರಿನ ಕತೆಗಳನ್ನು ನನ್ನ ಸ್ನೇಹಿತ ರವಿಶಂಕರ್ ಮಾತಾಡಿಸಿ, ಯಾವ ಪದದ ಹದ ಹೆಂಗ ಮೂಡಿತು ಅಂತ ನಿಮ್ಮುಂದ ತೆರದಿಡುಹಂಗ ಮಾಡ್ತಾರ.
ಬರ್‍ರಿ, ಬಂದು ನಮ್ಮ ಸಂತೋಷದೊಳಗ ಪಾಲ್ಗೊಳ್ರಿ. ನೀವಿದ್ರ, ನಮ್ಮನ್ನ ಕೇಳಾಕ ಒಂದಷ್ಟು ಮಂದಿ ಅದಾರ ಅನ್ನುವ ಸಮಾಧಾನ ಅಂತೂ ಸಿಗ್ತದ. ಎಲ್ಲಾರಿಗೂ ವೈಯಕ್ತಿಕವಾಗಿ ಕರಿಯಾಕ ಆಗವಲ್ದು ಅನ್ನುವ ದುಗುಡ ಅಂತೂ ಅದ. ಆದ್ರ ಎಲ್ಲಾರೂ ಬರ್ತೀರಿ ಅನ್ನುವ ಭರವಸೆಯಿಂದ ನಿಮಗೆಲ್ಲ ಹಿಂಗ ಕರೀತೀವಿ.
ಭಾರತಿ ವಸ್ತ್ರದ
ರಶ್ಮಿ ಎಸ್
ಅರ್ನಿ ಆರ್. ತಿಳಿ






ಅದ್ಭುತ, ಅಮೋಘ , ಅತ್ಯಂತ ಅಪೂರ್ವ.
ಶುಭವಾಗಲಿ