ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾವಾಗಲು ರೋ ಅನ್ನುತ್ತದೆ..

ಸಾವಿತ್ರಿ ಢವಳೇಶ್ವರ

ಹಾಳು ಮಳೆ,
ಯಾವಾಗಲು ರೋ ಅನ್ನುತ್ತದೆ
ಮೋಡಗಳ ಘರ್ಷಣೆಗೆ ಕಣ್ಣು ತುಂಬಿ
ಅನುಮತಿ ಇಲ್ಲದ ಭೋರ್ಗರೆಯುತ್ತದೆ.
ಮನವು ಹಾಗೇ,
ಒರಟು ಮಾತಿನ ಸಿಡಿಲಿಗೆ
ಮನವೇ ನುಚ್ಚುನೂರಾಗಿ
ಕಣ್ಣೀರೆಂಬ ಮಳೆ ಹನಿ
ಕಣ್ಣಿನ ಅನುಮತಿಯಿಲ್ಲದೆ ಸೋತು ಕೆಳಗಿಳಿಯುತ್ತದೆ.
ಮಳೆಗೆ ನೆಲ ತಂಪಾಗಬಲ್ಲದು
ಕಣ್ಣೀರಿಗೆ ಕತ್ತಲೆ ಕೋಣೆಯ ನೆಲ ಹಸಿ
ಮಳೆ ಹನಿಗೆ ಕೆಲವರು ಕುಣಿದರೆ ಇನ್ನು ಕೆಲವರು ಕೊಡೆ ಹಿಡಿದರು
ಆದರೆ, ಕೆನ್ನೆಗೆ ಕಣ್ಣೀರ ಒರೆಸುವ ಕೈಗಳ ಕಾತುರ
ಮೋಡಗಳ ಜಗಳಕ್ಕೆ ಮಳೆ ಹನಿ ಬಂದು ಭೂಮಿಗೆ ಚಾಡಿಹೇಳುತ್ತಿದೆ.
ಕಣ್ಣೀರಿಗೆ ಯಾರು ಗತಿ…

ತುಂಬಾ ಸರಳ ಆಕೆ
ಹೆಚ್ಚು ಬಣ್ಣಗಳಿಲ್ಲದ ಸೀರೆ
ಕಪ್ಪು ಬಳಿಯದೆ ಬಿಳುಪಾಗಿ
ಬಿಟ್ಟ ಕೂದಲು

ದಾಟಿಬಂದ ಹಾದಿಗಳ ಕತೆ
ಹೇಳುವ ಮುಖದ ಸುಕ್ಕು
ಪೆಟ್ಟು ತಿಂದು ಬರಡಾದ ಕಣ್ಣು
ಒತ್ತಡಗಳಿಗೆ ಕಲ್ಲಾದ ಹೃದಯ
ಬಣ್ಣದ ಬಳೆಗಳ ಆಸೆಯ ಕೈಗಳು
ತೊಟ್ಟಿದ್ದು ಬಂಧನದ ಬೇಡಿ

ಒಂದೇ ಬಣ್ಣದ ಹಣೆಯ ಕುಂಕುಮ
ಅದು ಕೂಡ ಎಲ್ಲೋ ಮಾಡಿಕೊಂಡ ಗಾಯದ
ರಕ್ತ ಹಣೆಗೆ ಹತ್ತಿದ ಹಾಗೆ
ಹಿಂಸೆ, ಒರಟು ಮಾತಿನ ಪೆಟ್ಟಿಗೆ ಕಿವಿಯಿಂದ
ಚಿಲ್ಲನೆ ಹರಿದಿದ್ದು, ಘಾಸಿಗೊಂಡ ಹೃದಯ ಒಸರಿದ್ದು

ಛೇ.. ದೂರ ಹಾರಿಹೋಗಬಹುದಿತ್ತು
ಮನುಷ್ಯ ಪ್ರಾಣಿಗೂ ರೆಕ್ಕೆ ಇದ್ದಿದ್ದರೆ!

‍ಲೇಖಕರು avadhi

11 August, 2018

3 Comments

  1. chandrashekar p

    ನೈಸ್

  2. Anagha LH

    Superb!

  3. Kaligananath Gudadur

    superb poem on a woman (especially mother)

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading