ನೆಮ್ಮದಿಗೆ ಹಾಕಿದ ಅರ್ಜಿ

ನಾಗರೇಖಾ ಗಾಂವಕರ

ನೆಮ್ಮದಿಗೆ ಅವಳು ಹಾಕಿದ
ಅರ್ಜಿಗಳೆಲ್ಲಾ ವಜಾಗೊಂಡಿದೆಯಂತೆ.
ವಿನಂತಿ ಪತ್ರದ ಒಕ್ಕಣಿಕೆ
ಒಂದು ಚೂರು ಸರಿಯಾಗಿಲ್ಲ,
ಎಲ್ಲಿಯೂ ಒಂದನ್ನು ಕಾಳಜಿಯಿಂದ
ಪೂರ್ಣಗೊಳಿಸಿಲ್ಲ,
ಚಿತ್ತುಕಾಟು, ತಿದ್ದುಪಡಿಗಳಿದ್ದರೆ
ಪರಿಗಣಿಸಲಾಗುವುದಿಲ್ಲ
-ಎಂಬುದು ತಲಾಟಿಯ ತಕರಾರು.

ಪತ್ರದಲ್ಲಷ್ಟೇ ಪ್ರಮಾದಗೊಂಡಿದೆ ಎಂದರೆ
ಅದು ಸುಳ್ಳೇ ಸುಳ್ಳು:
ಯಾಕೆಂದರೆ ಬದುಕಿನ ಪಾತ್ರಗಳೆಲ್ಲ
ಅದಲು ಬದಲಾಗಿವೆ. ಪಾತ್ರದ ಚಹರೆಗಳು ಕೂಡ
ಗುರುತೇ ಸಿಗದಷ್ಟು ಮಾರ್ಪಾಟಾಗಿವೆ.
ಅದರಲ್ಲಿ ಒಂದು ಅವಳದೂ..

ಅಂದೆಲ್ಲಾ ತಂಬೆಲರಿಗೆ ತೀಡಿಕೊಂಡ
ಎಳೆತಳಿರಂತೆ- ಮೋಹಕತೆಗೆ ಮರುಳಾಗಿ,
ಪರಸ್ಪರ ಮುಟ್ಟಗೊಡದೇ,
ಪರಿಪರಿಯ ಭಾವದೋಕುಳಿಯಾಗುತ್ತ
ಹೊಂಬಾಳಿನ ಹಂಬಲವ ಮೈತುಂಬಾ ಹೊದ್ದು,
ಆ ತುಡಿತದಲ್ಲೇ ತವಕಿಸುತ್ತ
ಕೂಗಳತೆಗೆ ಸಿಗದವನ ದಾರಿ ಕಾಯುತ್ತ-
ಇಲ್ಲ ಮುಟ್ಟಲೇ ಇಲ್ಲ ಕೂಗು,
ಹಾಗಾಗೇ ಪಾತ್ರ ಪಲ್ಲಟ.

ಆ ಪ್ರೀತಿಯ ಬೇಲಿ ಕೂಡ
ಪರಭಾರೆ ವಹಿಸಿಕೊಂಡಿದೆ.
ಹಾಗಾಗೇ ಈಗ ವಾಸ್ತವದ ನೆರಳಲ್ಲಿ
ಅರ್ಜಿಯ ಮಂಜೂರಿ ಮಾಡಿಸಿಕೊಳ್ಳುವ
ತುರಾತುರಿಯಲ್ಲಿದ್ದಾಳೆ ಆಕೆ.
ನಾಲ್ಕಾರು ಬಾರಿ ಅಲೆದಾಡಿ
ಅವರಿವರ ಬುದ್ದಿವಾದಕ್ಕೆ ಕಿವಿಕೊಟ್ಟು
ಅಸಂಬದ್ಧವನ್ನೆಲ್ಲಾ ನಿವಾರಿಸಿ,
ತಿದ್ದುಪಡಿಗಳನ್ನೆಲ್ಲಾ ಕಾಣದಂತೆ
ಬಿಳಿ ಲೇಪನ ಬಳಿದು, ಮೇಲೆ ನಾಜೂಕಾಗಿ
ಹೊಸ ಅಕ್ಷರ ಮೂಡಿಸುತ್ತಿದ್ದಾಳೆ ಆಕೆ.

‍ಲೇಖಕರು avadhi

August 11, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Alagundi Andanayya

    ಸಹಜ ಸುಂದರ, ಬಹಳ ಸರಳ,ವಿರಳ ಕರುಳ ಕವಿತೆ. ನಿಮ್ಮ ಅಭಿವ್ಯಕ್ತಿ ವಿನ್ಯಾಸದ ವಿಕಸನಕೆ ನನ್ನ ಮನಸು ಮುದಗೊಂಡಿತು. ಅಭಿಮಾನದ ಅಭಿನಂದನೆಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: