ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾರು ಹಿತವರು…

-ಬಸವಣ್ಣೆಪ್ಪ ಕಂಬಾರ

ಖ್ಯಾತ ಬಹುಭಾಷಾ ಚಿತ್ರನಟ ದ್ವಾರಕನಾಥ ದಿನಪತ್ರಿಕೆಯಲ್ಲಿ ತನ್ನ ಮುಂದಿನ ಚಿತ್ರದ ಕುರಿತು ಫಿಲ್ಮಬೀಟ್ ಅಂಕಣದಲ್ಲಿ ಡಾ.ಸ್ವಾಮಿಯವರು ಬರೆದಿರುವ ಲೇಖನ ಓದುತ್ತಿರುವಾಗ ಸೆಕ್ರೆಟರಿ ಸೆಲ್ವಂ ಎರಡು ಸಲ ಬಾಗಿಲ ತನಕ ಬಂದು ಇಣುಕಿ ನೋಡಿ ಹಿಂತಿರುಗಿದನ್ನು ಈತ ಗಮನಿಸದ. ಪತ್ರಿಕೆ ಓದುವದನ್ನು ಕ್ಷಣ ನಿಲ್ಲಿಸಿ ಪಕ್ಕಕ್ಕೆ ಇಟ್ಟು ಕೈ ಮೇಲೆತ್ತಿ ಆಕಳಿಸಿ ಮೈ ಒಡಮುರಿದ ಕ್ಷಣಕೆ ಕಣ್ಣಲ್ಲಿ ನೀರು ಬಂತು. ಅಷ್ಟರಲ್ಲಿ ಆಕಡೆಗೆ ಹೋಗಿದ್ದ ಸೆಲ್ವಂ ಹೊರಗಡೆ ಮತ್ತೇ ಬಂದು ಕಾಯುತ್ತಿದ್ದ. ಆತ ಎನೊ ಹೇಳಲು ಕಾಯುತ್ತಿದ್ದಾನೆ ಅನಿಸಿತು ದ್ವಾರಕಕನಾಥ ಎದ್ದು ಹೋಗಿ ಟಿ.ವಿ ಹಾಕಿದ. ಸೆಲ್ವ ಟಿ.ವಿ ಸದ್ದು ಕೇಳಿ ಒಳ ಬಂದು “ ಸರ್ ಸಮಾಜ ಸೇವೆಕ ನೃಪತುಂಗ ಅವರು ನಿಮ್ಮನ್ನು ಕಾಣಲು ಬಂದಿದ್ದಾರೆ ಹೊರಗಡೆ ಕೂಡ್ರಿಸಿದ್ದೇನೆ ಏನು ಹೇಳಲಿ ಸರ್..? ಅಂತAದು ಅವನ ಉತ್ತರಕ್ಕೆ ಕಾಯುತ ನಿಂತ.

“ಸರಿ ಹಾಲಲಿ ಕೂಡ್ರಿಸು ಈಗ ಬಂದೆ ಅಂತ ಹೇಳಿ ಒಳ ಹೋದ. ಸೆಲ್ವಂ ಹೊರಗಡೆ ಹೋಗಿ ನೃಪತುಂಗ ಅವರನ್ನು ಕರೆದು ಹಾಲಲಿ ಕೂಡ್ರಿಸಿ ಅವನಿಗೆ ಟೀ ವ್ಯವಸ್ಥ ಮಾಡಲು ಅತ್ತ ಹೋದ. ಇತ್ತ ಮುಖ ಒರೆಸಿಕೊಳ್ಳುತ ಬಂದ ದ್ವಾರಕನಾಥ ನೃಪತುಂಗ ಅವರ ಬಳಿ ಬಂದು ಕುಳಿತ. ಇಬ್ಬರು ನಮಸ್ಕಾರ ವಿನಿಮಯ ಮಾಡಿಕೊಂಡರು. ಸೆಲ್ವಂ ತಂದ ಚಹಾ ಸ್ವೀಕರಿಸಿದ ಬಳಿಕ,

“ಮೊನ್ನೆ ಸಮಾಜಸೇವಾ ರತ್ನ ಪ್ರಶಸ್ತಿ ಸ್ವೀಕರಿಸಲು ನೀವೇಕೆ ಬರಲಿಲ್ಲಾ..? ಸರ್ಕಾರದವರು ಈ ಪ್ರಶಸ್ತಿಯನ್ನು ನನ್ನಿಂದಲೇ ಕೊಡಿಸಬೇಕು ಅಂತ ಇಲಾಖೆಯ ಮಂತ್ರಿಗಳು ತುಂಬಾ ರಿಕ್ವೆಸ್ಟ್ ಮಾಡಿಕೊಂಡರು ಮೇಲಾಗಿ ಸಿ.ಎಂ ಕೂಡ ಪೋನ ಮಾಡಿದ್ದರು ಹಾಗಾಗಿ ಇಲ್ಲ ಅನ್ನೊಕ ಆಗಲಿಲ್ಲ. ಎಕ್ಚುವಲ್ಲಾಗಿ ನಾನು ಅವತ್ತು ಸಾಂಗ್ ಶೂಟಿಂಗ ಸಲುವಾಗಿ ರಾಜಸ್ಥಾನಕ್ಕೆ ಹೋಗಬೇಕಿತ್ತು ಈ ಕಾರ್ಯಕ್ರಮಕ್ಕಾಗಿ ಕ್ಯಾನ್ಸಲ್ ಮಾಡಿಕೊಂಡಿದ್ದೆ ಡೇಟ್ಸಗಳಿಲ್ಲದೆ ಪ್ರೊಡ್ಯುಸರಗಳು ಒದ್ದಾಡತಿದ್ದಾರೆ ಅವತ್ತ ನೀವ ಕೂಡ ಹಾಗೇ ಮಾಡಿದಿರಿ ಜೊತೆಗೆ ನಿಮ್ಮನ್ನು ನೋಡುವ ಆಸೆ ನನಗೂ ಇತ್ತು… ಆದರೆ ಅವತ್ತು ನೀವೆ ಬರಲಿಲ್ಲ.. ಯಾಕೆ..ಎನಾಯ್ತು..? ಧ್ವನಿಯಲ್ಲಿ ತುಸು ಗಡಸುತನ ಬೆರೆಸುತ ಕೇಳಿದ ದ್ವಾರಕನಾಥ. ಯಾಕೆಂದರೆ ಪ್ರಶಸ್ತಿ ಸ್ವೀಕರಿಸುವವರು ಬರದೇ ಹೊದರೆ ನೀಡಲೆಂದು ಬಂದವರಿಗೆ ಆಗುವ ಮುಜುಗುರ ನಿಮಗೆ ಗೊತ್ತಿಲ್ಲ. ಒಂತರಾ ಅವಮಾನ ಅಂದುಕೊ೦ಡರು ತಪ್ಪಲ್ಲ ಅಲ್ವಾ..? ನಿರ್ಧಾರದ ಧ್ವನಿಯಲ್ಲಿಯೇ ಹೇಳಿದ. ನೃಪತುಂಗನಿಗೆ ಚಹಾ ಕಹಿಯಾಯ್ತು. ಮುಖ ಮೇಲಕ್ಕೆತ್ತದೆ ಸುಮ್ಮನಾದ. ಆದರೆ ಇವತ್ತು ಇವರೇ ಹುಡುಕಿಕೊಂಡು ಬಂದಿರುವುದು ದ್ವಾರಕನಾಥನ ಕೋಪಕ್ಕೆ ತುಸು ಎಣ್ಣೆ ಸುರುವಿದಂಗಾಗಿತ್ತು. ಒಳಗಡೆ ಧುಸುಮುಸ್ಸು ಜೋರಾಗಿಯೇ ಇತ್ತು. ಅಪರಾದಿ ಮನೋಭಾವ ಹೊತ್ತು ಕುಳಿತಿದ್ದ ನೃಪತುಂಗ ನಿಧಾನಕೆ “ಕ್ಷಮಿಸಿ ಸರ್ ಎನೋ ಫ್ಯಾಮಿಲಿ ಪ್ರಾಬ್ಲಮ್ಮು ಇತ್ತು ಸರ್ ನಿಮಗಾಗಲಿ..ಸರ್ಕಾರಕ್ಕಾಗಲಿ ನಿರಾಸೆ ಅವಮಾನ ಮಾಡಬೇಕಂತಲ್ಲ ಸರ್ ಎಂದು ಕೈ ಕೈ ಹೊಸಕಿಕೊಂಡ. ದ್ವಾರಕನಾಥನಿಗೆ ತಾನೊಬ್ಬ ದೊಡ್ಡ ನಟ ಎಂಬ ಅಹಂ ಯಾಕೋ ಎನೋ ಜಾಗೃತವಾಗಿಬಿಟ್ಟಿತು.

“ಫ್ಯಾಮಿಲಿ ಪ್ರಾಬ್ಲಮ್ಮು ಎಲ್ಲರಿಗೂ ಇರುತ್ತಲ್ವಾ ನೃಪತುಂಗ ಅವರೇ..? ಇಂತ ಕಾರ್ಯಕ್ರಮಗಳು ಮತ್ತೇ ಮತ್ತೇ ಆಗತಾವ ನೀವೆ ಹೇಳಿ..? ಆಯೋಜಕರ, ವಿತರಕರ, ಕಾರ್ಯಕರ್ತರ ಸಮಯ, ಸೇವೆ ಹಣ ಎಲ್ಲವು ವ್ಯರ್ಥ ಆಯ್ತು ತಾನೆ..? ಯಾರು ಕೆಲಸವಿಲ್ಲದೆ ಇರಲ್ಲ..ಅವರವರ ಜವಾಬ್ದಾರಿಗಳು ಅವರ ಹೆಗಲೇರಿರುತ್ತವೆ. ಅದು ನಿಮಗು ಗೊತ್ತು. ಇವತ್ತಿನ ಕಾಲದಲ್ಲಿ ದುಡ್ಡು ಹಿಡಿದುಕೊಂಡು ರೆಕಮೆಂಡ ಮಾಡಿಸಿದರು ಪ್ರಶಸ್ತಿಗಳು ಸಿಗೋದು ಕಠಿಣ. ಅಂತದರಲ್ಲಿ ಸರ್ಕಾರವೇ ನಿಮ್ಮ ಸೇವೆಯನ್ನ ಗುರುತಿಸಿ ಗೌರವಿಸ್ತಿವಿ ಅಂದಾಗ ದುರಂಕಾರ ಮೆರೆಯೊದು ತಪ್ಪಾಲ್ವಾ..? ಖಾರವಾಗಿಯೆ ನುಡಿದ. ಘಟನೆ ನೆನಪಾದ ತಕ್ಷಣ ಕೋಪಕ್ಕೆ ಇನ್ನಷ್ಟು ಬಲ ಬಂತು. ನೃಪತುಂಗ ತಾನಾಗಿಯೆ ನನ್ನ ಮನೆಗೆ ಬಂದಿರುವದರಿ೦ದ ,ಮಿಡಿಯಾ ಪೇಪರನೊರು ಯಾರು ಇಲ್ಲದ ಕಾರಣ ಕೋಪ ಹೊರ ಹಾಕಲು ಒಳ್ಳೇ ಅವಕಾಶವಿದು ಎಂದುಕೊAಡ. ಆದರೆ ನೃಪತುಂಗ ಇಳಿದು ಹೋಗಿದ್ದ. ಅಪರಾಧ ಮನೋಭಾವ ಮುಖದಲ್ಲಿ ಎದ್ದುಕಾಣುತ್ತಿತ್ತು. ಮೌನವೊಂದೆ ಉತ್ತರವಾಗಿತ್ತು. ತುಸು ಸಮಯದ ಬಳಿಕ ಕೈ ತಿರಿವಿ ವಾಚ ನೋಡಿಕೊಂಡ..

“ ಹೇಳಿ ಈಗ ಏನಕ್ಕೆ ಬಂದಿದಿರಿ…? ಕೇಳಿದ.
“ಸರ್ ನಾನೊಂದು ವಿಕಲಾಂಗಚೇತನ ಮಕ್ಕಳ ಸಂಸ್ಥೆ ನಡೆಸ್ತಿನಿ ಅದು ತಮಗೂ ಕೂಡ ಗೊತ್ತು.
“ಹೌದು…
“ಸರ್ ಸ್ವಲ್ಪ ಸಹಾಯ ಕೆಳೋಕೆ ಬಂದಿದಿನಿ….
“ ಇಂತಾ ಸಂಸ್ಥೆ ಕಟ್ಟಿಕೊಂಡಿರೋರು ಸಹಾಯ ಕೇಳೋಕೆ ಅಲ್ಲೆದೆ ದಾನ ಕೊಡೊಕಾ ರ‍್ತಾರೆ ..? ಗೊತ್ತಿದೆ ಹೇಳ್ರಿ… ಎಂದು ಉದ್ದಟತನದಿಂದಲೇ ಗೊಣಗಿದ
“ಸರ್ ಕೈಕಾಲು ನೆಟ್ಟಗಿರೋರು ದುಡಿತಾರೆ, ಇಲ್ಲಾ ಭಿಕ್ಷೇಯಾದರು ಬೇಡಿ ತಿನ್ನುತಾರೆ ಆದರೆ ಕಣ್ಣು ಕಾಣದವರು, ನಡೆಯಲಾಗದ, ಬುದ್ದಿಮಾಂಧ್ಯ ಮಕ್ಕಳ ಪಾಲನೆ ಪೋಷಣೆ ಮಾಡುವ ಸಂಸ್ಥೆ ನನ್ನದು. ಸುಮಾರ ಹತ್ತು ವರ್ಷದಿಂದ ಅದನ್ನು ನಡೆಸ್ತಿದಿನಿ ಸರ್..

“ಉದ್ದೇಶ ಒಳ್ಳೇಯದೆ.. ಆದರೆ ಇದನ್ನೆಲ್ಲ ಬಿಟ್ಟು ನೀವ್ಯಾಕೆ..ಒಂದೊಳ್ಳೆ ಉದ್ಯೋಗ ಮಾಡಬಾರದು..?..ಯಾಕೆ ಈ ಸೆಲೆಬ್ರಿಟಿಗಳ ಹತ್ರಾ, ಬಿಜಿನೆಸಮೆನಗಳ ಹತ್ರಾ, ಹಲ್ಲುಗಿಂಜುತ್ತ ಸಹಾಯ ಕೇಳುತ್ತ ಇರಬೇಕು…ಅಂತ..? ತುಂಬಾ ಅಸಹ್ಯವಾಗಿ ಮಾತನಾಡತೊಡಗಿದ ದ್ವಾರಕನಾಥ. ಅವನ ಮಾತಿನ ಓಘ ಹೇಗಿದೆ ಎಂದು ಬಹುಶಾಃ ಅವನಿಗೆ ಅರಿವಿಲ್ಲದೆ ಮಾತಾಡತಿರಬಹುದೇನೊ ಅಂತ ನೃಪತುಂಗ ಅಂದುಕೊAಡ. ಆದರು ಮಾತಿನ ವರಸೆ ಬದಲಾದುದನ್ನು ಕಂಡು ನೋವು ತಿವಿಯುತ್ತಲೆ ಇತ್ತು.

“ ಇಂತ ಮಕ್ಕಳ ಪೊಷಣೆಗೆ ಸರ್ಕಾರ ಒಂದು ಇಲಾಖೆಯನ್ನೆ ಮಾಡಿದೆ, ಸಂಘ ಸಂಸ್ಥೆಗಳಿವೆ, ಎಮ್.ಎನ್.ಸಿ ಕಂಪನಿಗಳಿವೆ. ಇನ್ನೊಂದು ಗೊತ್ತಾ ನಿಮಗೆ ಇಂತ ಮಕ್ಕಳಿಗೆನು ಬರವೇ ನಮ್ಮ ದೇಶದಲ್ಲಿ…? ಅಂತ ಉಢಾಪೆಯಾಗಿ ಮಾತಾಡಿದಾಗ ಕೋಪ ಕುತ್ತಿಗೆ ತುಳಿಯುತ್ತಿದ್ದರು ಸಹಸಿಕೊಂಡ ನೃಪತುಂಗ.
“ ಇಲ್ಲ ಸರ್ ನಾನು ಯಾವತ್ತು.. ಈ ಮಕ್ಕಳ ಸಾಕೋಕೆ ಭಿಕ್ಷೇ ಬೇಡಿದವನಲ್ಲ ಸರ್

“ ಅಂದ್ರೇ ಮತ್ತೇ ಹೇಗೆ ಸಾಕತೀರಿ… ಕಳ್ಳತನಾ ಮಾಡಿನಾ..? ಕಣ್ಣು ಗುಡ್ಡೆ ತಿರಿಗಿಸಿ ವ್ಯಂಗವಾಗಿ ತಿರುಚಿ ಕೇಳಿದ.
“ಇಲ್ಲಿತನಕಾ ನನಗೆ ಬಂದಿದ್ದ ಪಿತ್ರಾರ್ಜಿತ ಏಳು ಎಕರೆ ಜಮೀನು ಮಾರಿದಿನಿ ಸರ್, ನನ್ನ ಪ್ರಕಾರ ಇಲ್ಲಿಯವರೆಗೆ ಒಂದು ಮೂವತ್ತು ಲಕ್ಷ ರೂಪಾಯಿಗಳವರೆಗೆ ಖರ್ಚು ಬಂದಿರಬಹುದು..ಅAದ ದ್ವ್ವಾರಕನಾಥನಿಗೆ ಆತನ ಮಾತು ಕೇಳಿ ಶಾಕ್ ಜೊತೆಗೆ ನಗು ಕೂಡ ಬಂತು.
“ಬುದ್ದಿ ಇದೆಯೇನ್ರಿ ನಿಮಗೆ..? ಮನೆ,ಆಸ್ತಿ ಕಳಕೊಂಡು ಎನು ಸಾಧಿಸಬೇಕು ಅಂತಿದಿರಿ..? ಮನುಷ್ಯನಿಗೆ ಬುದ್ದಿಯ ಜೊತೆಗೆ ಹುಚ್ಚತನವು ಇರಬೇಕು ಅದು ಹಿತಮಿತದಲ್ಲಿ ಇದ್ದರೆ ಚಂದ. ಆದರೆ ನಿಮಗೆ.. ಹುಚ್ಚತನವೇ ಹಿರಿದಾಗಿದೆ. ತನ್ನಷ್ಟಕ್ಕೆ ತಾನೆ ನಕ್ಕು ಹಣೆ ಚಚಿಕೊಂಡ. ಮತ್ತೇ ಮುಂದುವರೆದು..
“ ಇದರಿಂದ ನಿಮಗೆ ಎನು ಸಿಗುತ್ತೇ..? ಯಾಕೇ ಹೀಗೆ ಮಾಡಬೇಕು ಅಂತಿರೊದಕ್ಕೆ ಎನಾದರು ಕಾರಣ ಇದೆಯಾ..? ಅಂದಾಗ ನೃಪತುಂಗ ಮೌನವಾದ. “ಇನ್ನೇನಾದರು ಉಳಿದಿದಿಯಾ..? ಇದ್ದರೆ ಅದನ್ನು ಮಾರಿಬಿಡಿ ಕರ್ಮಾ…ಕರ್ಮಾ ತಲೆೆ ಹಿಡಿದುಕೊಂಡ ಹೀಗೂ ಜನ ರ‍್ತಾರಾ..ಅನಿಸಿತು ಅವನಿಗೆ.
“ ಇಲ್ಲಾ ಸರ್ ನಾನು ಕೆಲಸಕ್ಕೆ ಹೋಗತಿನಿ ಅದರಿಂದ ಮಕ್ಕಳ ರಾತ್ರಿ ಊಟಕ್ಕೆ ತೊಂದರೆ ಇಲ್ಲ..ಹುಟ್ಟು ಹಬ್ಬ ಆಚರಿಕೊಳ್ಳೊವ ಕೆಲವರು ಯಾರಾದ್ರು ತಾವಾಗಿ ಬಂದು ಹಣ್ಣು ಹಂಪಲ ಬಿಸ್ಕಿಟ್ಟು, ಬ್ರೆಡ್ಡು, ಬಟ್ಟೆ ಕೊಟ್ಟು ಹೋಗತಾರೆ ಸರ್ ತೊಂದರೆ ಇಲ್ಲ.. ಇದ್ದಕ್ಕಿದ್ದಂತೆ ನೃಪತುಂಗ ಮುಖಕ್ಕೆ ಕೈ ಹಿಡಿದುಕೊಂಡು ದುಃಖಿಸತೊಡಗಿದ. ಇತ್ತೀಚೆಗೆ ತುಂಬಾ ಕಷ್ಟ ಸರ್.. ಕೊರೊನಾ ಬಂದಾಗಿನಿAದ ಯಾರು ನನ್ನನ್ನು ಕೆಲಸಕ್ಕೆ ಕರಿತಿಲ್ಲ ಸರ್ ದುಡಿಯೋಕೆ ನಾನು ರೆಡಿ ಸರ್ ಕೆಲಸ ಇಲ್ಲದೆ ಮುಖ ನೋಡ್ತಾ ಕೂರೊದಕ್ಕೆ ಆಗ್ತಿಲ್ಲ ಪಾಪ ಮಕ್ಕಳು ಸರ್… ಹಸಿದು ಕೆಲವು ಸ¯ ಮೈಮೇಲಿನ ಶರ್ಟ ಕಾಲರನ್ನೆ ಜಗಿದು ಜಗಿದು ಹೊಟ್ಟೆ ತುಂಬಿಸಿಕೊಳ್ಳತಾವೆ.. ಕೆಲಸ ಇದ್ದರೆ ಯಾರು ಉಪವಾಸ ಇರಲ್ಲ.. ಬಟ್ ಅವರ ತಾಯಿ ತಂದೆಗಳಿಗೆ ಈ ಪರಿಸ್ಥಿತಿಯನ್ನು ಪೋನ ಮಾಡಿ ಹೇಳಿದೆ ಕೆಲವರು ನಾವು ಊರಲ್ಲಿ ಇಲ್ಲ ದುಡಿಯೋಕೆ ಇನ್ನೆಲ್ಲಿಯೊ ಬಂದಿದಿವಿ ಬಂದಮೇಲೆ ಕರಕೊಂಡ ಹೋಗ್ತಿವಿ ಅಂತಾರೆ, ಇನ್ನ ಕೆಲವರು ನೀವೆ ಎನಾರ ಮಾಡಿಕೊಳ್ಳಿ ಸಾರ್ ಅಂತಾರೆ ಇನ್ನು ಕೆಲವರು ಪೊನು ಎತ್ತಲ್ಲ ಸರ್ ನನಗೆ ಅವರುಗಳ ಮೇಲೆ ಬೇಸರವಿಲ್ಲ ಸರ್ ಬಟ್ ನನ್ನ ದುಡಿಮೆ ಕಸಿದುಕೊಂಡಿದೆಯಲ್ಲ ಈ ಕೊರೊನಾದಿಂದ ನಾನು ನಿಸ್ಸಾಯಕನಾಗಿದಿನಿ ಸರ್ ಅಷ್ಟೇ…ಮಕ್ಕಳ ಸಾಕೋದು ನನಗೆ ಕಷ್ಟ ಅನಿಸಿಲ್ಲ ಸರ್..ಎಂದು ಮುಖ ಒರೆಸಿಕೊಂಡು ಮುಂದೆ ಬಂದ

“ಸರ್ ಎಕ್ಷುವಲ್ಲಾಗಿ ನಾನು ಊಟ ಬಟ್ಟೇ ಇಂತದಕ್ಕೆ ಯಾರ ಬಳಿಯೂ ಸಹಾಯ ಕೇಳಲ್ಲ ಸರ್ ನಮ್ಮ ಸಂಸ್ಥೆಲಿರೊ ಒಂದು ಮಗುಗೆ ಹಾರ್ಟಲಿ ಒಂದು ಹೋಲ್ ಇದೆಯಂತೆ ಸರ್ ಅದಕ್ಕೆ ಬೈಪಾಸ ಸರ್ಜರಿ ಮಾಡಿಸಬೇಕು ಅಂತಿದಾರೆ. ನಿಮ್ಮ ಧರ್ಮಪತ್ನಿ ಒಳ್ಳೇ ಡಾಕ್ಟರು ಆ ತಾಯಿ ಕರುಣಾಮಯಿ ದೇವತೆಯಂತೊಳು ಹಾರ್ಟ ಸ್ಪೇಷಾಲಿಷ್ಟು ಬೇರೆ ಪ್ರತಿ ತಿಂಗಳು ಗರ‍್ನಮೆಂಟ ಹಾಸ್ಪಿಟಲನಲ್ಲಿ ಒಬ್ಬರಿಗೆ ಉಚಿತವಾಗಿ ಆಪರೇಷನ ಮಾಡ್ತಾರೆ ಅಂತ ಕೇಳಿದೆ ಸರ್ ದೇವರು ತಾನು ಎಲ್ಲಾ ಕಡೆಗೆ ಬರಕ್ಕಾಗಲ್ಲ ಅಂತ ಅನಕೊಂಡಾಗೆಲ್ಲ ಮನುಷ್ಯ ರೂಪದಲ್ಲಿ ಹೀಗೆ ಬಂದು ಕಾಪಾಡುತ್ತಾನೆ ಅನ್ನೊದು ನಿಜಾ ಅಲ್ವಾ ಸಾರ್ ಈ ತಿಂಗಳ ಸರತಿಯಲ್ಲಿ ನಮ್ಮ ಮಗುಗೆ ಅಡಜಸ್ಟ ಮಾಡಿ ಆಪರೇಷನ ಮಾಡೋಕೆ ಆಗುತ್ತಾ…? ಮೆಡಂಗೆ ತಾವೊಂದ ಮಾತನ್ನ ಹೇಳಬಹುದೇ ಸಾರ್..? ಕೇಳಿದ

ದ್ವಾರಕನಾಥ ಯಾಕೋ ಎನೋ ಮೌನವಾಗಿದ್ದ ಉರಿಯುತ್ತಿದ್ದವ ತೊಯ್ದು ತೊಪ್ಪೇಯಾದಂತೆ ತಟಸ್ಥವಾಗಿದ್ದ ನೋಡಿ ನೃಪತುಂಗ ಅವನ ಬಳಿ ಬಂದು ಮೆಡಂಗೆ ಒಂದ ಮಾತ ಹೇಳಿದ್ರೆ ಬಡವರ ಮಕ್ಕಳಿಗೆ ಸಹಾಯ ಮಾಡಿದ ಪುಣ್ಯ ದಂಪತಿಗಳಿಬ್ಬರಿಗೂ ಬರುತ್ತೇ ಸರ್.. ದುಡ್ಡು ಇದ್ದಿದ್ದರೆ ನಾವು ಪ್ರೈವೇಟ್ ಹಾಸ್ಪಿಟಲನಲ್ಲಿ ಮಾಡಿಸುತ್ತಿದ್ದೆ. ನನಗೆ ಮಕ್ಕಳ ಊಟಕ್ಕೆ ಹೊಂದಿಸುವುದೆ ಸವಾಲಿನ ಕೆಲಸವಾಗಿದೆ ಸರ್ ಕೊರೊನಾ ಇಲ್ಲದೆ ಹೋಗಿದ್ರೆ ನಿಮ್ಮ ಬಳಿ ಬರ‍್ತಿರಲಿಲ್ಲ ಸರ್..ದಯವಿಟ್ಟು ಇದೊಂದು ಉಪಕಾರ ಮಾಡಿ ಸರ್ ಎಂದು ಆತನ ಕಾಲು ಹಿಡಿದು ಬಿಕ್ಕಿದ.

ದ್ವಾರಕನಾಥನಿಗೆ ಜೀವ ಬಾಯಿಗೆ ಬಂದAತಾಯ್ತು. ಇಲ್ಲಿ ನಡೆಯುತ್ತಿರುವುದು ಜೀವನವೋ ಚಲನಚಿತ್ರದ ಕತೆಯೊ ಅರಿಯದೆ ದಂಗಾಗಿ ಹೋದ. ತನ್ನ ಮುಖಕ್ಕೆ ತಾನೆ ಹೊಲಸು ಎರಚಿಕೊಂಡAತಾಗಿತ್ತು. ದುಡ್ಡು ಬಟ್ಟೇ ಕೇಳೋಕೆ ಬಂದಿರಬಹುದೆ೦ದು ತಿಳಿದವನ ಕೆನ್ನೆಗೆ ರಪ್ಪೆಂದು ಬೀಸಿ ಹೊಡೆದಂತೆ ಅನುಭವ. ಆತನ ಮಾತು, ಆತನ ಕೆಲಸ, ಆತನ ಸಂಯಮ, ಸಮಾಜಸೇವೆಯ ತುಡಿತ ನಾನು ನನ್ನದು ಎನ್ನುವುದರ ಮೇಲಿನ ಮೋಹ ಕಣ್ಣಿಗೆ ಸೂಜಿ ಚುಚ್ಚಿದಂತೆ ತಿವಿಯಿತು. ಕೊರೊನಾ ಮಾಹಾಮಾರಿ ರೋಗದಿಂದ ಇಡೀ ಮಾನವ ಕುಲವೇ ನಲಗಿ ಹೋಗಿದೆ. ನಿಜವಾದ ಸಂಬAಧಗಳ ಅಸ್ತಿತ್ವ ಎದ್ದು ತೋರುತ್ತಿದೆ. ಬದುಕು ಮೂರಾಬಟ್ಟೆಯಾಗಿದೆ. ಯಾರ ಬಳಿಯು ಹಣವಿಲ್ಲ, ಕೆಲಸವಿಲ್ಲ ದೊಡ್ಡ ದೊಡ್ಡ ಕಂಪನಿಗಳಿ ಮುಚ್ಚಿದವು, ಸಾಹುಕಾರರು ಸಾಲಗಾರರಾದರು, ರೈತರು ಬೀದಿಗೆ ಬಿದ್ದರು ಕೂಲಿ ಕಾರ್ಮಿಕರು ಕೆಲಸವಿಲ್ಲದೆ, ಊಟವಿಲ್ಲದೆ ಒದ್ದಾಡಿದರು ಇಂತದರಲ್ಲೂ ಮಾನವೀಯತೆ ಮರೆಯದ ಇಂತಹ ವ್ಯಕ್ತಿಯ ಮುಂದೆ ತಾನೆಷ್ಟು ಸಣ್ಣವನಾದೆ …. ಮನಸ್ಸು ಭಾರವಾಯ್ತು ಕುಸಿದು ಕೆಳ ಕುಳಿತ ಕೋಟಿ ಕೋಟಿ ದುಡಿಯುವ ನನ್ನ ಮನಸ್ಸು ಎಂತದು..? ದುಡಿದಿದ್ದನ್ನೆಲ್ಲ ದಾನ ಮಾಡುವ ಅವನ ಮನಸ್ಸು ಎಂತದು..?… ಕಣ್ಣೀರು ನಿಲ್ಲದಕ್ಕ್ಲೆ ಆ ಕಡೇ ತಿರಿಗಿನಿಂತು ಬಿಕ್ಕಳಿಸಿದ ದ್ವಾರಕನಾಥ.
“sಸೆಲ್ವಂ ಚೆಕ್ ಬುಕ್ ತಗೊಂದ ಬನ್ನಿ ಇಲ್ಲಿ ಎಂದು ಶಕ್ತಿ ಮೀರಿ ಕೂಗಿದ ದ್ವಾರಕನಾಥ. ಕಣ್ಣೀರು ಇನ್ನು ಹೊರಟಿದ್ದವು ಗಾಬರಿಯಿಂದ ಓಡಿ ಬಂದ ಸೆಲ್ವಂ ದ್ವಾರಕನಾಥನನ್ನು ಒಮ್ಮೆ ಹಾಗೂ ನೃಪತುಂಗ ಅವರನ್ನು ಒಮ್ಮೇ ದೃಷ್ಠಿಸಿದ ಈ ಹಿಂದೆAದೂ ಅವನ ವರ್ತನೆಯಲ್ಲಿ ಈ ಬದಲಾವಣೆ ಕಂಡಿರಲಲ್ಲ. ಎನು ನಡಿತಿದೆ ಎಂದು ಕೂಡ ಅವನಿಗೆ ಅರ್ಥವಾಗದೆ ಹೋಯ್ತು. ಸೆಲ್ವಂ ನಿಂದ ಚೆಕ್ ಬುಕ್ ಪಡೆದು ಹೋಗಿ ಗೀತಾಳ ಬರಹೇಳು..ತತಕ್ಷಣಕ್ಕೆ ಬರೋಕೆ ಹೇಳು..ಅಂತ ಗಟ್ಟಿಯಾಗಿ ಆದೇಶ ಮಾಡಿದ. ಈ ಮಾತಿಗೆ ಸೆಲ್ವಂ ಪೂರ್ತಿಯಾಗಿ ಹೆದರಿ ಓಡಿಹೋದ. ಪರಿಸ್ಥಿತಿ ಕೈ ಮೀರತಿದೆ ಅನಿಸಿತಾದರು ಎಲ್ಲಿ ಅಂತ ಲೆಕ್ಕ ಹಾಕುತ್ತಲೆ ಒಳ ಓಡಿದ.

“ಇದು ತಗೋಳ್ಳಿ ನೃಪತುಂಗ ನಿಮ್ಮ ಸಂಸ್ಥೆಗೆ ಸದ್ಯಕ್ಕಿರಲಿ ೧೦ ಲಕ್ಷ ರೂಪಾಯಿಗಳ ಚೆಕ್ ನೃಪತುಂಗನ ಕೈಯಲ್ಲಿ ಇಟ್ಟು, “ ಒಂದು ಕೋರಿಕೆ ಇಲ್ಲ ಅನಬೇಡಿ ನಾನು ನಿಮ್ಮ ಸಂಸ್ಥೆಯನ್ನು ದತ್ತು ತಗೋತಿನಿ ಸರ್ ದಯಮಾಡಿ ಇಲ್ಲ ಅನಬೇಡಿ ಇಷ್ಟೇಲ್ಲ ಪಾಪ ಮಾಡಿರುವ ನಮಗೆ ಬದುಕಲು ಒಂದು ಹುಲ್ಲು ಕಡ್ಡಿಯಂತೆ ಈ ಸೇವೆಗೆ ನಿರಾಕರಿಸಬೇಡಿ ಇದು ನಿಮ್ಮ ಕಾಲಲ್ಲ ಕೈ ಅಂದುಕೊತಿನಿ ಪ್ಲೀಜ್ ಬೇಡ ಅನಬೇಡಿ ಇವತ್ತು ನೀವು ನನ್ನ ಕಣ್ಣು ತೆರೆಸಿದಿರಿ..ನಿಮ್ಮ ಮುಂದೆ ನಾನು ಎಷ್ಟು ಚಿಕ್ಕವನೆಂದರೆ ಎಂದು ಹೇಳುತ ಮಾತು ತುಂಡರಿಸಿ ಬರೀ ಅಳತೊಡಗಿದ.ಸ್ವಲ್ಪ ಸಮಯದ ಬಳಿಕ ಇಬ್ಬರು ಸುಧಾರಿಸಿಕೊಂಡರು ಅಷ್ಟರಲ್ಲಿ ನೆರಿಗೆಯನ್ನು ಒಂದು ಕೈಯಲ್ಲಿ ಸರಿಮಾಡಿಕೊಳ್ಳುತ ಇನ್ನೊಂದು ಕೈಯಲ್ಲಿ ಪೊನÀ ಹಿಡಿದುಕೊಂಡು ಬಂದಳು ಗೀತಾ.
ನೃಪತುಂಗನಿಗೆ ಅವಳನ್ನು ಎಲ್ಲೋ ನೋಡಿದ ನೆನಪು. ಕ್ಷಣ ಭಯ, ಗಾಬರಿ ಎರಡು ಆಯ್ತು ಇವಳು ಅವರೇನಾ..? ಎಂದು ಲೆಕ್ಕ ಹಾಕುತ್ತಿದ್ದ ಮನಸ್ಸಿಗೆ ಅಂಕೆ ಸಿಕ್ಕಿರಲಿಲ್ಲ. ಮೈ ಜುಗುಟಿಕೊಂಡು ನೋಡಿದ ನಿಜ. ಅವರೇ ಗೀತಾ ಮತ್ತು ನೃಪತುಂಗರ ಕಣ್ಣುಗಳು ಪರಸ್ಪರ ಸಂದಿಸಿದವು. ಬರಸಿಡಿಲು ಎರಗಿದಂತೆ ಬೆಚ್ಚಿದ.

“ಇವಳು ನನ್ನ ಹೆಂಡತಿ..ಡಾಕ್ಟರ ಗೀತಾ ಅಂತ ಪರಿಚಯ ಮಾಡಿಕೊಟ್ಟ್ ದ್ವಾರಕನಾಥ. ಇಬ್ಬರೂ ಮೌನವಾಗಿ ಒಬ್ಬರೊಗೊಬ್ಬರು ನೋಡಿ ಕೈಮುಗಿದರು.ಯಾಕೋ ತಲೆ ಸುತ್ತಿಬಂದ೦ತೆ ಆಯ್ತು ಆಯತಪ್ಪಿ ಕೆಳಗೆ ಕುಳಿತ. ಮತ್ತೇ ಅದೇನು ತಿಳಿಯಿತೊ ಗೊತ್ತಿಲ್ಲ ಬುದಂಗನೆ ಎದ್ದವನೆ “ ಸರ್ ಒಂದು ಐದ ನಿಮಿಷ ಬಂದೆ ಸರ್ ಎಂದು ಹೇಳಿದವನೆ ಬಿರ ಬಿರನೆ ಹೊರ ನಡೆದ ನೃಪತುಂಗನ ಏಕಾಏಕಿ ಈ ವರ್ತನೆ ತಿಳಿಯಲಿಲ್ಲವಾದರು ಎನೊ ಕೆಲಸವಿರಬಹುದು ಬರುತ್ತಾರೆ ಅಂತ ಸುಮ್ಮನಾದ ದ್ವಾರಕನಾಥ. ಹೆಂಡತಿಯು ಮುಖ ಚಿಕ್ಕದ ಮಾಡಿಕೊಂಡು ರೂಮ ಸೇರಿದಳು.
ಅರ್ಧಗಂಟೆ ಬಳಿಕ ಕುರ್ಚಿಲಿ ಕುಳಿತಿದ್ದ ದ್ವಾರಕನಾಥನ ಬಳಿ ಬಂದು “ಸರ್ ನೃಪತುಂಗ ಅವರು ಬರಲೇ ಇಲ್ಲ ಸರ್ ಹೊರಟು ಹೋದರು ಅಂದಾಗ ಎನೊ ಕಸಿವಿಸಿ ಶುರುವಾಯ್ತು ಎನಾಯ್ತು ಮನುಷ್ಯನಿಗೆ.. ಕಿಟಕಿಯ ಗಾಜಿನಿಂದ ಗಾರ್ಡನ, ರಸ್ತೇ ಆಚೆ ದೃಷ್ಠಿ ಹರಿಯೊವರೆಗು ನೋಡಿದ ಎಲ್ಲೂ ಕಾಣಲಿಲ್ಲ. ಅವನ ಬಳಿ ಪೋನ ಸಹ ಇಲ್ಲ. ಶತಪಥ ತಿರುಗಾಡುತ ಹೆಂಡತಿ ರೂಮಿಗೆ ಬಂದ.

“ಎನಾಯ್ತೇ ಹಾಗೇ ಬಂದಬಿಟ್ಟೆ..? ಕೇಳಿದ
“ಈ ಮನುಷ್ಯ ಯಾಕೆ ಬಂದಿದ್ದ ? ಅಂದಳು ಕೋಪದಲ್ಲಿ
ನೀನು ತಿಂಗಳಲ್ಲಿ ಒಂದು ಸಲ ಬಡವರಿಗಾಗಿ ಉಚಿತ ಹಾರ್ಟ ಆಪರೇಷನ ಮಾಡತಿಯಲ್ವಾ ಅವರ ಸಂಸ್ಥೆಯ ಒಂದು ಮಗುವಿಗೆ ಈ ತಿಂಗಳು ಎನಾದರು ಮಾಡಲು ಸಾಧ್ಯವಾ ಅಂತ ಕೇಳೋಕೆ ಬಂದಿದ್ರು..? ಕೋಪದಿಂದ ಕುದಿಯುತ್ತಿದ್ದ ಆಕೆಯ ಹಣೆ ಮೇಲೆ ಬೆವರು ಹನಿಗಳು ಸಾಲುಗಟ್ಟಿದ್ದವು.
“ಆ ಮನುಷ್ಯ ಸರಿ ಇಲ್ಲ ಕಣ್ರಿ ಮಾನ ಮರ್ಯಾದೆ ಇದೆಯಾ ಅವನಿಗೆ….? ದುಡ್ಡು ಅಂತ ಸಾಯ್ತಾನೆ ಎಲ್ಲಿ ಹೋದರು ಇಂತವರು ಬೆನ್ನತ್ತಿ ಬರತಾರಲ್ಲೆ ಇಂತವರಿಗೆಲ್ಲ ನೀವು ಕರುಣೆ ತೋರಿಸಬೇಡಿ ಪ್ಲೀಜ್ ಇವರಿಗೆ ಇದೊಂದು ದಂಧೆ ಹೆಸರಿಗೆ ವಿಕಲಾಂಗ ಮಕ್ಕಳ ಸಂಸ್ಥೆ ನಡೆಸ್ತಿನಿ ಅಂತ ಬಂದು ತಮ್ಮ ಮನೆ ತುಂಬಕೋತಾರೆ. ಇಂತವರನ್ನ ನೋಡಿದ್ರೆ ಪೊಲಿಷ ಕಂಪ್ಲೆAಟ್ ಕೊಡಬೇಕನಿಸುತ್ತೇ.. ಮೈ ಬಗ್ಗಿಸಿ ದುಡಿಯೋಕೆ ಎನ ದಾಡಿ ಇವರಿಗೆ…? ಮೂರ ಕತ್ತೇ ವಯಸ್ಸಾಗಿದೆ… ರ‍್ಯಾಸ್ಕಲ್‌ಅಂತ ಗುಡುಗಿದಳು.ದ್ವಾರಕನಾಥ ಅವಳ ಮಾತು ಕೇಳಿ ವ್ಯಗ್ರನಾಗದೆ ಶಾಂತವಾಗಿ ಕೇಳಿದ
“ನಿನಗೆ ಅವನು ಗೊತ್ತಾ…?.
“ಹೌದು…
“ಹೇಗೆ ..ಎಲ್ಲಿ..?
“ಆಕ್ಸಿಡೆಂಟಲ್ಲಿ ಅವರ ಹೆಂಡತಿ ಸತ್ತಾಗ ನಿಮ್ಮ ಅಕ್ಕನಿಗೆ ಅವರ ಹೆಂಡತಿಯ ಹಾರ್ಟ ಕಸಿ ಮಾಡಿ ಹಾಕಿತಲ್ವಾ.. ಆವಾಗ ಐವತ್ತ ಸಾವಿರ ಇವನಿಗೆ ಕೊಡಿ ಅಂತ ಕೊಟ್ಟಾಗಿದೆ. ಇಂತವರು ನಮ್ಮ ಮನೆಗಳಿಗೆ ಪದೇ ಪದೆ ಬರೋದು ಅದೊಂದು ಮಿಡಿಯಾದಲ್ಲಿ ದೊಡ್ಡ ಇಶ್ಯೂ ಆಗೋದು ಬೇಡ ಅಂತಲೆ ಅಡ್ವಾನ್ಸ ಆಗಿ ಕೊಟ್ಟಿದಿವಿ.. ನಮ್ಮ ಆಸ್ಪತ್ರೆ ಮುಖ್ಯ ಡಾಕ್ಟರ ನಿರಂಜನ ಬೇಕಾದ್ರೆ ಕೇಳಿ..? ನಮ್ಮ ವಿಳಾಸ ಪತ್ತೇ ಹಚ್ಚಿ ಈಗ ಮತ್ತೇ ದುಡ್ಡ ಕೇಳೋಕೆ ಬಂದಿದಾನಲ್ಲ ಇವನನ್ನ ಏನ ಮಾಡಬೇಕು ಹೇಳಿ..? ನನಗೆ ಮೈಯೆಲ್ಲ ಉರಿತಿದೆ..ಅಂತ ಕೂಗಿದಳು. ನಿಮಗೆ ಒಂದ ಹೇಳತಿನಿ ಯಾರಿಗೂ ದುಡ್ಡ ಕೊಡಬೇಡಿ..ಇವರಿಗೆ ಇದೊಂದು ಬಿಜನೆಸ್ ಆಗಿದೆ… ಶಟ್..ಬೆಳಿಗ್ಗೆ ಬೆಳಿಗ್ಗೆ ಬಂದು ಮೂಡ ಆಫ್ ಮಾಡಿದ ರ‍್ಯಾಸ್ಕಲ್ ಹೀಗೆ ಇನ್ನು ಎನೇನೋ ಕೂಗುತ್ತಿದ್ದಳು… ದ್ವಾರಕನಾಥ ಹಾಲಲಿ ಬಂದು ಕುಸಿದು ಕುಳಿತ ೧೦ ಲಕ್ಷ ರೂಪಾಯಿ ಚೆಕ್ ನಗುತ್ತಿತ್ತು.. ಯಾರು ಹಿತವರೊ ಈ ಭುವಿಯೊಳಗೆ……

‍ಲೇಖಕರು Admin

1 May, 2026

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading