-ಶಾಲಿನಿ ರುದ್ರಮುನಿ
ನಂಟಿನ ಅಮರತ್ವ
ಮೌನದ ಮಂಜಿನಲ್ಲಿ
ಮಸುಕಾದ ಮನಗಳು,
ಉಸುಕಿನ ನಡೆಯಲಿ
ದೂರವಾದ ಬಂಧಗಳ
ನಡುವೆ ತಟ್ಟನೆ ಒಂದು
ಕಡು ನುಡಿಯ ಕಿರಣ…
ಅದು ಕಲಹವಲ್ಲ,
ಕತ್ತಲೆಯ ಮಧ್ಯೆ ಹೊತ್ತಿ ಉರಿವ
ಸತ್ಯದ ಸೂರ್ಯಕಿರಣ,
ಸುಡುತ್ತದೆ ,
ಆದರೂ ಬೆಳಕಾಗುತ್ತದೆ!
ಅಸಹನೀಯ ಹಾದಿಯಲಿ
ನಿನ್ನ ಎದುರಿಗೆ ನಿಂತವ
ವಿರೋಧಿ ಅಲ್ಲ,
ನಿನ್ನೊಳಗಿನ ನಿನ್ನನ್ನು ಹುಡುಕುವ
ಸಹಪಯಣಿಗನು!
ಪ್ರತಿ ಕಡು ನುಡಿಯ ಅಡಿಯಲ್ಲಿ
ಮೃದುವಾದ ಹೃದಯದ ಸ್ಪಂದನೆ,
ಪ್ರತಿ ಪ್ರಶ್ನೆಯ ಹಿನ್ನಲೆಯಲ್ಲಿ
ಒಂದು ನಂಟಿನ ನಿಶ್ಚಲ ಪ್ರಾರ್ಥನೆ,
“ಬಂಧವ ಉಳಿಸೋಣ”
ಎನ್ನುವ ಅಳಲು ಅಲ್ಲಿ
ಮೌನದ ಝರಿಯ ನಾದ,
ಆದರೆ ಕೇಳಬಲ್ಲ ಕಿವಿಗೆ ಮಾತ್ರ
ಅದು ದೈವದ ವಾಣಿ,
ಸಂಬಂಧವೆಂದರೆ
ಕೇವಲ ಸುಖದ ನೆರಳು ಅಲ್ಲ,
ಕಡು ನುಡಿಗಳ
ತಪಸ್ಸಿನ ದೀಪಗಳು!
ನಾವು ಓಡಿದರೆ
ಬಂಧಗಳು ಬಿರುಕು ಬೀಳುತ್ತವೆ,
ನಾವು ಎದುರಿಸಿದರೆ
ಅವು ಆತ್ಮಸಾಕ್ಷಾತ್ಕಾರದ ದಾರಿಯಾಗುತ್ತವೆ!
ಕಡು ಮಾತಿಗೆ ಹೆದರದೆ
ಅದರೊಳಗಡಗಿದ
ಪ್ರೀತಿಯ ಪರಮಾರ್ಥ,
ಸತ್ಯದ ಶಿವತ್ವ
ನಂಟಿನ ಅಮರತ್ವ ಕಾಣು!,






0 Comments