ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುತ್ತಿನ ಮತ್ತಿನಲಿ ನಾನು..

ಮತ್ತು

User Comments

ಸುನೀತಾ ಕೆ 

ನೀನು ಆಕಾಶ
ನಾನು ನೆಲ

ನೆಲದಿಂದ ನಾನು
ಹೀಗೆ ದಿಟ್ಟಿಸುತ್ತಾ
girl butterfliesಯಾವುದೋ ಒಂದು
ಮರೆಯಲ್ಲಿ ನಿಂತು
ಮೆಲ್ಲಗೆ ಪಿಸುಗುಟ್ಟಿದ್ದೆ

ನನ್ನದರಕ್ಕೆ ನಿನ್ನ
ಮುತ್ತು ಎಷ್ಟು ಮಧುರ
ಯಾವುದೋ ತಿರುವಿನಲ್ಲಿ
ಸಂಧಿಸಿ ಜೊತೆಯಾದ
ಆ ಕ್ಷಣ

ಎಷ್ಟು ಸನ್ನಿಹಿತವಾಗಿ ಬಿಟ್ಟಿದೆ
ಸಮೀಪ ತೀರಾ ಸಮೀಪ
ಬಾಗಿ ಮುತ್ತಿನ ಮಳೆಗೆರೆದಿದ್ದೆ
ಮುತ್ತಿನ ಮತ್ತಿನಲಿ ನಾನು
ಮತ್ತೂ ಮತ್ತೂ ಮೃದುವಾಗಿ
ಹದವಾಗಿದ್ದೆ

ಈಗ ನನ್ನ ಬರಡು
ಎದೆಯೊಳಗೆ ಹಸಿರು
ಪಲ್ಲವಗಳು
ನೀನು ಹಾಗೆ ಇರು
ಅಲ್ಲಿ ದೂರದಲ್ಲೆ

ಆಗಾಗ್ಗೆ
ಬರಡಾಗದಂತೆ ನನ್ನ
ತೇವಗೊಳಿಸುತ್ತಿರು
ನಾನು ಇಲ್ಲೆ ನಿಂತು
ಆಕಾಶಕ್ಕೆ ಮುಖ ನೆಟ್ಟು
ಕನವರಿಸುವೆ
ನನ್ನದು ಹಸಿ ಹಸಿ
ಕನಸು ಅಷ್ಟೆ.

‍ಲೇಖಕರು admin

25 March, 2016

6 Comments

  1. smitha

    Nice… smitha

    • Kavya

      ಕವನ ಚೆನ್ನಾಗಿದೆ ಮೇಡಂ…

  2. Samatha

    Beautiful poem sunitha…am happy that ur coming out of your preachy teacher shell..ur true potential lies in poetry..expecting more and more poems from you..

  3. NARENDRA

    VERY NICE POEM

    – Anaamika

  4. anusha

    ಕವಿತೆ ತುಂಬಾ ಆಪ್ತವಾಗಿದೆ….

  5. dinesh

    very super poem akka….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading