ಬಿಸ್ಮಿಲ್ಲಾ ಖಾನ್ ಉವಾಚ..

ಪ್ರತಿಭಾ ನಂದಕುಮಾರ್ ಮೂಲಕ 

” ಒಂದು ಸಲ ನಾವೆಲ್ಲಾ ಸಂಗೀತಗಾರರು ಕೂತು ಮಾತಾಡುತ್ತಿದ್ದೆವು. ದೊಡ್ಡ ದೊಡ್ದ ಕಲಾವಿದರು ಗ್ವಾಲಿಯರ್ ನ ಶಂಕರ್ ರಾವ್, ಭೀಮಸೇನ ಜೋಷಿ, ಹೀರಾಬಾಯಿ,  ಇನ್ನೂ ದೊಡ್ದದೊಡ್ದವರು… ಎಲ್ಲಾರೂ ಕೂತು ಸಂಗೀತದ ಬಗ್ಗೆ ಮಾತಾಡುತ್ತಿದ್ದೆವು.  ಕೋಣೆ ಉದ್ದಕ್ಕಿತ್ತು, ನಾವು ಒಂದು ಮೂಲೆಯಲ್ಲಿ ಕೂತಿದ್ದೆವು.

bismillah khan sab1ನಾನು ಶಂಕರ್ ರಾವ್ ಅವರಿಗೆ ಕೇಳಿದೆ  ” ಮಹರಾಜ್… ನಾನೊಂದು ಮಾತು ಕೇಳ್ತೀನಿ ಹೇಳ್ತೀರಾ?” ” ಖಂಡಿತಾ” ಅಂದರು ಅವರು. ಶಂಕರ್ ರಾವ್ ಅವರು ಬಹಳ ದೊಡ್ಡವರು, ಅದ್ಭುತ ಸಂಗೀತಗಾರರು. ನಾನು ಕೇಳಿದೆ ” ನಾನು ಏನು ಕೇಳಬೇಕಂದರೆ ಹಿಂದೂ ಧರ್ಮದಲ್ಲಿ ಎಲ್ಲಕ್ಕಿಂತ ಶ್ರೇಷ್ಠ ವಿದ್ಯೆ ಯಾವುದು? ” ಎಲ್ಲರೂ ಒಕ್ಕೊರಲಿನಲ್ಲಿ ಹೇಳಿದರು ” ಸಂಗೀತ!”.

ನಾನಂದೆ ” ಸಂಗೀತ?! ಗೀತೆ ಇದೆಯಲ್ಲಾ?”

ಅದಕ್ಕೆ ಅವರು ಹೇಳಿದರು ” ಖಾನ್ ಸಾಬ್, ಇದೆ, ಆದರೆ ಸಂಗೀತ ಅದಕ್ಕಿಂತ ಶ್ರೇಷ್ಠ.”

ನಾನಂದೆ ” ರಾಮಾಯಣ ಇದೆಯಲ್ಲಾ?”

ಅವರೆಂದರು ” ಸಂಗೀತ ಅದಕ್ಕಿಂತ ದೊಡ್ಡದು”

ನಾನಂದೆ ” ಸರಿ, ನಾನೊಂದು ಮಾತು ಕೇಳ್ತೀನಿ ತೀರ್ಮಾನ ನೀವೇ ಹೇಳಿ. ಹಿಂದು ಧರ್ಮದಲ್ಲಿ ಸಂಗೀತ ಅಷ್ಟು ಶ್ರೇಷ್ಠವೇ ಹಾಗಾದರೆ? ನಮ್ಮ ಮುಸಲ್ಮಾನ ಧರ್ಮದಲ್ಲಿ ಅದು ಪೂರಾ ಕಂಡೆಮ್!  ಏನೂ ಇಲ್ಲ!”. ಎಲ್ಲರೂ ಮೌನವಾಗಿಬಿಟ್ಟರು! ನಮ್ಮ ಮೌಲ್ವಿಗಳು, ಸಂಗೀತ ನಿಷಿದ್ಧ ಅನ್ನುತ್ತಾರೆ, ಸಂಗೀತ ಮಾಡಬಾರದೆನ್ನುತ್ತಾರೆ.

ಯಾರೂ ಒಂದು ಮಾತೂ ಆಡಲಿಲ್ಲ, ಯಾಕಂದರೆ ನಾನೂ ಸ್ವತಃ ಮುಸಲ್ಮಾನನೇ ಆಗಿದ್ದೆನಲ್ಲ.!

khanಸರಿ ಇನ್ನೊಂದು ಮಾತು, ನಾನಂದೆ. ಹೇಳಿ ಖಾನ್ ಸಾಬ್ ಅಂದರು. ಸಂಗೀತ ಎಂತಹ ಶ್ರೇಷ್ಠ ವಿದ್ಯೆ ಅಂದರೆ ರಾಮಾಯಣ ಗೀತೆಗಿಂತ ಮೇಲೆ, ನಮಗೆ ಮುಸಲ್ಮಾನರಿಗೆ ಸಂಗೀತ ತೀರಾ ನಿಕೃಷ್ಠ, ಕಂಡೆಮ್. ಫಾಯಾಜ್ ಖಾನ್ ಬಗ್ಗೆ ಏನು ಹೇಳುತ್ತೀರಿ?”

ಒಹ್ ಅದ್ಭುತ! ಅಂದರು.

‘ ಅಬ್ದುಲ್ ಖರೀಂ ಖಾನ್? ‘

ಅತ್ಯದ್ಭುತ!

ಬರೀ ಮುಸಲ್ಮಾನ ಸಂಗೀತಗಾರರ ಹೆಸರನ್ನೇ ಹೇಳಿದೆ. ಅವರು ಎಲ್ಲರನ್ನೂ ‘ ಅದ್ಭುತ ಅದ್ಭುತ! ಅಂತ ಕೊಂಡಾಡಿದರು.

ನಾನಂದೆ ‘ ಇವರೆಲ್ಲರಿಗೂ ಸಂಗೀತ ಕಂಡೆಮ್ , ನಿಕೃಷ್ಠ ಮಾಡಬೇಡಾ ಅಂತ ಹೇಳಿಯೂ ಅವರು ಇಂತಹಾ ಮಹಾನ್ ಕಲಾವಿದರಾದರು, ಅಕಸ್ಮಾತ್ ಇದು ನಮ್ಮಲ್ಲಿ ಅಂಗೀಕೃತ ವಿದ್ಯೆಯಾಗಿದ್ದರೆ ನಾವು ಇನ್ನೂ ಯಾವ ಎತ್ತರದಲ್ಲಿ ಇರುತ್ತಿದ್ದೆವು!!”

— ಶಹನಾಯ್ ವಾದಕ ಬಿಸ್ಮಿಲ್ಲಾ ಖಾನ್ 

‍ಲೇಖಕರು admin

March 25, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

    • Avadhi

      ನಿಮ್ಮ ಸಲಹೆಗೆ ವಂದನೆಗಳು
      ಈಗ ಒಂದು ವಿಡಿಯೋ- ಬಿಸ್ಮಿಲ್ಲಾ ಖಾನ್ ಅವರ ಬಗೆಗಿನ ಸಾಕ್ಷ್ಯ ಚಿತ್ರ ಸೇರಿಸಲಾಗಿದೆ . ನೋಡಿ

      ಪ್ರತಿಕ್ರಿಯೆ
  1. ಟಿ.ಕೆ.ಗಂಗಾಧರ ಪತ್ತಾರ

    ಅಪ್ಪಟ ನಾಸ್ತಿಕನಾಗಿಯೂ ನಾನಿಲ್ಲಿ ಉಲ್ಲೇಖಿಸುತ್ತಿದ್ದೇನೆ, ಶಹನಾಯಿ ನವಾಝ್ ಉಸ್ತಾದ ಪಂಡಿತ್ ಬಿಸ್ಮಿಲ್ಲಾ ಖಾನರಿಗೆ ಕಾಶಿ ವಿಶ್ವನಾಥ ಹಾಗೂ ಗಂಗಾನದಿ ಎಂದರೆ ಪಂಚಪ್ರಾಣ.ಅಚಲ ವಿಶ್ವಾಸ-ಶ್ರದ್ಧೆ ಉಳ್ಳವರಾಗಿದ್ದರು. ಪ್ರತಿದಿನ ಬೆಳಗಿನ ಝಾವ ಸ್ನಾನ ಮಾಡಿ ಶುಚಿರ್ಭೂತರಾಗಿ ವಿಶ್ವನಾಥನ ಸನ್ನಿಧಿಯಲ್ಲಿ ಶಹನಾಯಿ ನುಡಿಸುವ ಮೂಲಕ ನಾದೋಪಾಸನೆ ಮಾಡುತ್ತಿದ್ದರು.
    ಒಮ್ಮೆ ಪಾಕಿಸ್ತಾನದವರು -“ನೀವು ಹೇಳುವ ಸೌಕರ್ಯ-ಸೌಲಭ್ಯಗಳನ್ನೆಲ್ಲಾ ಒದಗಿಸುತ್ತೇವೆ, ಐಷಾರಾಮೀ ವ್ಯವಸ್ಥೆ ಕಲ್ಪಿಸುತ್ತೇವೆ. ಪಾಕಿಸ್ತಾನದಲ್ಲಿ ವಾಸಿಸಲು ಬಂದು ಬಿಡಿ”-ಎಂದರಂತೆ. ಆಗ ಖಾನ್ ಸಾಹೇಬರು ಒಂದು ದಮ್ ಬೀಡಿ ಎಳೆದು ಉಂಗುರ-ಉಂಗುರ ಹೊಗೆ ಬಿಡುತ್ತಾ ಒಂದು ಸ್ವಚ್ಛಂದ ಮುಗುಳು ನಗೆ ಸೂಸುತ್ತಾ ಹೇಳಿದರಂತೆ “ಮೊದಲು ನನ್ನ ತಂಬೂರಿ ಸಾಗಿಸಿಬಿಡಿ, ಆಮೇಲೆ ನಾನು ಖಂಡಿತಾ ಬರುತ್ತೇನೆ”. “ಅಯ್ಯೋ! ತಾನ್ ಪುರಾ ಸಾಗಿಸೋದು ಏನು ಮಹಾ ಕೆಲಸ. ಎಲ್ಲಿದೆ ತೋರಿಸಿ”-ಎಂದಾಗ-ಅಷ್ಟೇ ಸಹಜವಾಗಿ ಮಂದಹಾಸ ಸೂಸುತ್ತಾ ಉಸ್ತಾದರು ತೋರುಬೆರಳು ಚಾಚಿ ಗಂಗಾನದಿಯನ್ನು ತೋರಿಸುತ್ತಾ “ಇದೇ ನನ್ನ ತಂಬೂರಿ. ಇದರ ಅಲೆ-ಅಲೆಗಳೂ ನನ್ನ ಶಹನಾಯಿ ಶ್ರುತಿಗೆ ಉಸಿರು ನೀಡುತ್ತವೆ ಎಂದಾಗ ಪಾಕಿಸ್ತಾನೀಯರು ನಿಬ್ಬೆರಗಾಗಿ ಮೌನ ತಾಳಿದರು.

    ಪ್ರತಿಕ್ರಿಯೆ
  2. Anonymous

    ಅಪ್ಪಟ ಶುದ್ಧಜೀವಿ ಬಿಸ್ಮಿಲ್ಲಾಖಾನ್, ಅವರ ಪರಿಶುದ್ಧ ಶೆಹನಾಯಿ ನೋಡುತ್ತ, ಓದುತ್ತ, ಕೇಳುತ್ತ ಆದ ಆನಂದ ಅಪರಿಮಿತ. ಅವಧಿಗೆ ಧನ್ಯವಾದಗಳು…..ಎಸ್.ಪಿ.ವಿಜಯಲಕ್ಶ್ಮಿ

    ಪ್ರತಿಕ್ರಿಯೆ
  3. Shama, Nandibetta

    ಸಂಗೀತ ಜಾತಿ ಭಾಷೆ ಧರ್ಮ ಎಲ್ಲವನ್ನು ಮೀರಿದ ಶಕ್ತಿಯಾಗಿದ್ದರಿಂದಲೇ ಅದು ಜಗತ್ತಿನ ಯಾವುದೇ ಧರ್ಮಕ್ಕಿಂತ ಶ್ರೇಷ್ಠವಾಗಲು ಸಾಧ್ಯವಾಯಿತು ಅನಿಸುತ್ತೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: