ಮುಕುಂದ ಬೃಂದಾ ಕವಿತೆ- ಸಂದೂಕ…

ಮುಕುಂದ ಬೃಂದಾ

ನಮ್ಮ ಮನಿ ಅಡಕಲ ಕೋಣೆಯೊಳಗೊಂದು
ಹೆಣ ಭಾರ … ಅಲ್ಲಲ್ಲ .. ಮಣ ಭಾರ ಸಂದೂಕ

ಕಾಡು ಕಟ್ಟಿಗೆಯ ದೈತ್ಯ ಕಾಯ
ಕಾದ ಕಬ್ಬಿಣಕೆ ಹೊಡೆದು ಮಾಡಿದ ಕೆನ್ನಾಲಿಗೆ ಚಿಲಕ

ಆಡಿ ಆಡುತ ನಾನತ್ತ ಓಡಿ ಬಚ್ಚಿಟ್ಟುಕೊಂಡಾಗೆಲ್ಲ
ಕಾಡಿದ್ದು ಒಂದೇ ಪ್ರಶ್ನೆ ಏನಿಟ್ಟಾನ ನನ್ನಜ್ಜ ಇದರೊಳಗ ?

ರಟ್ಟೆಗೆ ಎತ್ತಲಾಗದ, ಹುಡುಗುಬುದ್ಧಿಗೆ ಹೊಳೆಯದ
ರಹಸ್ಯ ಏನೋ ಇರಲೇಬೇಕೆಂಬ ಹುಚ್ಚು ಹಟ !

ಮಟಮಟ ಮಧ್ಯಾನ್ಹ ಗುಟ್ಟಾಗಿ ಗಟ್ಟಿಲಿ ಎತ್ತಿ ಬಿಟ್ಟೊಮ್ಮೆ
ಧೂಳ ಕೊಡವಿ ಒಳಗಿಟ್ಟ ಕಣ್ಣಿಗೆ ಕಂಡದ್ದು ಇಷ್ಟ

ಮಾಸಿದರು ಮಾಸದ ಧಾರೆ ಸೀರೆ, ಜಿಡ್ಡು ಹಿಡಿದ ಶೇರ್ವಾನಿ
ಖಾಲಿ ಅತ್ಥರ ದಾನಿ, ಜೋಡಿ ಕೊಲವು ಬೊಂಬೆ

ಪುಟಾಣಿ ಎಲೆ ಅಡಿಕೆ ಡಬ್ಬ , ಸೊಟ್ಟಾಗಿ ಬೆಂಡಾದ ಅಜ್ಜಿ ನತ್ತು
ಚಿಟಿಕೆ ಭಂಡಾರ ಕಟ್ಟಿಟ್ಟ ಚೀಟಿ , ಹಿಡಿ ಕವಡಿ ಚೌಕಾಭಾರದ್ದು

ಅಜ್ಜನ ಪ್ರೀತಿ ಸಾರಿತ್ತು ಒಂದೊಂದು ವಸ್ತು , ಅಜ್ಜಿ ನಾಚಿದಂಗಿತ್ತು
ಅರ್ಥವಾಗದ ಸೊತ್ತು ಅವತ್ತು ಬಿಚ್ಚಿಟ್ಟೆ ನೋಡಾ ವಟಗುಟ್ಟಿ ಇವತ್ತು

‍ಲೇಖಕರು Admin

January 22, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: