ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾತಾಡದ ಕನಸುಗಳಿಗೆ..

-ಶ್ರೀಧರ ಜಿ ಯರವರಹಳ್ಳಿ

ಕೊಲೆಯಾದ ಸಾಕ್ಷಿಗಳು

ಮಾತಾಡದ ಕನಸುಗಳಿಗೆ
ನಿದ್ರೆ ಬರಿಸುವ
ಕನಸುಗಳಂಗಡಿಯನ್ನು ತೆರೆದಿದ್ದವರು!!

ಉದಯಿಸುವ ಸೂರ್ಯನ
ಕಾಣುತ್ತಿರುವವರು ಕೇಳುತ್ತಾರೆ!!
ಚರಿತ್ರೆಯ ಉದಾಹರೆಣೆಗೆ
ಸಾಕ್ಷಿಯ ಉಳಿಸಿಹೆಯಾ ನೀನು?!

ಕತ್ತಲಡೆದ ಬೆಳಕು,
ಗಹಗಹಿಸಿ ಅಳುವುದೊಮ್ಮೆ!
ಅಕ್ಷರಗಳ ಬೆಳಕ ಕುಡಿದವರು
ಬೆಳಕನ್ನೇ ಕೊಲ್ಲುವ ಬೆಳಕ
ಬೆಳೆಯುವವರು!!

ಹಸಿವಿನ ಸಾವಿನ
ಮೆರವಣಿಗೆಯಲ್ಲಿ
ಕನಸುಗಳ ಚೀರಾಡುವ ಆ ಮೌನ!!
ಹೃದಯದ ಬೆಳಕನ್ನೆ
ಹೀರಿ ಬಿಡುತ್ತದೆ!

ಯುದ್ದ ದ ನಟ್ಟನಡುವೆ
ಬಿದ್ದಿದ್ದ ಅದೇ ಸೂರ್ಯನ
ಕಾಂತಿಗಳು ಕಾಂತಿಹೀನಗೊಂಡಿದ್ದವು!
ಬದುಕು ಮತ್ತೆ ಹುಟ್ಟಲು
ಯುದ್ಧದ ಕನಸುಗಳು ಸಾಯಬೇಕಿತ್ತು!!

ಯುದ್ಧದ ಕನಸುಗಳು
ಬೀಳಬೇಕೆ?!!

ಕೊಲೆಯಾದ ಸಾಕ್ಷಿಗಳು
ಈ ಯುದ್ಧದ ಕನಸುಗಳಂಗಡಿಯಲ್ಲೇ
ಮತ್ತೆ ಕೊಲೆಯಾಗುತ್ತಲೇ ಇದ್ದವು!
ಯುದ್ಧ ಕನಸುಕ್ಕುವ ಬಳಿಗೆ
ಪ್ರೇಮ ದಕ್ಕುವ ಕಡಲಿಗೆ
ಕನಸುಗಳ ಸಾಕ್ಷಿ ಬೇಕೇ?!!

ಬುದ್ಧ ನಡೆದು ಬಂದಿರಬೇಕಿತ್ತು
ಅಗೋ ಆ ಯುದ್ಧ ನಡೆಯುತ್ತಿರುವ
ನೆಲದೆಲ್ಲಲ್ಲ!

ಕನಸುಗಳಂಗಡಿಗಳು
ಕೊಲೆಯಾದ ಸಾಕ್ಷಿಗಳ
ಮಾತಾಡಿಸುತ್ತಿದ್ದವೊ ಏನೊ!!

‍ಲೇಖಕರು Admin

22 April, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading