'ಮಹಿಳಾ ಸಾಹಿತ್ಯ : ಸವಾಲು ಮತ್ತು ಸಾಧ್ಯತೆಗಳು' – ರೇಣುಕಾ ಎ ಕಠಾರಿ

11111

ರೇಣುಕಾ ಎ ಕಠಾರಿ

ಮೌನಗಳೆಲ್ಲ ಮಾತಾಗುತ್ತಾ…
“ಬಂಗಾರದ ಪಂಜರದೊಳಗಿನ ಬದುಕಿನ ಕಣ್ಣ ತುಂಬಿದ ಬಣ್ಣ ಹೆಪ್ಪುಗಟ್ಟುತಿದೆ ದಿನೇ ದಿನೇ
ನಮ್ಮವರನ್ನುವವರೆಲ್ಲ ಇರುವ ತನಕ ಹೋದ ಮೇಲೆ ನಾನೊಬ್ಬಳೇ ಗೋರಿಯೊಳಗೂ ಕಾಯುತ್ತಿರುವೆ ಖುದಾ”
ಕನ್ನಡ ಸಾಹಿತ್ಯ ಪರಂಪರೆಯನ್ನು ಗಮನಿಸುತ್ತಾ ಬಂದರೇ, ಈಡೀ ಸಾಹಿತ್ಯ ಪುರುಷ ಪ್ರಧಾನ ನೆಲೆಯಲ್ಲಿ ಬೆಳೆದು ಬಂದಿರುವುದನ್ನು ಕಾಣುತ್ತವೆ. ಆಶಾದಾಯಕವೆಂದರೆ, 12 ನೇ ಶತಮಾನದ ವಚನ ಸಾಹಿತ್ಯ ಮಾತ್ರ ಮಹಿಳಾ ಅಭಿವ್ಯಕ್ತಿಗೆ ಒಂದು ವೇದಿಕೆಯನ್ನು ಒದಗಿಸಿಕೊಟ್ಟಿತ್ತು. 33 ಶರಣೆಯರು ಏಕಕಾಲದಲ್ಲಿ ವಚನ ಸಾಹಿತ್ಯ ನಿರ್ಮಿಸಿದರು. ಇದು ಇತಿಹಾಸದಲ್ಲಿಯೇ ಸುವರ್ಣ ಅಕ್ಷರಗಳಿಂದ ಬರೆದಿಡಬೇಕಾದ ಅಂಶ. ತದನಂತರ 18 ನೇ ಶತಮಾನದವರೆಗೂ ಮಹಿಳಾ ಬರಹಗಾರರ ಸಂಖ್ಯೆ ಬೆರಳೆಣಿಕೆಯಷ್ಟೇ ಇತ್ತು. ಆದರೆ ಇಂದು ಮಹಿಳೆ ಜಾಗತೀಕರಣ ಪರಿಣಾಮದ ಸಂದರ್ಭವಾಗಿ ಪುರುಷರಷ್ಟೇ ಸರಿಸಮಾನಳಾಗಿ ಸಾಹಿತ್ಯದಲ್ಲಿ ತೊಡಗಿಕೊಂಡಿರುವುದು ಒಂದು ಆಶಾದಯಕ ಬೆಳೆವಣಿಗೆ.
1
ಸಾಹಿತ್ಯ ಎನ್ನುವುದು ಅದು ಒಂದೇ. ಅದಕ್ಕೆ ಲಿಂಗ ಬೇಧವಿಲ್ಲ ಆದರೆ, ಸಾಹಿತ್ಯದ ಜೊತೆಗೆ ಮಹಿಳೆ ಪದ ಸೇರಿಕೊಂಡದ್ದಾಗಿದೆ. ಮಹಿಳೆ ಪದ ಸೇರಿಕೊಳ್ಳುವ ಉದ್ದೇಶ ಅದು ಒಂದು ಲಿಂಗ ಪ್ರತ್ಯೇಕವನ್ನು ತೋರಿಸುವ ಉದ್ದೇಶಕ್ಕಷ್ಟೇ ಸೀಮಿತವಲ್ಲ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ತನ್ನ ಸಂಕೀರ್ಣ ಅನುಭವಗಳು ಭಿನ್ನವಾಗಿವೆ ಎಂದು ತೋರಿಸುವುದಕ್ಕಾಗಿ. ಮತ್ತು ತನ್ನ ಸ್ವಾಯತ್ತತೆಯನ್ನು, ತಾನು ಈ ಲೋಕದ ಜೊತೆಗೆ ಎದುರಿಸುತ್ತಿರುವ ಸಮಸ್ಸೆ ಮತ್ತು ಸವಾಲುಗಳನ್ನು ಅನುಭವದ ಮೂಲಕ ವ್ಯಕ್ತಪಡಿಸಲು ತಾನು ರಚಿಸಿದ ಸಾಹಿತ್ಯವನ್ನು ಪ್ರತ್ಯೇಕವಾಗಿ ಮಹಿಳಾ ಸಾಹಿತ್ಯವೆಂದು ಗುರುತಿಸುವ ಪ್ರಯತ್ನ ಮಾಡುತ್ತಾಳೆ.
ಇದರ ಮುಖ್ಯ ಉದ್ದೇಶವೇನೆಂದರೆ ಮಹಿಳೆಯ ತನ್ನತನದ ಗುರುತಿಸಿಕೊಳ್ಳುವ ಹುಡುಕಾಟವಾಗಿದೆ. ಅವಳ ಅಸ್ಮಿತೆ ಮತ್ತು ಐಡೆಂಟಿಟಿ ಇರುತ್ತದಲ್ಲ ತನ್ನ ಐಡೆಂಟಿಟಿಯನ್ನು ಗುರುತಿಸಿಕೊಳ್ಳುವ ಒಂದು ಮಾರ್ಗ ಇದು. ಮಹಿಳಾ ಜಗತ್ತಿನ ಅನೇಕ ಸಂಗತಿಗಳು ತೆರೆದಿಡತಕ್ಕದ್ದು. ಒಂದು ಕಡೆ ಪುರುಷ ಸಮಾಜ ವ್ಯವಸ್ಥೆ ನಿರ್ಮಾಣಮಾಡಿರುವ ವ್ಯವಸ್ಥೆಗಿಂತ ಅದನ್ನು ಬೇಧಿಸುವ ಅಥವಾ ಅದರ ಜೊತೆ ಸೆಣಸಾಡುವಂತಹ ಮತ್ತು ಅದು ನಿರ್ಮಿಸಿದಂತಹ ಅನೇಕ ಸಂದಿಗ್ದತೆಗಳನ್ನು ಎದುರಿಸುವ ಒಂದು ಅಂತರ್ ಪ್ರಯತ್ನವನ್ನು ಅಭಿವ್ತಕ್ತಿ ಮಾಡಲು ತನ್ನ ಸಂವೇದನೆಗಳನ್ನು ಅಕ್ಷರದ ಮೂಲಕ ದಾಖಲಿಸುತ್ತಾಳೆ. ಮಹಿಳಾ ಸಾಹಿತ್ಯ ಕೌಟುಂಬಿಕ ಸಂಘರ್ಷ, ಸಾಮಾಜಿಕ ಸಂಘರ್ಷ, ಪ್ರಾಕೃತಿಕ ಸಂಘರ್ಷ ಈ ಮೂರು ಸಂಘರ್ಷಗಳ ಮೂಲಕ ಮಹಿಳಾ ಸಾಹಿತ್ಯ ನಿರ್ಮಾಣಗೊಂಡಿರುತ್ತದೆ. ಪ್ರತಿಯೊಬ್ಬ ಮಹಿಳೆ ಅಭಿವ್ಯಕ್ತಿಸುವ ಕ್ರಮ ಬೇರೆ ಬೇರೆಯಾಗಿರುತ್ತದೆ. ಅಂದರೆ ಇಲ್ಲಿ ಕೆಲವರು ತೀರ ಸಹಜವಾಗಿ ಸಾಮಾನ್ಯರ ಓದುವಿಗೂ ನಿಲುಕುವಂತಹ ರಚನೆ, ಅಷ್ಟು ಸಂಕೀರ್ಣ ಇರಲಾರದಂತಹ ಲಹರಿ ತರಹದ ರಚನೆ ಈ ರೀತಿಯ ಮಾದರಿ ಬರಹಗಳ ಮೂಲಕ ಮಹಿಳೆ ಸಾಹಿತ್ಯದಲ್ಲಿ ಮತ್ತೆ ಮತ್ತೆ ಎತ್ತಿಕೊಳ್ಳುವ ಪ್ರಶ್ನೆ ಅನೇಕ.
ಅವುಗಳಲ್ಲಿ ಕೌಟುಂಬಿಕ ಅಧಿಕಾರವಿರಬಹುದು, ಸಾಮಾಜಿಕ ಅಂತಸ್ತಿನ ಮೇಲಿನ ಅಧಿಕಾರವಿರಬಹುದು, ಪ್ರಭುತ್ವದ ಒಳಗೆ ಸಿಗುವ ಅಧಿಕಾರವಿರಬಹುದು ಈ ಎಲ್ಲಾ ಅಧಿಕಾರವನ್ನು ಕೇಂದ್ರವಾಗಿಟ್ಟುಕೊಂಡು ಚರ್ಚೆ ಮಾಡುತ್ತಿದ್ದಾಳೆ. ಇವತ್ತು ಪುರುಷ ನಿರ್ಮಿತ ನಿರ್ಬಂಧಗಳು, ಸಂಕೋಲೆಗಳು, ನಿರ್ದೇಶನಗಳಿಂದ ಬಿಡಿಸಿಕೊಂಡು ಮಹಿಳೆ ತನ್ನ ಅಸ್ತಿತ್ವ ಮತ್ತು ಅಸ್ಮಿತೆಗಾಗಿ ತನ್ನ ಅಭಿವ್ಯಕ್ತಿಯ ಸಾಹಿತ್ಯದ ಮುಂದಿರುವ ಸವಾಲುಗಳನ್ನು ಮೀರಿ ವರ್ತಮಾನದಲ್ಲಿ ಹಲವು ಸಾಧ್ಯತೆಗಳಿಗೆ ಎದುರಾಗುವ ಅವಶ್ಯಕತೆಯಿದೆ..
‘ಮಹಿಳೆಯೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೆ’ ಎನ್ನುವ ಮಾತನ್ನು ವಿಶಾಲ ವ್ಯಪ್ತಿಗೆ ಒಳಪಡಿಸಿದ್ದೆ ಆದರೆ ಸಾಹಿತ್ಯದ ಮೂಲಕ ಅಭಿವ್ಯಕ್ತಿ ಮಾಡವ ಮಹಿಳೆ ಸಮಸಮಾಜದ ನಿರ್ಮಾಣಕ್ಕೆ ಸೂತ್ರವನ್ನು ಕುಟುಂಬದಿಂದಲೇ ರೂಪಿಸಬಲ್ಲಳು ಎಂಬುದನ್ನು ಎಲ್ಲರೂ ಅರಿಯಬೇಕು. ಇಂದು ಮಹಿಳೆ ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿ ನಿಂತಿದ್ದಾಳೆ. ಅವಳ ಬರಹಕ್ಕೆ, ಅಭಿವ್ಯಕ್ತಿಗೆ, ಚಿಂತನಗೆ ದಾರಿಯನ್ನು ಮಾಡಿಕೊಡುವ ಜವಾಬ್ದಾರಿ ಮತ್ತು ಜರೂರಿ ಇದೆ. ಹಾಗಾಗಿ ಇಲ್ಲಿ ನಾನು ಇಂದಿನ ಸಂದರ್ಭದಲ್ಲಿ ಮಹಿಳಾ ಸಾಹಿತ್ಯದ ಸವಾಲು ಮತ್ತು ಸಾಧ್ಯತೆಗಳನೇಂಬುದನ್ನು ಹೊಸ ತಲೆಮಾರಿನ ಮಹಿಳಾ ಬರಹಗಾರರ ವಿಚಾರಗಳನ್ನು ಸಂಕಲಿಸುವ ಕೆಲಸ ಮಾಡಿದ್ದೇನೆ.

‍ಲೇಖಕರು avadhi-sandhyarani

September 10, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಗವಿಸಿದ್ಧ ಹೊಸಮನಿ

    ಒಳ್ಳೆಯ ಪ್ರಯತ್ನ..

    ಪ್ರತಿಕ್ರಿಯೆ
  2. ಬಸವರಾಜ ಪಾಟೀಲ

    ಅಲ್ಪನ ನಮಸ್ಕಾರಗಳು…… ವಚನಕಾರರಿಗಿಂತಲು ಮೂದಲು ಕಂತಿಯನ್ನು ನಿನೆಯಿರಿ….ಪ್ರಸಕ್ತ ಸಮಾಜಕ್ಕ ಮಹಿಳಾ ಸಾಹಿತ್ಯದ ಅವಶ್ಯಕತೆ ಇದೆ ಅದನ್ನು ಸಮಯವೇ ನಿರ್ದಶಿಸಿದೆ… ಸಘರಷ,ಶೋಷಣೆಗಳು ದಲಿತ /ಬಂಡಾಯ ಸಾಹಿತ್ಯದಲ್ಲಿ ಮೂಡಿಬಂದಿವೆ…. ತ್ರಿವೇಣಿಯವರ ನೆಲೆಗಟಿನ ಮೇಲೆ ಸಾಹಿತ್ಯ ರಚಿಸುವದು ಉತ್ತಮ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: