ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಹಾಂತೇಶ ಪಾಟೀಲ ಹೊಸ ಕವಿತೆ- ಈ ರಾತ್ರಿಗಾಗಿ…

ಮಹಾಂತೇಶ ಪಾಟೀಲ

1. ಈ ರಾತ್ರಿಗಾಗಿ…

ಪ್ರತಿರಾತ್ರಿಕಾಯುವೆಕತ್ತಲಿಗಾಗಿ
ಅವನು ಬರುತ್ತಾನೆಂದಲ್ಲ
ಬೆಳಕಿನ ತೊಟ್ಟಿಲಲ್ಲಿ, ನಕ್ಷತ್ರಗಳ ಬಟ್ಟಲಲ್ಲಿ
ಚಂದ್ರನನ್ನುತರುತ್ತಾನೆ೦ದು

ಪ್ರತಿರಾತ್ರಿಕಾಯುವೆಕತ್ತಲಿಗಾಗಿ
ಅವನು ಬರುತ್ತಾನೆಂದಲ್ಲ
ಇರುಳೆಲ್ಲಾ ಇರುವೆಗಳ ಒಡಗೂಡಿತಂದು
ಸಕ್ಕರೆಗೊ೦ಬೆಯತುಟ್ಟಿಗಿರಿಸುತ್ತಾನೆ೦ದು

ಪ್ರತಿರಾತ್ರಿಕಾಯುವೆಕತ್ತಲಿಗಾಗಿ
ಅವನು ಬರುತ್ತಾನೆಂದಲ್ಲ
ಕೈಕು೦ಚದಿ ಕುಸರಿಗೊಂಡ ಕನಸುಗಳಿಗೆ
ಕಣ್ಣಬಣ್ಣವ ಬಣ್ಣಿಸಿ ತುಂಬುತ್ತಾನೆ೦ದು

ಕಾಯುವೆಕತ್ತಲಿಗಾಗಿ
ಒ೦ದು ಹೂವು ಹಣ್ಣಾಗಲು
ಎರಡು ಕನಸು ಕಣ್ಣಾಗಲು

2. ಪ್ರೇಮ ಪವಾಡ

ಈ ರಾತ್ರಿ
ಅವಳ ಊರಲ್ಲಿ ಮಳೆ ಸುರಿದು
ಬದುಕೆ ಮುಳುಗಿದೆಯಂತೆ !

ಈ ಹುಡುಗರು
ಸ್ವರ್ಗದಲ್ಲಿಯಾಕಾದರೂ
ಕಣ್ಣೀರು ಸುರಿಸುತ್ತಾರೋ !?

ಆ ಊರಿನಲ್ಲಿ
ಅವಳು ಅನ್ನವುಂಡರೆ
ಈ ಊರಿನಲ್ಲಿ
ಇವನಿಗೆ ಹೊಟ್ಟೆತುಂಬುತ್ತೆ !

ಪ್ರೀತಿಗೆ
ಹಸಿವು ಎಂದರೆ ಪ್ರೀತಿಯೆ

‍ಲೇಖಕರು Admin

7 June, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading