ಮಳೆ
ವಿ.ಎಸ್.ಶ್ಯಾನ್ ಭಾಗ್
ಮುಂಬೈನಿಂದ
ಮಳೆ ಬಂದಿದೆ ಹೊರಗೆ
ಸ್ಕೂಲು ಹುಡುಗನ ಮೊದಲ ಹೆಜ್ಜೆಯಂತೆ
ತುಂತುರು
–
ಮಳೆ ಬಂದಿದೆ ಹೊರಗೆ
ಹೆಂಗಳೆಯರ ಅಂಗಾಂಗ ಸ್ಪರ್ಶಿಸಿ
ಮುದ ಬೇಡುವ ಕಣ್ಣುಗಳಿಗೆ ಒಪ್ಪಿಸಿ
–
ಮಳೆ ಬಂದಿದೆ
ಮನೆಯೊಳಗೆ ದೃವಗಳ ಆಲಂಗಿಸಿ
ರಮ್ಯತೆಯ ತೇರುಕಟ್ಟಿ
ತುಳಸಿಯಂತಹ ಗಿಡಗಳಿಗೆ
ಬಸಿರ ನೀರು
ಬೇರುಗಳಿಗೆ ಹೊಸ ಹೆಸರು ಚಿಗುರು
–
ಮಳೆಬಂದಿದೆ ಬರಲಿ
ಹೊಸತಿಗೆ ಮುರಳಿ ಹೊರಳಿ
ಜಗಲಿಯಲ್ಲಿ ಕುಂಟ ಮನಸುಗಳಿಗೆ
ಒಪ್ಪಹಾಕಿದ ನೆನೆಪುಗಳ
ಉಪ್ಪಿನಕಾಯಿ ಭರಣಿ
–
ಮನೆ ಬಂದಿದೆ ಹೊರಗೆ
ನೆನಸಿ ಒದ್ದೆ ಒಳಗೆ






0 Comments