ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಳೆ ಬಂದಿದೆ ಹೊರಗೆ..

ಮಳೆ

ವಿ.ಎಸ್.ಶ್ಯಾನ್ ಭಾಗ್

ಮುಂಬೈನಿಂದ

 
ಮಳೆ ಬಂದಿದೆ ಹೊರಗೆ

ಸ್ಕೂಲು  ಹುಡುಗನ  ಮೊದಲ ಹೆಜ್ಜೆಯಂತೆ
ತುಂತುರು
–
ಮಳೆ ಬಂದಿದೆ ಹೊರಗೆ
ಹೆಂಗಳೆಯರ ಅಂಗಾಂಗ ಸ್ಪರ್ಶಿಸಿ
ಮುದ ಬೇಡುವ ಕಣ್ಣುಗಳಿಗೆ ಒಪ್ಪಿಸಿ
–
ಮಳೆ ಬಂದಿದೆ
ಮನೆಯೊಳಗೆ  ದೃವಗಳ ಆಲಂಗಿಸಿ
ರಮ್ಯತೆಯ ತೇರುಕಟ್ಟಿ
ತುಳಸಿಯಂತಹ ಗಿಡಗಳಿಗೆ
ಬಸಿರ ನೀರು
ಬೇರುಗಳಿಗೆ ಹೊಸ ಹೆಸರು ಚಿಗುರು
–
ಮಳೆಬಂದಿದೆ  ಬರಲಿ
ಹೊಸತಿಗೆ ಮುರಳಿ ಹೊರಳಿ
ಜಗಲಿಯಲ್ಲಿ ಕುಂಟ ಮನಸುಗಳಿಗೆ
ಒಪ್ಪಹಾಕಿದ ನೆನೆಪುಗಳ
ಉಪ್ಪಿನಕಾಯಿ ಭರಣಿ
–
ಮನೆ ಬಂದಿದೆ ಹೊರಗೆ
ನೆನಸಿ ಒದ್ದೆ ಒಳಗೆ

‍ಲೇಖಕರು G

18 September, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading