-ದೇವರಾಜ್ ಹುಣಸಿಕಟ್ಟಿ
ಕೊಲ್ಲುವುದು ಹೇಗೆ?
ಅಲ್ಲಿ…ಆಕಾಶದಲ್ಲಿ
ಎರಡು ಮೋಡಗಳು
ಮುತ್ತನಿಟ್ಟವು…
ಮಳೆ ಹುಟ್ಟಿತು…
ಮಳೆಯ ಕೊಲ್ಲುವುದು ಹೇಗೆ…?
ಮಳೆಯೋ
ನೆಲಕೆ ಮುತ್ತನಿಟ್ಟಿತು…
ನದಿ ಹುಟ್ಟಿತು…
ನದಿಯ ಕೊಲ್ಲುವುದು ಹೇಗೆ…?
ನದಿಯೋ…
ಹೊಲ ಗದ್ದೆಗಳಿಗೆ
ಮುತ್ತನಿಟ್ಟಿತು….
ಪೈರು ಹುಟ್ಟಿತು…
ಪೈರ ಕೊಲ್ಲುವುದು ಹೇಗೆ?
ಈ ಪೈರೋ
ಪ್ರತಿ ಜೀವಿಯ
ಅನ್ನವಾಗಿ ಅರಳಿತು…
ಈಗ
ಹೊಟ್ಟೆಗೆ
ಅನ್ನ ತಿನ್ನುವವರು….
ಮಳೆಯಿಂದ ಅನ್ನವಾದ ಪ್ರೀತಿಯ…
ಕೊಲ್ಲುವುದು ಹೇಗೆ?






0 Comments