ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಲ್ಲಿಕಾರ್ಜುನಗೌಡ ತೂಲಹಳ್ಳಿ ಹೊಸ ಕವಿತೆ: ಪರಿಮಳದ ಪಿಸುಮಾತು 

ಮಲ್ಲಿಕಾರ್ಜುನಗೌಡ ತೂಲಹಳ್ಳಿ

ಕತ್ತಲ ನಿಸ್ಸದ್ದಿನಲಿ
ಪರಿಮಳದ ಪಿಸುಮಾತು

ಪ್ರತೀ ರಾತ್ರಿ
ಒಬ್ಬಂಟಿಗೆ
ದಿಕ್ಕಾಗಿದ್ದ ನಕ್ಷತ್ರಗಳು
ಈ ಮೋಡಗಾಲದ ಬಿಡುವಿಗೆ
ಹನಿಗಳ ಸಂಗವ ಮಾಡಿ
ಊರ ತುಂಬಾ ಮಲ್ಲಿಗೆ

ಶ್ರಾವಣದ ಹೊಸ್ತಿಲಿಗೆ
ಶರಣಾದ ಆಷಾಢ
ಮೆಲ್ಲೆಲರ ಬೆರಳಿನಲಿ
ಸೌಗಂಧ ವೀಣೆ

ಇರುಳ ಹೆರಳಿನ ಲಯಕೆ
ಗರಿಗಟ್ಟಿ ಆಲಾಪ
ರಾಗಮಿರುಗಿನ ತೇರು
ಬಯಲ ನಿಲವು

ವಿವರಗಳ ತಡಕಾಡಿ
ಕೆಂಡವಾಯಿತು ತ್ರಾಣ
ಸೋಗು ಸುಟ್ಟಿತು
ರಂಟೆ ಹೊಕ್ಕಿತು
ಒಡಲ ತೇಜದ ಮುಂದೆ
ಮಿಥ್ಯ ಮರಣ
     

‍ಲೇಖಕರು avadhi

19 June, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading