ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮರುಳಸಿದ್ದಪ್ಪ ದೊಡ್ಡಮನಿ ಗಜಲ್

ಮರುಳಸಿದ್ದಪ್ಪ ದೊಡ್ಡಮನಿ

ನಿನ್ನ ಹೆಜ್ಜೆ ಗುರುತು ಮಣ್ಣಿನ ಹುಡಿಯಲಿ ಅಳುಕಿದೆ ಸಾಕಿ
ಎದೆಯ ದಾರಿಯಲಿ ನಡೆದು
ಬದುಕು ತುಂಬಿ ತುಳುಕಿದೆ ಸಾಕಿ

ಒಲವಿನ ಪರಿಮಳ ಒಡೆದ ಕನ್ನಡಿ ಚೂರಿಗೆ ಮುತ್ತಿಕ್ಕಿದೆ ನೋಡು
ಉಸಿರ ಬಸಿದು ಕನಸು ಕಟ್ಟಿ ಕಾಲು ಹಾದಿ ಸಾಗಲು ನರಳುತಿದೆ ಸಾಕಿ

ಭಾವ ಬಯಲಿಗೆ ಬೆಸುಗೆ ಹಾಕಿ ಮೌನ
ಮನೆ ಮಾಡಿದೆ
ಬಾಹು ಬಂಧನದಿ ಬಂಧಿಯಾಗುವ ಹೊಸ ಕನಸು ಚಿಗುರುತಿದೆ ಸಾಕಿ

ಕಮರಿದ ಆಸೆ ಹಸಿರಾಗಿ ಉಸಿರ ಸೂಸಲು ಬಂದಿದೆ
ಒಳಗಿನ ಗಾಯ ಮಾಯುವ ಮುನ್ನ
ಪ್ರತಿ ಬಿಂಬ ಕಾಡುತಿದೆ ಸಾಕಿ

ಮರುಳನೆದೆಯ ಹಾಸಿಗೆಯಲಿ ನಕ್ಷತ್ರದ ಬೆಳಕು ಹರಡಿ ಚಿತ್ತಾರ ಚೆಲ್ಲಿವೆ
ಹುಡಿ ತುಳಿದ ಪಾದಕೆ ಮಲ್ಲಿಗೆ ಹಾಸಿ ಮನವು ನಗುತಿದೆ ಸಾಕಿ

‍ಲೇಖಕರು Avadhi

5 August, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading