ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತೆ ಮತ್ತೆ- ಮೊಬೈಲ್

-ವಿಶ್ವವಿನೂತನ

ಮತ್ತೆ ಮತ್ತೆ- ಮೊಬೈಲ್
ನಾನು ಈಗ ಮೊಬೈಲ್ ನೋಡುತ್ತೇನೆ
ಗಾಯಗೊಂಡ ಪಕ್ಷಿಯಂತೆ ಮತ್ತೆ ಮತ್ತೆ
ಬದುಕಿನ ನೋವ ಮರೆಯಲು
ಮನಸ್ಸಿನ ಮಾತುಗಳನ್ನು ಹಾಗೆಯೇ
ಕಳಿಸುತ್ತೇನೆ ಮತ್ತೆ ಮತ್ತೆ
ನೆಮ್ಮದಿ ಹುಡುಕಲು
ಓದುತ್ತೇನೆ ನಿನ್ನ ಮೊದಲ
ಮೆಸೇಜುಗಳನ್ನು ಮತ್ತೆ ಮತ್ತೆ 
ಖುಷಿಯ ಪಡೆಯಲು
ಕುಟ್ಟುತ್ತೇನೆ ಒಮೊಮ್ಮೆ ಅರ್ಥಹೀನ 
ಮೆಸೇಜುಗಳ ಮತ್ತೆ ಮತ್ತೆ 
ಒಂಟಿತನ ಕಳೆಯಲು
ಕಳಿಸುತ್ತೇನೆ ಮೌನವನ್ನೇ ಮಾತಾಗಿಸಿ ಒಮೊಮ್ಮೆ 
ಮುರಿದ ವೀಣೆಯ ತಂತಿಯಂತೆ 
ಅಪಸ್ವರ ಕೀರುತ್ತಲೇ ಇದ್ದರೂ ಮತ್ತೆ ಮತ್ತೆ 
ಸಮಯ ಸರಿಸಲು
ಕಳಿಸುತ್ತೇನೆ ಈಗೀಗ ಆ ಫೋಟೋಗಳನ್ನೇ 
ಫೋಟೋ ಸರಿ ಇಲ್ಲವೆಂದು ಗೊತ್ತಿದ್ದರೂ
ಕಳಿಸುತ್ತೇನೆ ಮತ್ತೆ ಮತ್ತೆ 
ನಿನ್ನ ಖುಷಿಪಡಿಸಲು 
 
ತಲುಪುತ್ತವೆ ಕೇವಲ ಮತ್ತೆ ಮತ್ತೆ ಒತ್ತಿದ ಪದಗಳು 
ತಲುಪುದಿಲ್ಲ ಮನಸ್ಸಿನ ಭಾವನೆಗಳು 
ಆದರೂ ಕಳಿಸುತ್ತೇನೆ ಮತ್ತೆ ಮತ್ತೆ
ನಿನ್ನ ಜೊತೆ ಸಮಯ ಕಳೆಯಲು 
ಹೀಗೆಯೇ ಆದರೆ ಮರೆತೇ ಬಿಡಬಹುದು 
ನಾನು ಮತ್ತೆ ಮತ್ತೆ ಮಾತನಾಡಲು 
ನನ್ನ ಮೆಸೇಜಿಗೆ ನಿನ್ನದೊಂದು ಸ್ಮೈಲು 
ನಿನ್ನ ಮೆಸೇಜಿಗೆ ನನ್ನದೊಂದು ಹಾರ್ಟ್ 
ಹೀಗೆಯೇ ಇಮೋಜಿಗಳಲ್ಲೇ ಕಳೆದುಹೋಗುತ್ತದೆ 
ಮತ್ತೆ ಮತ್ತೆ ಸಿಗದ ಲೈಫು

‍ಲೇಖಕರು Admin

24 September, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading