ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೇಪಥ್ಯಕ್ಕೆ ಸರಿಯುವ ಮೊದಲು

-ವಿಜಯಲಕ್ಷ್ಮಿ ಸತ್ಯಮೂರ್ತಿ

ಆಗಸದ ಚುಕ್ಕಿಗಳನ್ನೊಮ್ಮೆ ಎಣಿಸಲಾದೀತೇ ಎಂದು ಪರೀಕ್ಷಿಸಬೇಕು

ರಾಗಗಳ ಗೋಜಿಗೆ ಹೋಗದೇ
ಸ್ವಚ್ಚಂದವಾಗಿ ನನ್ನಿಷ್ಟದ ಹಾಡುಗಳನ್ನು ಗುನುಗುನಿಸಬೇಕು

ನೀನೇಕೆ ಇಷ್ಟು ಗಟ್ಟಿ ಎಂದು
ಒಮ್ಮೆ ಹೃದಯವನ್ನು
ಕೇಳಿಬಿಡಬೇಕು

ಎದೆಯ ಭಾವನೆಗಳಿಗೆ ಬಣ್ಣ ಬಳಿದು ಹಕ್ಕಿಯಂತೆ ಹಾರಲು ಬಿಡಬೇಕು

ಮಧುರವಾದ ನೆನಪುಗಳನ್ನು
ಮತ್ತೆ ಮತ್ತೆ
ಮೆಲುಕುಹಾಕಬೇಕು

ನೋವುಗಳನ್ನೆಲ್ಲ ಗಾಳಿಗೆ ತೂರಿ ಅವುಗಳು ನಕ್ಕು ಜೀಕುವುದನ್ನು ಕಾಣಬೇಕು

ಕತ್ತಲಲ್ಲಿ ಕುಳಿತು ಸೋತ ಒಡಲನ್ನು ಸಾಂತ್ವನದ
ಮಳೆ ಹೊಯ್ದು ತೊಯ್ಯಿಸಬೇಕು

ನಿತ್ಯದ ಚುಚ್ಚುಮಾತು, ಅಪಮಾನ ಇತ್ಯಾದಿಗಳನ್ನು ಮರೆತು ಮನಸಾರೆ ನಕ್ಕುಬಿಡಬೇಕು

ನಗುವಿನ ಕಣ್ಣೀರೆಂದು ತಿಳಿದು
ಮೌನದಲ್ಲೇ ಅಳುತ್ತಾ ಕತ್ತಲಲ್ಲಿ
ನಾ ಕರಗಿಹೋಗಬೇಕು

ನೇಪಥ್ಯಕ್ಕೆ ಸರಿದುಬಿಡಬೇಕು

‍ಲೇಖಕರು Admin

24 September, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading