ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಣ್ಣ ಕಾಯಕ ಕಾಯುವುದಷ್ಟೇ…

ಸಂತೆಬೆನ್ನೂರು ಫೈಜ್ನಟ್ರಾಜ್

ಎಷ್ಟೇ ಬಿಡಿಸಿದರೂ ಅಲ್ಲೊಂದು ಇಲ್ಲೊಂದು ಮೊಗ್ಗು ಬಳ್ಳಿಯಲೇ ಉಳಿದಂತೆ 
ಅಗೋ ಉಳಿದಿವೆ ನೋಡು ಆಡದ ಎಷ್ಟೋ ಮಾತುಗಳು
ಹರಿವ ನೀರ ನೋಡುತ ದಡ ನಿಟ್ಟುಸಿರಿಟ್ಟಂತೆ ಸುಮ್ಮನೆ!
ಬಗೆದಷ್ಟು ಬೇರು ಕಾಂಡದ ಸುತ್ತ, ತಾಯಿಬೇರು ಭದ್ರ ನಮ್ಮೊಲವಿನಂತೆ

ಮಣ್ಣ ಕಾಯಕ ಕಾಯುವುದಷ್ಟೆ;
ಮುಗಿಲಿಗೆ ಮೈ ಚಾಚುವುದ ಕಾಣುತ ಬರಿದೆ ಸುಮ್ಮನೆ!
ಯಾರಿಗೆ ಗೊತ್ತು ಯಾವ ಬೀಜ ಸಸಿ, ಮರ ಆಗುವುದೆಂದು

ಅಲ್ಲವೇ? ಒಲವ ಹೊತ್ತ ಹೃದಯದೊಲು ಅನುರಾಗ ಗೀತೆ
ಚರಮಗೀತೆಯಾಗುವುದೋ ಏನೋ… ಸುಮ್ಮನೆ!
ಮಾತುಗಳು ಮನೆ ಮುರಿಯುತ್ತವಂತೆ, ಏನೋಪ ಮನಸುಗಳು
ಬೂದಿಯಾಗಿದ್ದು ಗೊತ್ತು ಮಣ್ಣು, ಬೀಜ ಮತ್ತು ಪ್ರೀತಿಗೆ ಮರವಾಗೋ

ಹಾದಿಗೆ ಬಿಸಿ ನೀರ ಸುರಿಯಬಾರದು ಸುಮ್ಮನೆ!
ಎದೆಗಿಳಿದ ಅಷ್ಟೂ ಮಾತುಗಳು ಒಲವಾಗುವುದು ಎಂದವರಾರು
ಬಿಡಿ, ನಾಲ್ಕು ದಿನದ ಬದುಕಿದು ಇದ್ದಷ್ಟು ದಿನ ಪ್ರೀತಿಸೋಣ
ಒಲವೊಂದಿರೆ ಸಾಕು, ಸಾವಾದರೂ ಫೈಜ್ ನಗುವ ಸುಮ್ಮನೆ!

‍ಲೇಖಕರು Avadhi

24 November, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading