ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭೂಗತ ಲೋಕದ ವ್ಯಾಕರಣ ಬದಲಿಸಿದ ಸಿನಿಮಾ!

-ಟಿ ಎನ್ ಸೀತಾರಾಂ

ಮೂರು ದಶಕಗಳ ಹಿಂದಿನ ಬೆಂಗಳೂರನ್ನು ಮರುಸೃಷ್ಟಿ ಮಾಡುವುದು ಕಷ್ಟದ ಕೆಲಸ. ಅಂದಿನ ಜನದ ಮನೋಸ್ಥಿತಿಯನ್ನು ಸೃಷ್ಟಿಸುವುದು ಇನ್ನೂ ಕಷ್ಟದ ಕೆಲಸ….

ಚಿತ್ರದ ಸಾವರಾರು ಫ್ರೇಮುಗಳನ್ನು ಅದೇ ಶ್ರದ್ಧೆಯಿಂದ ಕಲಾತ್ಮಕವಾಗಿ ತುಬಿಸುವುದು ಕೂಡ ಮಹಾನ್ ಕಷ್ಟ. ಚೈತನ್ಯ ಈ ಕೆಲಸವನ್ನು ಸಾಧಿಸಿದ್ದಾರೆ
ಭೂಗತ ಲೋಕ ದ ಕಥೆಗಳು ನಿರೀಕ್ಷಿತ ಜಾಡಿನಲ್ಲಿಯೇ ಓಡುತ್ತವೆ.ಆದರೆ ಕಥೆಯನ್ನು ಹೇಳುವ ರೀತಿ, ದೃಶ್ಯಗಳನ್ನು ಕಟ್ಟುವ ಅನನ್ಯ ಬಗೆ ಚೈತನ್ಯ ರವರ ‘ಬಲರಾಮನ ದಿನಗಳು’ ಚಿತ್ರವನ್ನು ಅತ್ಯಂತ ಮೆಚ್ಚುಗೆಯಿಂದ ನೋಡುವಂತೆ ಮಾಡುತ್ತದೆ. ಕೆಲವು ಘಟನೆಗನ್ನಂತೂ ದೃಶ್ಯ ಕಾವ್ಯದಂತೆ ಕಾಣುತ್ತವೆ.
ಅಂದಿನ ದಿನಗಳಲ್ಲಿ ಭೂಗತಲೋಕದ ವ್ಯಕರಣ ಬದಲಾವಣೆ ಹೊಂದುತ್ತಿತ್ತು ಎನ್ನುವುದನ್ನು ಚೈತನ್ಯ ಸಮರ್ಥವಾಗಿ ಚಿತ್ರಿಸಿದ್ದಾರೆ.

ಇದರಲ್ಲಿ ಬರುವ ನೂರಾರು ಪಾತ್ರಗಳೂ ಕೂಡ ಅಂದಿನ, ಆ ಲೋಕ,ದ ಮನುಷ್ಯರಂತೆಯೇ ಅನಿಸುತ್ತದೆ. ಭೂಗತ ಲೋಕದ ದೈಹಿಕ ಹೊಡೆದಾಟಗಳು ಪ್ರೇಕ್ಷಕರಿಗೆ ರಿಪೀಟ್ ಎನ್ನಿಸುವಂತೆ ಮಾಡುತ್ತವೆ. ದೈಹಿಕ ಹೊಡೆದಾಟಗಳ ಕಥಾನಕದ ಮಿತಿಯೇ ಅದು ಆದ್ದರಿಂದಲೇ ಇರಬೇಕು..ಭೂಗತ ಲೋಕದ ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳಲ್ಲಿ ಒಂದಾದ ಗಾಡ್ ಫಾದರ್ ನಲ್ಲಿ ದೈಹಿಕ ಹೊಡೆದಾಟಗಳಿರಲಿಲ್ಲ.ಬದಲಿಗೆ ಬುದ್ಧಿ ಮತ್ತು ವ್ಯೂಹಗಳ ಯುದ್ಧದ ಕಥಾನಕವಿತ್ತು.

ಭೂಗತ ಲೋಕದ ಚಿತ್ರಗಳ ಸ್ಪಷಲಿಸ್ಟ್ ಎನ್ನಿಸಿಕೊಂಡಿದ್ದ ಇಟಲಿಯ ರೋಸ್ಸಿಯ ಮಹಾನ್ ಚಿತ್ರಗಳಾದ Return to Palmero, chronicle of a death foretold..ಮಂತಾದ ಚಿತ್ರ ಗಳಲ್ಲಿ ಹೊಡೆದಾಟಗಳಿರಲಿಲ್ಲ. ಬದಲಿಗ ತಣ್ಣನೆಯ ಕ್ರೌರ್ಯವನ್ನು ಸೃಷ್ಟಿಸುವ ಕಥಾನಕವಿತ್ತು. ಇಲ್ಲೂ ಕೂಡ ಚೈತನ್ಯರವರು ಹಾಗೆ ಮಾಡಬಹದಿತ್ತೇನೋ. ಹಿಂದೆ ಆ ದಿನಗಳು ಎಂಬಂಥ ಇದೇ ಜಾನರ್ ನ ಸುಂದರ ಚಿತ್ರ ಕೊಟ್ಟಿದ್ದರು ಚೈತನ್ಯ
ಇರಲಿ. ಅದನ್ನು ಪಕ್ಕಕ್ಕಿಟ್ಟರೂ ಚಿತ್ರ ತುಂಬಾ ಚೇತೋಹಾರಿಯಾಗಿ, ಸುಂದರವಾಗಿ ಕಾಣುತ್ತದೆ.

ಎಲ್ಲ ಪಾತ್ರಧಾರಿಗಳ ಅಭಿನಯವೂ ಪರ್ಫೆಕ್ಟ್ ಅನಿಸುತ್ತದೆ. ಅದರಲ್ಲೂ ಬಲರಾಮ, ಪಾತ್ರದ ವಿನೋದ್ ಪ್ರಭಾಕರ್ ಮನಸ್ಸಿನಾಳಕ್ಕೆ ಇಳಿಯುವಂಥ ಸುಂದರ ಅಭಿನಯ ನೀಡಿದ್ದಾರೆ, ಮತ್ತು ರೈ ಕಾತ್ರದ ರಮೇಶ್ ಇಂದಿರಾ ರವರದು ವಾಹ್ ಎನ್ನುವಂಥ ಅನನ್ಯ ರೀತಿಯ ಆಭಿನಯ ಇದು ಚಿತ್ರದ ಅತ್ಯಂತ ಪಾಸಿಟಿವ್ ಅಂಶಗಳು ದೀರ್ಘವೆನಿಸುವ ಈ ಚಿತ್ರದಲ್ಲಿ ಕನಿಷ್ಠ ಮೂವತ್ತು ನಿಮಿಷಗಳಷ್ಟು ಕತ್ತರಿಸಿದ್ದರೆ ಪ್ರೇಕ್ಷಕರಿಗೆ ಪ್ರೀತಿ ಹೆಚ್ಚುತ್ತಿತ್ತು. ಹಾಗೆ ಮಾಡಿದರೆ ನಾನಂತೂ ಮತ್ತೊಮ್ಮೆ ಈ ಚಿತ್ರವನ್ನು ಪ್ರೀತಿಯಿಂದ, ಕಲಿಯುವ ದೃಷ್ಟಿಯಿಂದ ನೋಡುತ್ತೇನೆ. ಅತ್ಯಂತ ಸೃಜನಾತ್ಮಕವಾದ, ಅಫರೂಪದ ಬಗೆಯ ಚಂದದ ಚಿತ್ರ.

ಅಭಿನಂದನೆಗಳು ಚೈತನ್ಯ

‍ಲೇಖಕರು Admin

1 July, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading