ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎ.ಪಿ.ಮಾಲತಿ ಹಾಗೂ ಎಂ.ಎಸ್.ವೇದಾ ಅವರಿಗೆ ಅನುಪಮಾ ಪ್ರಶಸ್ತಿ

ಕರ್ನಾಟಕ ಲೇಖಕಿಯರ ಸಂಘವು 2025 ಮತ್ತು 2026 ನೆಯ ಸಾಲಿನ ಅನುಪಮಾ ಪ್ರಶಸ್ತಿಯನ್ನು ಘೋಷಿಸಿದೆ.

ಡಾ// ಅನುಪಮಾ ನಿರಂಜನ ಅವರು ವೃತ್ತಿಯಲ್ಲಿ ವೈದ್ಯರಾಗಿ, ಪ್ರವೃತ್ತಿಯಲ್ಲಿ ಲೇಖಕಿಯಾಗಿ ಎರಡೂ ಕ್ಷೇತ್ರದಲ್ಲಿ ಅಪಾರವಾದ ಕೊಡುಗೆ ನೀಡಿದ್ದಾರೆ. ಮನೋವೈಜ್ಞಾನಿಕ ವಿಶ್ಲೇಷಣೆಯನ್ನು ಬರಹದಲ್ಲಿ ಸದಾ ಜೀವಂತವಿರಿಸಿದ್ದ ಅವರು ಎಲ್ಲ ಕಾಲಕ್ಕೂ ಸಲ್ಲುವ ಲೇಖಕಿ. ಅವರ‌ ಆಸೆಯಂತೆ ಮಕ್ಕಳು ಕಲೇಸಂನಲ್ಲಿ ಇಟ್ಟ ದತ್ತಿ ಇದು. ಅವರ ಹೆಸರಿನಲ್ಲಿ ಪ್ರತಿವರ್ಷ ಜೀವಮಾನ ಸಾಧನೆಗಾಗಿ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಯು ಹತ್ತು ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ ಎಂದು ಕಲೇಸಂ ಅಧ್ಯಕ್ಷರಾದ ಡಾ. ಆರ್. ಸುನಂದಮ್ಮ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2025 ನೆಯ ಸಾಲಿಗೆ – ಎ. ಪಿ. ಮಾಲತಿ ಹಾಗೂ 2026 ನೆಯ ಸಾಲಿಗೆ – ಎಂ. ಎಸ್. ವೇದಾ ಅವರನ್ನು ಆಯ್ಕೆ ಮಾಡಲಾಗಿದೆ.

ತೀರ್ಪುಗಾರರಾಗಿ ಹೇಮಲತಾ ಮಹಿಷಿ, ಎಚ್.ಆರ್. ಸುಜಾತ ಹಾಗೂ ಸುಮಾ ಸತೀಶ್ ಅವರಿದ್ದರು. ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಗಸ್ಟ್ ನಲ್ಲಿ ನಡೆಯಲಿದೆ.

‍ಲೇಖಕರು Admin

24 July, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading