ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಣ್ಣಲಿ ಬೆರೆತು ಕರೆಯತ್ತಿದೆ..

-ನಾ ದಿವಾಕರ

ನನ್ನ ಗುರುತು ಎಲ್ಲಿದೆ ?

ದೇಹ ನನ್ನದೆನ್ನಲು
ಸಾಕ್ಷಿಯೆಲ್ಲಿದೆ ?
ಯಾರ ಮೊರೆ ಹೋಗುವುದು ?
ಎಳೆಯ ತೊಗಲಿನ ಮಣ್ಣು
ನರಮಂಡಲದೊಳಡಗಿ
ಎಪ್ಪತ್ತರ
ಬೆವರು ನೆತ್ತರ ಬೆರೆತಿದೆ
ಅವರು ಗುರುತು ಕೇಳುತ್ತಿದ್ದಾರೆ ;

ಬೆಂದ ಬೆರಳುಗಳ ಮುದ್ರೆಗೆ
ಜೀವ ಎಲ್ಲಿಯದು ?
ಎದೆಯ ಸದ್ದಡಗುವ ಹೊತ್ತಿನಲಿ
ಅಜ್ಜನಜ್ಜನ ಹೆಜ್ಜೆ
ಮುಳುಗಡೆಯ ಯಾತನೆಯಲಿ
ವಿಳಾಸ ಎಂದರೇನು ?
ಅವರು ಗುರುತು‌ ಕೇಳುತ್ತಿದ್ದಾರೆ ;

ಸುಟ್ಟ ಹಟ್ಟಿಗಳ ಸುತ್ತ
ನೆಟ್ಟ ಕಲ್ಲುಗಳು
ಹರಿದೆಸೆದ ಎಳೆ ಮೊಳಕೆಗಳ
ಕೈ ಬೀಸಿ ಕರೆಯುತ್ತಿವೆ
ಉಪ್ಪರಿಗೆಯ ಕುಡುಗೋಲು
ಇಳೆ ಹಸಿರನಳಿಸಿದೆ
ಅವರು ಗುರುತು ಕೇಳುತ್ತಿದ್ದಾರೆ ;

ಅವಶೇಷಗಳಲಿ
ಬೆಂದ ಅನ್ನದ ಕಾಳುಗಳು
ಹಸಿದೊಡಲ ತಣಿಸಿವೆ
ಅಂಗಳದ ಹಣತೆ
ಕತ್ತಲನಳಿಸುವ ಹೊತ್ತಿನಲಿ
ಬೂಟುಗಾಲಿನ ಸದ್ದಿಗೆ
ತರಗೆಲೆಗಳು ಚೀರಾಡುತಿವೆ
ನಾಳೆಯೆಂಬುದ ಕಾಣೆ
ಅವರು ಗುರುತು ಕೇಳುತ್ತಿದ್ದಾರೆ ;

ಹಿತ್ತಲಿನ ಹೊಂಗೆಯ ಅಡಿ
ಹೆತ್ತ ಅಸ್ಥಿಗಳಿವೆ
ಮನದಾಳದ ಬೇಗುದಿಯಲಿ
ಅಳಿದವರ ನೆನಪುಗಳಿವೆ
ಬಿತ್ತ ಬೀಜಗಳು ಸುರುಟಿ
ಹೊತ್ತ ನೇಗಿಲ ತುಕ್ಕು
ಮಣ್ಣಲಿ ಬೆರೆತು ಕರೆಯತ್ತಿದೆ
ಅವರು ಗುರುತು ಕೇಳುತ್ತಿದ್ದಾರೆ !

‍ಲೇಖಕರು Admin

1 July, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading