ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೆವರೊಡೆವ ಕ್ಷಣಕೆ ಕಾಯುತಿರಲು..

ಹಾಗೊಂದು…ಹೀಗೂ ಒಂದು…

rajani garuda

ರಜನಿ ಗರುಡ 

she birdಹೊರಗೊಂದು ಕಾಲಿಟ್ಟೆ
ಆಡಿದ್ದ ಮಾತು
ಒಂಟಿಕಾಲಲ್ಲೇ ನೆಲದಲ್ಲಿ
ಬೇರಿಳಿಸಿದ್ದು ತಿಳಿಯಲೇ ಇಲ್ಲ
ಇನ್ನೇನಿದ್ದರೂ
ಆಕಾಶಕ್ಕೆ ನೆಗೆತು ಚಿಗಿಯ ಬೇಕು
ಅಲ್ಲಿ ಹೂ ಬಿಟ್ಟು
ಪರಿಮಳದಪ್ಪಣೆಗೆ ಕಾಯಬೇಕು
******
ಪ್ರೇಮದ ಕೈ ದೀವಿಗೆಯ
ಹಿಡಿದು ಹೊರಟಿದ್ದೇನೆ
ತಲುಪುವ ತಾಣ ಮಾತ್ರ
ದೀವಿಗೆಗೇ ತಿಳಿದಿರಬೇಕು
******
ಈ ಕತ್ತಲೆಯ ಬೆನ್ನಿಗಂಟಿರುವ
ಬೆಳಗಲ್ಲಿ ಪಡೆದದ್ದೆಷ್ಟು….!!??
ಎದುರು ಗೋಡೆಯೂ
ಬೆವರೊಡೆವ ಕ್ಷಣಕೆ ಕಾಯುತಿರಲು
ಕತ್ತಲಿಗೇ ಕೈಕಾಲು ಮೂಡಿ
ತನ್ನ ಗಾಢ ತೆಕ್ಕೆಯೊಳಗೆ
ಸೆಳೆದುಕೊಂಡು ಬಿಡಲಿ
ಅಲ್ಲಿ ಹತ್ತಿ ಉರಿದಿದ್ದೆಲ್ಲ
ನನ್ನ ಬೆಳಗಾಗಲಿ
******
ಏನೂ ಸಿಗದಾಗ ನಿನ್ನ
ನೆನಪಿಗಾತುಕೊಳ್ಳುತ್ತಿದ್ದೆ
ಈಗದನು ಊರುಗೋಲು
ಮಾಡಿಕೊಂಡಿದ್ದೇನೆ

‍ಲೇಖಕರು Admin

26 June, 2016

1 Comment

  1. please i am waiting

    manadalli tumbiruva nova
    mareyalu alutide jeeva
    maretu mareyagoke kadutide bava
    bavaneyalli badukutiruva jeevakke
    yavaga neleyaguvano hava

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading