ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೆತ್ತಲೆ ದುಂಬಿಯ ಕಂಡು, ಬೆತ್ತಲೆ ಹೂವು ನಾಚಿದ್ದು..

– ನವೀನ್ ಮಧುಗಿರಿ

ಎರಡು ತೀರಗಳು
ಕೈ ಹಿಡಿದು ನಡೆಸುತಿವೆ
ಹರಿವ ನದಿಯನ್ನು
ದೂರ ಕಡಲಿಗೆ

ನ್ಯಾಯಬೆಲೆ ಅಂಗಡಿಯ
ಸೀಮೆಎಣ್ಣೆ
ವರದಕ್ಷಿಣೆ ಕಿರುಕುಳಕ್ಕೆ
ಬಳಕೆಯಾಗಿದ್ದು
ದುರಂತ ಅನ್ಯಾಯ


ದೀಪವು ಆರುವ ಮುನ್ನ
ಗಾಳಿಗೆ ಹೇಳಿದ
ಕೊನೆಯ ಮಾತು-
‘ನಿನ್ನನ್ನೇ ಪ್ರೀತಿಸುವೆ’.

ಬೆತ್ತಲೆ ಕೊಳದ
ಹೊಕ್ಕಳ
ಚುಂಬಿಸುತಿರುವನು
ಹುಣ್ಣಿಮೆಯ
ಪೋಲಿ ಚಂದಿರ

ತಂಗಾಳಿಯು
ಉಸಿರಾಡುವಾಗ
ಮೊಗ್ಗುಗಳು ಅರಳಿ
ಹೂವಾದವು


ಈ ಮೋಡಗಳಿಗೂ
ಮತ್ತು ಆಕಾಶಕ್ಕೂ
ಅಂತಹ ಯಾವುದೇ
ಬಾಂಧವ್ಯವಿಲ್ಲವೆಂಬ ಸತ್ಯವನ್ನು
ನಾನು ಬಲ್ಲೆ

ಬೆತ್ತಲೆ ದುಂಬಿಯ ಕಂಡು
ಬೆತ್ತಲೆ ಹೂವು
ನಾಚಿದ್ದು
ಇದುವರೆಗೂ
ನಾನು ಕಂಡಿಲ್ಲ

ರೈತನೆಂದರೆ-
ಕೆಂಪು ಬೆವರಿನ
ಉಪ್ಪುಪ್ಪು ನೆತ್ತರಿನ
ಹಸಿರು ಮನುಷ್ಯ

ನಾವಿಬ್ಬರೂ
ಅಂಗೈ ಬೆಸೆದುಕೊಂಡು
ನಡೆದ ಮೇಲಲ್ಲವೇ ?
ಆ ರಸ್ತೆಯ ಇಕ್ಕೆಲಗಳ
ಮರಗಳಲ್ಲಿ
ಹೂವುಗಳು ಅರಳಿದ್ದು!


ಕೊಳದ ಮಡಿಲಲ್ಲಿ
ಹೂವಿನಂತ ಮಗು
ಇಂದು ಹುಣ್ಣಿಮೆ

ಮಾಲೆ ಕಟ್ಟುವ
ಕೈಗಳಿಗೆ
ಸಾವಿರ ಹೂಗಳ
ಸಾವಿನ ಸೂತಕ

ತೀರ ತಬ್ಬುವ
ಕಡಲಿಗೆ
ನೂರು ನದಿಗಳ
ಪ್ರೋತ್ಸಾಹ

ವಸುಂಧರೆಯ
ಚೆಲುವ ಮೋಹಿಸಿದ
ಚಂದಿರ
ಬೆಳದಿಂಗಳ ಸ್ಖಲಿಸಿಕೊಂಡ

ಬಡಗಿಯ ಬಡತನ
ಸಿರಿವಂತರ
ಮನೆಯ ಸಿಂಗಾರ

ಹೂವ ಪ್ರೀತಿಸುವೆ,
ದುಂಬಿಯನೂ..
ನಾನೀಗ
ಯಾರ ಪರ ನಿಂತು
ನ್ಯಾಯ ಹೇಳುವುದು?

ಸೌದೆಯನ್ನು ಹೊರೆ
ಹೊತ್ತ
ಅವ್ವನ ನೆತ್ತಿಯ ಮೇಲೆ
ಸಂಸಾರದ
ಹಸುವಿನ ಭಾರ

ಮನಸಿಗೂ ತೂಕವುಂಟು!
ಕಿಟಕಿ ಪಕ್ಕದ
ಸೀಟಿನಲ್ಲಿ ಕೂತ ನಿನಗೆ
ಕೈ ಬೀಸುವಾಗ
ಬಲು ಭಾರವೆನಿಸಿತ್ತು.

ತಂಗಾಳಿಯ ಹರೆಯಕ್ಕೆ
ಹೂವೊಂದು
ಮೈ ನೆರೆಯಿತು

ನೇಸರ
ಮೈ ಮುರಿದು
ಮೇಲೆದ್ದು ಬಂದ
ದೂರ ಬೆಟ್ಟದ
ಮಡಿಲಿನಿಂದ

 
 

‍ಲೇಖಕರು G

11 December, 2014

5 Comments

  1. Mohan V Kollegal

    ಸೂಪರ್

  2. smitha Amrithraj

    Chendada Hani kavithegalu..

  3. mmshaik

    kavitegaLalli taajatanavide….nice sir!!!

  4. Haritha

    Chennagive Naveen

  5. ಸುರೇಶ.ಎಲ್.ರಾಜಮಾನೆ, ರನ್ನಬೆಳಗಲಿ

    ಸೂಪರ್ ಕಣ್ರೀ.. ಪ್ರತಿ ಪದ್ಯವೂ ಇಷ್ಟವಾಯ್ತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading