ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬುದ್ಧ ಮತ್ತು ಗೌತಮಿ ಹೊಲೆದ ಚಾದರ

 ಭವ್ಯ ಕಬ್ಬಳಿ

ಇದ್ದದ್ದೆಲ್ಲವ ಹಿಂದೆಯೇ ಬಿಟ್ಟು ತೊರೆದ,
ಇವನಿಂದೆಯೇ ನಡೆದವರಿಗೆ
ಸಿಕ್ಕರೂ ಸಿಗದ ಸರಳ ಬುದ್ಧನಾದ

ಹುಡುಕಿ ಹೊರಟರೆ
ಸಿದ್ಧಾರ್ಥ ಸಿಗಬಹುದು,
ಆದರೆ ಬುದ್ಧ!
ಸುಲಭಕ್ಕೆ‌ ಸಿಗುವನೆ?

ನಾನು ಅವನಂತಾದರೂ
ಬುದ್ಧ ಮಾತಾದರೂ,
ಬುದ್ಧ ಬುದ್ಧನೇ-
ನಾನು ಅವನನ್ನು
ಸದಾ ಹುಡುಕುವ ಹಿಂಬಾಲಕನೆ


ಒಂದು ಸಂಜೆಯ ಚಳಿಗೆ
ಬುದ್ಧನ ಮೈ ನಡುಗುವುದ ಕಂಡು
ತಾಯಿ ಗೌತಮಿಯ ಎದೆ ನಡುಗುತ್ತದೆ,
ಪ್ರತೀ‌ ಎಳೆಯನ್ನು ತಪ್ಪಸ್ಸಿನಂತೆಯೆ ನೇಯ್ದು
ಪುಟ್ಟ ಚಾದರವ ಹೊಲೆದವಳಿಗೆ,
ಚಾದರವನ್ನು ಅಂಗೈಯಲ್ಲೂ ಮುಟ್ಟದ ಬುದ್ಧ-
ಕೊಡುವುದೇ ಆದರೆ
ಇಡೀ‌ ಸಂಗದವರಿಗೂ ಹೊಲೆದುಬಿಡು ಎನ್ನುತ್ತಾನೆ

ಅವನು ಚಾದರವ ನಿರಾಕರಿಸಿ
ಸಂಗದವರ ತಾಯಿಯಂತೆ ಕಾಣುತ್ತಾನೆ,
ಇವಳು ಮರುಮಾತನಾಡದೆ
ಬುದ್ಧನಂತೆಯೇ ಮೌನತೊಡುತ್ತಾಳೆ

ಬುದ್ಧನೆದಿರು ಎಲ್ಲರೂ ಸಮಾನರೆ
ಸಂಗದೊಳಗೊಬ್ಬಳಾದ
ತನ್ನ ತಾಯಿಯಾದರೂ‌.. ತಾನೇ ಆದರೂ..

ಸರಿ ತಪ್ಪುಗಳ ಅಳತೆಗೆ ನಿಲ್ಲದ
ಗೌತಮಿಯ ಪ್ರೀತಿ
ಬುದ್ಧನ‌ ಆಂತರ್ಯ
ದಕ್ಕುವುದಾದರೂ ಹೇಗೆ?
ಗೌತಮಿ, ತಾನು ಬುದ್ಧನಾದರೂ
ಬುದ್ಧ, ತಾಯಿ ಗೌತಮಿಯಾದರೂ

‍ಲೇಖಕರು nalike

16 May, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading