ಬೀದಿ ನಾಯಿಗಳೊ? ಅಥವಾ ಬ್ರೀಡ್ ನಾಯಿಗಳೊ?

ಸೀಮಾ ಎಸ್‌ ಆರ್

777 ಚಾರ್ಲಿ ಸಿನಿಮಾ ಬಂದಾಗಿನಿಂದ ಬೀದಿ ನಾಯಿಗಳ ಮೇಲೆ ಪ್ರೀತಿ ಹೆಚ್ಚಾಯಿತೋ ಇಲ್ಲವೋ ಗೊತ್ತಿಲ್ಲ, ಆದರೆ ಲ್ಯಾಬ್ರಡಾರ್ ತಳಿಯ ನಾಯಿಗಳ ಬೇಡಿಕೆಯು ಹೆಚ್ಚಿದಂತೂ ಯಾರು ಅಲ್ಲಗಳೆಯುವಂತೆಯೇ ಇಲ್ಲ.

777 ಚಾರ್ಲಿ ಸಿನೆಮಾವು ಬೀದಿನಾಯಿಗಳನ್ನು ಸಾಕಲು ನಮ್ಮನ್ನು ಪ್ರೇರೇಪಿಸುತ್ತದೆ ಎಂದು ಮುಖ್ಯಮಂತ್ರಿಗಳಿಂದಲ್ಲೇ ಪ್ರಶಂಸನೆ ಪಡೆಯಿತು. ಒಂದು ಪ್ರಶ್ನೆ ಕಾಡುವುದೇನೆಂದರೆ ಸಿನಿಮಾದಲ್ಲಿರುವ ಮುದ್ದಾದ ಲ್ಯಾಬ್ರಡಾರ್ ತಳಿಯ ನಾಯಿಗೂ ಮತ್ತು ಕೆಲವು ಕಂದಮ್ಮಗಳ ಜೀವನವನ್ನೇ ಮುಗಿಸಿದ ಬೀದಿ ನಾಯಿಗಳಿಗೂ ಏನಾದರು ಸಂಬoದ ಇದೆಯಾ?, ಬೀದಿ ನಾಯಿಗಳ ಮೇಲೆ ಎಲ್ಲಿಲ್ಲದ  ಕೇರ್ ಮತ್ತು ಕಾಳಜಿ ಯಾಕೆ ಹೆಚ್ಚಾಯಿತು? ಮತ್ತು ಯಾಕೆ ಬೀದಿ ನಾಯಿಗಳ ಹೆಸರಿನ್ನಲ್ಲಿ ತಳಿಯ ನಾಯಿಯನ್ನು ತೋರಿಸಲಾಯಿತು? ನಾನು ಸಿನಿಮಾದ  ಬಗ್ಗೆ ಮಾತಾಡುತ್ತಿಲ್ಲ ಆದರೆ, ಈ ವಿಷಯದ ಬಗ್ಗೆ ಸ್ವಲ್ಪ ಯೋಚನೆಗೆ ಇಳಿದರೆ ತಿಳಿಯುವುದೇನಂದರೆ ಬೀದಿ ನಾಯಿಗಳ ಸ್ಥಿತಿಯೇ ಬೇರೆ ಹಾಗು ತಳಿ ನಾಯಿಗಳ ಸಮಸ್ಯೆ ಬೇರೆ.  

ಈ ಎರಡೂ, ಸ್ಥಿತಿ  ಮತ್ತು ಸಮಸ್ಯೆಗಳಿಗೆ  ಉತ್ತರ ಒಂದೇ: ನಮ್ಮ ಅತೀಯಾದ  ಪಾಶಿಮಾತ್ಯ ಬ್ರೀಡ್ ನಾಯಿಗಳ ವ್ಯಾಮೋಹ. ಈಗ, ನಮಗೆಲ್ಲರಿಗೆ ಒಂದಲ್ಲ, ಎರಡು ಅಥವಾ ಮೂರು ಬ್ರೀಡ್ ನಾಯಿಗಳು ನಮ್ಮ  ಮನೆಯಲ್ಲಿ ಇವೆ ಎಂದು  ಮತ್ತು ಒಂದು ತಿಂಗಳಿಗೆ ಒಬ್ಬ ಮನುಷ್ಯನಿಗಿಂತಲೂ ಹೆಚ್ಚು ಖರ್ಚು ಬರುತ್ತದೆಂದು ಹೇಳಿಕೊಳ್ಳುವುದೇ ದೊಡ್ಡ್ಡಸ್ತಿಕೆ ಆಗಿಬಿಟ್ಟಿದೆ. ಹಾಗಾದರೆ, ಪಾಪ ಬೀದಿ ನಾಯಿಗಳನ್ನು ಯಾರು ಸಾಕಬೇಕು?

ಮೊದಲೆಲ್ಲಾ, ನಾನು ಕಂಡಂತೆ  ಮತ್ತು ಕೇಳಿದಂತೆ ಬೀದಿ ನಾಯಿಗಳ ಮುದ್ದಾದ ನಾಯಿಮರಿಗಳನ್ನೇ ಸಾಕುತ್ತಿದ್ದರು. ಅದಕ್ಕೆ, ಟಾಮಿ, ಲೈಲಾ, ಬಂಟಿ ಅಥವಾ ಜಾನಿ ಎಂದೋ ಹೆಸರಿಟ್ಟು ತಮ್ಮ ಮನೆಯ ಸದಸ್ಯರಂತೆ ಒಬ್ಬಳು ಅಥವಾ ಒಬ್ಬನು ಎಂದು ತಾವು ಏನು ಕುಡಿಯುತಿದ್ದರೋ, ತಿನ್ನುತಿದ್ದರೋ (ಹಾಲು, ಕಾಫೀ, ಮುದ್ದೆ, ಚಪಾತಿ, ಬ್ರೆಡ್) ಅದರಲ್ಲಿ ಒಂದು ಪಾಲು ಪ್ರೀತಿಯ ನಾಯಿಗಳಿಗೆ ಕೊಡುತಿದ್ದರು. ಮನೆಯ ಮಕ್ಕಳ ಜೊತೆಗಾರನಾಗಿ, ಕುಣಿದು ಕುಪ್ಪಳಿಸಿ, ಹಳ್ಳಿಗಲ್ಲಿ ಒಡೆಯನ ಮಮಾಲಿಕನಂತೆ ಮುಂದೆಯೋ, ಸೇವಕನಂತೆ ಹಿಂಬಾಲಿಸಿಯೋ, ತೋಟದಲ್ಲೆಲ್ಲಾ ಸುತ್ತಾಡಿ, ಅಲೆದಾಡಿ, ಒಡೆಯನಿಗಿಂತ ಮುಂಚಿತವಾಗಿ ಮನೆ ಸೇರಿ, ಅವನ ಬರುವಿಕೆಯ ಕುರುಹನ್ನು ಮನೆಯವರಿಗೆಲ್ಲಾ ತಿಳಿಸುತಿದ್ದವು. ಮತ್ತು ರಾತ್ರಿಯ ಹೊತ್ತಲ್ಲಿ ತೋಟವನ್ನು ಮತ್ತು ಒಡೆಯನನ್ನು ಕಳ್ಳರಿಂದ, ಹಾವುಗಳಿಂದ ಅಥವಾ ಯಾವುದೇ ಸಮಸ್ಯೆ ಬಾರದಂತೆ ಎಚ್ಚರಿಕೆಯಿಂದ ರಕ್ಷಿಸುತಿದ್ದವು. ಎಷ್ಟೋ ಬಾರಿ ತಮ್ಮ ಪ್ರೀತಿಪಾತ್ರರಾದ ಮನೆಯವರನ್ನು ಕಳೆದುಕೊಂಡಾಗ ಈ ಬೀದಿ ನಾಯಿಗಳು ಮನನೊಂದು ಪ್ರಾಣತ್ಯಾಗ ಮಾಡಿರುವುದನ್ನು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಈ ನಾಯಿಗಳೆಲ್ಲವೂ ಬೀದಿ ತಳಿಗಳೆ. 

ಇನ್ನು ಸ್ವಲ್ಪ ಮುಂದುವರೆದು ಹೇಳಬೇಕೆಂದರೆ ಈಗಲೂ ಚಾಲ್ತಿಯಲ್ಲಿರುವ ಕುರಿಗಳನ್ನು ಮೇಯಿಸುತ್ತಾ  ಒಂದು ಊರಿನಿಂದ ಇನ್ನೊಂದು ಊರಿಗೆ ಸುತ್ತುತ್ತಾ ಜೀವನ ಸಾಗಿಸುವ ಕುರಿಗಳ ಮಾಲೀಕನ ಹಿಂಡಿಗೆ ಕಾವಲುಗಾರನಾಗಿ ದಷ್ಟ ಪುಷ್ಟವಾದ ಮತ್ತು ಚುರುಕಾದ ನಾಯಿಗಳು ಇರುತ್ತವೆ. ಇವುಗಳು ಕೂಡ ಬೀದಿ ತಳಿಗಳೇ, ಮತ್ತು ಯಾವುದೇ ಯುರೋಪಿಯನ್ ಬೇಟೆಗಾರ ತಳಿಗಿಂತ ಏನು ಕಮ್ಮಿ ಇರುವುದಿಲ್ಲ. ಈ ಕಾವಲುರಾರ ನಾಯಿಗಳು ತನ್ನ ಮನೆಯವರು ಹಾಕಿದ ಊಟವನ್ನೇ ತಿಂದು, ಊರೂರು  ಅಲೆದು ಬೇಟೆನಾಯಿಗಳಂತೆ ಆಗಿಬಿಟ್ಟಿರುತ್ತವೆ. ಅವುಗಳ ಒಂದು ಕೂಗು ಎಂಥವರನ್ನೂ ಹೆದಿರುಸಿವಂತಿರುತ್ತದೆ.  

ಮೇಲೆ ಉಲ್ಲೇಖಿಸಿದ ಎರಡೂ ಪ್ರಸಂಗಗಳಲ್ಲಿ ಒಂದು ಅಂಶ ಪರಿಗಣಿಸಬಹುದು. ಅದೇನಂದರೆ, ನಾಯಿಗಳನ್ನು ಮನೆಯವರೇ ಅವುಗಳ ಆರೋಗ್ಯದ ದೃಷ್ಟಿಯಿಂದ ಬೇರೆ ನಾಯಿಗಳೊಂದಿಗೆ ಸೇರಲು ಬಿಡುತ್ತಿರಲಿಲ್ಲ. ಹಾಗಾಗಿ ಬೀದಿ ನಾಯಿಗಳ ಸಂತಾನವು ಒಂದು ಮಟ್ಟಿಗೆ ಕಂಟ್ರೋಲ್ ನಲ್ಲಿ ಇತ್ತು. ಇತ್ತೀಚಿನ ದಿನಗಳಲ್ಲಿ ಬ್ರೀಡ್ ನಾಯಿಗಳ ವ್ಯಾಮೋಹದ ಸಂಸ್ಕೃತಿ ಹೆಚ್ಚಾಗಿ, ಬೀದಿ ನಾಯಿಗಳನ್ನು ಸಾಕುವವರು ಯಾರೂಇಲ್ಲದಂತಾಗಿ ಬೀದಿ ನಾಯಿಗಳು ಬೀದಿಗಳಲ್ಲೇ ಬೀಡು ಬಿಡಬೇಕಾಗಿದೆ. ಅದರ ಜೊತೆಗೆ, ನಾವುಗಳು ತಿಂದು ಉಳಿದದ್ದನ್ನು ಬಿಸಾಡುವ  ಸಂಸ್ಕೃತಿ ಅಧಿಕವಾಗುತ್ತಿರುವುದರಿಂದ ಬೀದಿ ನಾಯಿಗಳಿಗೆ ಮತ್ತು ಮರಿಗಳಿಗೆ ಊಟದ ಕೊರತೆಯೂ ಇಲ್ಲದಂತಾಗಿ ಮರಿಗಳು ಸಾಯುವ ಪ್ರಮಾಣವು ಕಡಿಮೆಯಾಗಿದೆ. ಇದರಿಂದ ಹೆಚ್ಚಿದ ನಾಯಿಗಳ ಸಂಖ್ಯೆಯು ಊಟದ ಆಹಾಕಾರವನ್ನು ಸೃಷ್ಟಿ ಮಾಡಿದೆ. ಹೊಟ್ಟೆ  ತುಂಬಿಸಿಕೊಳ್ಳಲು ಮನುಷ್ಯರ ಮೇಲೆ ಎರಗುವಂತ ವಾತಾವರಣವಕ್ಕೆ ನಾವೇ ಎಡೆಮಾಡಿಕೊಟ್ಟಿದ್ದೇವಾ ಎಂದು ಕೇಳುವಂತ ಪರಿಸ್ಥಿತಿ ಬಂದಿದೆ. 

ಮೊದಲೆಲ್ಲಾ ಬೀದಿನಾಯಿಗಳನ್ನು ಮನೆಯವರೇ  ಸಾಕುತಿದ್ದಿದ್ದರಿಂದ ಬೀದಿಗಳಲ್ಲಿ ನಾಯಿಗಳ ಸಂತಾನ ಕಡಿಮೆ ಇತ್ತು. ಆದರೆ ಈಗಿನ ಹೆಚ್ಚಿದ ಸಂಖ್ಯೆಯ ಪರಿಸ್ಥಿತಿಯಲ್ಲಿ (ಮೇಲೆ ತಿಳಿಸಿದಂತೆ), ಬೀದಿನಾಯಿಗಳನ್ನು ಚಿತ್ರ ಹಿಂಸೆ ಕೊಟ್ಟು, ಹಿಡಿದು ಸಂತಾನ ಹರಣ ಚಿಕಿತ್ಸೆ ಯನ್ನು ಮಾಡಿ ಹೊರಬಿಡುತ್ತೇವೆ. 

ಮತ್ತು, ಚಾರ್ಲಿ ಸಿನಿಮಾದಲ್ಲಿ ತೋರಿಸಿರುವಂತೆ ಜನರ ಬ್ರೀಡ್ ನ ವ್ಯಾಮೋಹದಿಂದಾಗಿ ಮತ್ತು ಹಣದ ದುರಾಸೆಯಿಂದಾಗಿ ಆ ನಾಯಿಗಳೂ ಕಷ್ಟ ಪಟ್ಟು ಮರಿಗಳನ್ನು ಮಾಡಬೇಕಾಗುತ್ತದೆ.

ಇಂತಃ ಪ್ರಾಣಿಹಿಂಸೆಗೆ ನಾವುಗಳೇ ಕಾರಣವಲ್ಲವೇ? ಬೀದಿ ನಾಯಿಗಳ ಕಾಟ ಜಾಸ್ತಿಯಾಯಿತು ಎಂದು ಬೊಬ್ಬೆ ಹೊಡೆಯುವ ನಾವು, ಅವುಗಳ ಈ ಅಸಹಾಯಕ ಪರಿಸ್ಥಿತಿಗೆ ನಮ್ಮ ಬ್ರೀಡ್ ವ್ಯಾಮೋಹ ಕಾರಣವಲ್ಲವೇ? ನಮ್ಮ ಪಾಶಿಮಾತ್ಯ ಬ್ರೀಡ್ ನಾಯಿಗಳ ವ್ಯಾಮೋಹ ವನ್ನು ಬಿಟ್ಟರೆ ಎಲ್ಲಾ ನಾಯಿಗಳ ಹಿಂಸೆಗೆ ಪರಿಹಾರ ಸಿಕ್ಕಂತಾಗುತ್ತದೆ ಮತ್ತು ನಮ್ಮ ಸಾವಿರಾರು ರೂಪಾಯಿಗಳು ಉಳಿಯುತ್ತವೆ ಅಲ್ಲವೇ?

‍ಲೇಖಕರು Admin

December 28, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: