ಬಸವರಾಜ ಕೋಡಗುಂಟಿ ಅಂಕಣ – ವಿಜಯಪುರ ಜಿಲ್ಲೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು

ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ ವೈವಿಧ್ಯತೆಯತ್ತ

ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಈ ವಾರದ ಅಂಕಣದಲ್ಲಿ ವಿಜಯಪುರ ಜಿಲ್ಲೆಯ ಬಗ್ಗೆ

ಬೆಳಕು ಚೆಲ್ಲಲಾಗಿದೆ.

27

ವಿಜಯಪುರ

ವಿಜಯಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಮಂದಿ ಮಾತಾಡುವ ಬಾಶೆ ಕನ್ನಡ. ಕನ್ನಡ ಮಾತಾಡುವವರ ಪ್ರತಿಶತತೆ ೭೫%. ಕನ್ನಡದ ನಂತರ ಉರ‍್ದು ಮತ್ತು ಲಂಬಾಣಿ ಬಾಶೆಗಳು ಜಿಲ್ಲೆಯಲ್ಲಿ ಅತಿದೊಡ್ಡ ಸಂಕೆಯಲ್ಲಿ ಕಾಣಿಸುತ್ತವೆ. ಇವುಗಳ ನಂತರ ಮರಾಟಿ ಬಾಶೆಯ ಮಾತುಗರ ಸಂಕೆ ದೊಡ್ಡದಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಕನ್ನಡದೊಳಗಿನ ಇತರ ಗುಂಪಿನಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ದಾಕಲಾಗಿರುವುದು ಗಮನೀಯ. ಹಾಗೆಯೆ ತೆಲುಗಿನ ಒಳಗೆ ಕೂಡ ಇತರ ಗುಂಪಿನಲ್ಲಿ ಸಾವಿರದ ಹತ್ತಿರದಶ್ಟು ಮಂದಿ ಕಾಣಿಸುತ್ತಾರೆ. ವಿಜಯಪುರ ಜಿಲ್ಲೆಯಲ್ಲಿ ಕನಿಶ್ಟ ಮೂವತ್ಮೂರು ಬಾಶೆಗಳು ಬಳಕೆಯಲ್ಲಿವೆ ಮತ್ತು ಕನಿಶ್ಟ ಅಯ್ವತ್ತೊಂಬತ್ತು ತಾಯ್ಮಾತುಗಳು ಬಳಕೆಯಲ್ಲಿವೆ.

***

ಜನಗಣತಿ ಒದಗಿಸುವ ವಿಜಯಪುರ ಜಿಲ್ಲೆಯ ಬಾಶಿಕ ಮಾಹಿತಿಯು ಈ ಕೆಳಗಿನಂತಿದೆ.

ಬಾಶೆತಾಯ್ಮಾತುಒಟ್ಟು ಮಾತುಗರುಗಂಡುಹೆಣ್ಣು
ಆಸ್ಸಾಮಿ752
ಆಸ್ಸಾಮಿ752
ಬೆಂಗಾಲಿ895336
ಬೆಂಗಾಲಿ895336
ಬೊಡೊ220
ಬೊಡೊ220
ಡೋಗ್ರಿ101
ಡೋಗ್ರಿ101
ಗುಜರಾತಿ1351706645
ಗುಜರಾತಿ1247649598
ಇತರ1045747
ಹಿಂದಿ1327986928463514
ಬಂಜಾರಿ1210623587
ಬೋಜ್ಪುರಿ523022
ಗರ‍್ವಾಲಿ110
ಹರಿಯಾಣ್ವಿ211
ಹಿಂದಿ1586382867577
ಲಮಾಣಿ/ಲಂಬಾಡಿ1116605828553375
ಮಾರ‍್ವಾರಿ306415481516
ರಾಜಸ್ತಾನಿ465254211
ಸಾದನ್/ಸಾದ್ರಿ431
ಇತರ477253224
ಕನ್ನಡ1632148832627799521
ಕನ್ನಡ1631061832074798987
ಕುರುಬ/ಕುರುಂಬ1073
ಪ್ರಾಕ್ರುತ/ಪ್ರಾಕ್ರುತ ಬಾಶಾ532
ಇತರ1072543529
ಕಾಶ್ಮೀರಿ431627
ಕಾಶ್ಮೀರಿ431627
ಕೊಂಕಣಿ261124137
ಕೊಂಕಣಿ245116129
ಕುಡುಬಿ/ಕುಡುಂಬಿ1376
ಇತರ312
ಮಯ್ತಿಲಿ110
ಮಯ್ತಿಲಿ110
ಮಲಯಾಳಂ507137370
ಮಲಯಾಳಂ499133366
ಯರವ312
ಇತರ532
ಮಣಿಪುರಿ211
ಮಣಿಪುರಿ211
ಮರಾಟಿ537352713226603
ಆರೆ110
ಮರಾಟಿ 537342713126603
ನೇಪಾಲಿ553124
ನೇಪಾಲಿ553124
ಓಡಿಯಾ223108115
ಓಡಿಯಾ222107115
ಇತರ110
ಪಂಜಾಬಿ934746
ಪಂಜಾಬಿ924646
ಇತರ110
ಸಂಸ್ಕ್ರುತ261511
ಸಂಸ್ಕ್ರುತ261511
ಸಿಂದಿ19410292
ಕಚ್ಚಿ753837
ಸಿಂದಿ1196455
ತಮಿಳು704363341
ಕಯ್ಕಾಡಿ624
ಕೊರವ934251
ತಮಿಳು605319286
ತೆಲುಗು1566579087757
ತೆಲುಗು1478874757313
ಇತರ877433444
ಉರ‍್ದು339009172139166870
ಉರ‍್ದು338974172119166855
ಇತರ352015
ಅರಾಬಿಕ್/ಅರ‍್ಬಿ101
ಅರಾಬಿಕ್/ಅರ‍್ಬಿ101
ಬಿಲಿ/ಬಿಲೊಡಿ1358
ಪರದಿ1358
ಕೂರ‍್ಗಿ/ಕೊಡಗು281810
ಕೂರ‍್ಗಿ/ಕೊಡಗು101
ಕೊಡವ27189
ಇಂಗ್ಲೀಶು512526
ಇಂಗ್ಲೀಶು512526
ಹೊ835
ಲೊಹರ835
ಕೊಡ/ಕೊರ220
ಕೊಡ/ಕೊರ220
ಕುಕಿ211
ಕುಕಿ211
ಲಡಾಕಿ413
ಲಡಾಕಿ413
ಲಹಂದ853
ಇತರ853
ಲಕೇರ್211
ಮರ211
ತುಳು19210686
ತುಳು19210686
ಇತರ1065452

ವಿಜಯಪುರ ಜಿಲ್ಲೆಯಲ್ಲಿ ಜನಗಣತಿಯು ಒಟ್ಟು ಮೂವತ್ತೆರಡು ಬಾಶೆಗಳನ್ನು ಪಟ್ಟಿ ಮಾಡಿದೆ. 106 ಮಂದಿ ಇರುವ ಇತರ ಎಂಬ ಗುಂಪೊಂದೂ ಇದೆ. ಇದರಲ್ಲಿ ಒಂದು ಬಾಶೆಯನ್ನಾಡುವ ಮಾತುಗರು ಇದ್ದಾರೆ ಎಂದು ಲೆಕ್ಕಿಸಿದರೆ ವಿಜಯಪುರ ಜಿಲ್ಲೆಯಲ್ಲಿ ಒಟ್ಟು ಮೂವತ್ಮೂರು ಬಾಶೆಗಳು ಇವೆ. ಒಟ್ಟು ಅಯ್ವತ್ತೆಂಟು ತಾಯ್ಮತುಗಳು ಮತ್ತು ಇತರ ಗುಂಪಿನಲ್ಲಿ ಒಂದು ತಾಯ್ಮಾತು ಎಂದು ಲೆಕ್ಕಿಸಿದರೆ ಒಟ್ಟು ಅಯ್ವತ್ತೊಂಬತ್ತು ತಾಯ್ಮಾತುಗಳನ್ನು ವಿಜಯಪುರ ಜಿಲ್ಲೆಯಲ್ಲಿ ಜನಗಣತಿ ಉಲ್ಲೇಕಿಸುತ್ತದೆ. ಇವುಗಳಲ್ಲಿ ಇತರ ಎಂಬ ಗುಂಪು ಹತ್ತು ಬಾಶೆಗಳಲ್ಲಿ ಉಲ್ಲೇಕಿಸಿದೆ. ಅವುಗಳೆಂದರೆ ಗುಜರಾತಿ, ಹಿಂದಿ, ಕನ್ನಡ, ಕೊಂಕಣಿ, ಮಲಯಾಳಂ, ಓಡಿಯಾ, ಪಂಜಾಬಿ, ತೆಲುಗು, ಉರ‍್ದು ಮತ್ತು ಲಹಂದ. ಉಳಿದಂತೆ ನಲ್ವತ್ತೆಂಟು ತಾಯ್ಮಾತುಗಳ ಹೆಸರುಗಳು ದಾಕಲಾಗಿವೆ. 

ವಿಜಯಪುರ ಜಿಲ್ಲೆಯ ಒಟ್ಟು ಜನಸಂಕೆ 21,77,331 ಆಗಿದೆ. ವಿಜಯಪುರ ಜಿಲ್ಲೆಯಲ್ಲಿ ಹತ್ತು ಲಕ್ಶಕ್ಕೂ ಹೆಚ್ಚು ಮಂದಿ ಕನ್ನಡ ಮಾತಾಡುವವರು ಇದ್ದಾರೆ. ಕನ್ನಡ ಮಾತಾಡುವ 16,32,148 (74.960%) ಮಂದಿ ಇದ್ದಾರೆ. ಆನಂತರ ಉರ‍್ದು 3,39,009 (15.569%), ಹಿಂದಿ 1,32,798 (6.099%) ಮಂದಿ ಮಾತುಗರೊಂದಿಗೆ ಎರಡು ಮತ್ತು ಮೂರನೆ ಸ್ತಾನದಲ್ಲಿದ್ದು ಒಂದು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತುಗರು ಇರುವ ಬಾಶೆಗಳಾಗಿವೆ. ಆನಂತರ ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಇರುವ ಬಾಶೆಗಳು ಎರಡು ಇವೆ. ಮರಾಟಿ – 53,735 (2.467%) ಮತ್ತು ತೆಲುಗು – 15665 (0.719%). ಆನಂತರ ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಕಡಿಮೆ ಮಂದಿ ಇರುವ ಬಾಶೆ ಗುಜರಾತಿ – 1,351 (0.062%) ಮಾತ್ರ ಆಗಿದೆ. ಉಳಿದಂತೆ ಸಾವಿರಕ್ಕೂ ಕಡಿಮೆ ಮಾತುಗರು ಇರುವ ಆರು ಬಾಶೆಗಳು ಇವೆ (ತಮಿಳು, ಮಲಯಾಳಂ, ಕೊಂಕಣಿ, ಓಡಿಯಾ, ಸಿಂದಿ ಮತ್ತು ತುಳು). ಇತರ ಗುಂಪಿನಲ್ಲಿಯೂ 106 ಮಂದಿ ದಾಕಲಾಗಿದ್ದಾರೆ. ನೂರಕ್ಕೂ ಕಡಿಮೆ ಮಂದಿ ಮಾತುಗರು ಇರುವ ಇಪ್ಪತ್ತು ಬಾಶೆಗಳು ಇವೆ. ಜನಗಣತಿ ತೋರಿಸಿರುವ ಜಿಲ್ಲೆಯ ಬಾಶೆಗಳ ಚಿತ್ರಣವನ್ನು ಕೆಳಗೆ ತೋರಿಸಿದೆ.

ಸಾಪೇಕ್ಶ ಸಂಕೆಬಾಶೆಸಂಕೆ%
ಹತ್ತು ಲಕ್ಶಕ್ಕಿಂತ ಹೆಚ್ಚು ಕನ್ನಡ16,32,148 74.960%
ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚುಉರ‍್ದು3,39,009 15.569%
’’ಹಿಂದಿ1,32,7986.099%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುಮರಾಟಿ53,7352.467%
’’ತೆಲುಗು156650.719%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುಗುಜರಾತಿ1,3510.062%
ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ತಮಿಳು, ಮಲಯಾಳಂ, ಕೊಂಕಣಿ, ಓಡಿಯಾ, ಸಿಂದಿ ಮತ್ತು ತುಳು2,1870.100%
ನೂರಕ್ಕಿಂತ ಕಡಿಮೆಇಪ್ಪತ್ತು ಬಾಶೆಗಳು4380.020%
ಒಟ್ಟು ಮಾತುಗರು21,77,331100%

ಜನಗಣತಿ ಒದಗಿಸುವ ತಾಯ್ಮಾತುಗಳ ಮಾಹಿತಿಯನ್ನು ಗಮನಿಸಿದಾಗ ಮೇಲೆ ತೋರಿಸಿದ ವಿಜಯಪುರ ಜಿಲ್ಲೆಯ ಬಾಶೆಗಳ ಚಿತ್ರಣ ತುಸು ಬದಲಾಗುತ್ತದೆ. 

ಹಿಂದಿ ಬಾಶೆಯ ಅಂಕೆಸಂಕೆಗಳು ಗಮನ ಸೆಳೆಯುತ್ತವೆ. ಕರ‍್ನಾಟಕದ ಸಂದರ‍್ಬದಲ್ಲಿ ಪ್ರಾಮುಕ್ಯತೆ ಪಡೆದುಕೊಳ್ಳುವ ಹಿಂದಿಯ ಒಳಗೆ ತೋರಿಸಿರುವ ಬಾಶೆಗಳನ್ನು ಇಲ್ಲಿ ತೋರಿಸಿದೆ.

ಹಿಂದಿ 1,32,798

ಬಂಜಾರಿ 1,210

ಬೋಜ್ಪುರಿ 52

ಹಿಂದಿ 15,863

ಲಮಾಣಿ/ಲಂಬಾಡಿ 1,11,660

ಮಾರ‍್ವಾರಿ 3,064

ರಾಜಸ್ತಾನಿ 465

ಹಿಂದಿ ಮಾತನಾಡುವ ಜಿಲ್ಲೆಯ ಒಟ್ಟು ಜನಸಂಕೆ 1,32,798 ಎಂದು ಜನಗಣತಿ ವರದಿ ಮಾಡಿದೆ. ಇದರೊಳಗೆ ಲಂಬಾಣಿ ಅತಿ ಹೆಚ್ಚು ಮಾತುಗರನ್ನು ಹೊಂದಿದೆ. ಲಮಾಣಿ (1,11,660) ಮತ್ತು ಬಂಜಾರಿ (1,210) ಇವುಗಳನ್ನು ಸೇರಿಸಿದಾಗ ಒಟ್ಟು 1,12,870 ಆಗುತ್ತದೆ. ಇದು ಹಿಂದಿಯ 84.993% ಮತ್ತು ಜಿಲ್ಲೆಯ 5.183% ಆಗುತ್ತದೆ. ಹೀಗೆ ಲಂಬಾಣಿ ಮಾತನಾಡುವ ದೊಡ್ಡ ಸಮುದಾಯ ಜಿಲ್ಲೆಯಲ್ಲಿರುವುದು ತಿಳಿಯುತ್ತದೆ. ಹಿಂದಿಯನ್ನಾಡುವ 15,863 ಮಾತುಗರು ಇದ್ದಾರೆ. ಇದು ಜಿಲ್ಲೆಯ ಹಿಂದಿಯ (11.945%) ಮತ್ತು ಜಿಲ್ಲೆಯ 0.728%ದಶ್ಟು ಆಗುತ್ತದೆ. ಇದರೊಟ್ಟಿಗೆ ಹಿಂದಿಯೊಳಗೆ ಕೊಟ್ಟಿರುವ ಮಾರ‍್ವಾರಿ ಬಾಶೆಗೆ 3,064 (0.140%) ಮಂದಿ ಇದ್ದಾರೆ ಮತ್ತು ರಾಜಸ್ತಾನಿಗೆ 465 ಮಂದಿ ಇದ್ದಾರೆ. ಹೀಗೆ ಲಂಬಾಣಿ ಒಂದು ಲಕ್ಶಕ್ಕಿಂತ ಹೆಚ್ಚು ಮಾತುಗರು ಇರುವ ಬಾಶೆಯಾಗಿ ಜಿಲ್ಲೆಯ ಮೂರನೆ ದೊಡ್ಡ ಬಾಶೆಯಾಗಿ ಕಾಣಿಸುತ್ತದೆ. ಕನ್ನಡದೊಳಗೆ ಇತರ ಎಂಬ ಗುಂಪಿನಲ್ಲಿ 1,072 ಮಂದಿ ಇರುವುದು ಗಮನ ಸೆಳೆಯುತ್ತದೆ. ಇದು ಜಿಲ್ಲೆಯ ಕನ್ನಡ ಮಾತುಗರ 0.065% ಮತ್ತು ಜಿಲ್ಲೆಯ 0.049%ದಶ್ಟು ಆಗುತ್ತದೆ. ಹಾಗೆ ತೆಲುಗಿನಲ್ಲಿಯೂ ಪರಿಗಣಿಸುವಶ್ಟು ಅಂದರೆ 877 ಮಂದಿ ಇತರ ಗುಂಪಿನಲ್ಲಿ ದಾಕಲಾಗಿದ್ದಾರೆ. ಈ ಮಾತುಕತೆಯನ್ನು ಆದರಿಸಿ ಜಿಲ್ಲೆಯ ಬಾಶೆಗಳನ್ನು ಕೆಳಗಿನಂತೆ ಮರುಹೊಂದಿಸಿ ಕೊಡಬಹುದು.

ಸಾಪೇಕ್ಶ ಸಂಕೆಬಾಶೆಸಂಕೆ%
ಹತ್ತು ಲಕ್ಶಕ್ಕಿಂತ ಹೆಚ್ಚು ಕನ್ನಡ16,31,06174.911%
ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಒಂದು ಲಕ್ಶಕ್ಕಿಂತ ಹೆಚ್ಚುಉರ‍್ದು3,38,97415.568%
’’ಲಂಬಾಣಿ1,12,8705.183%
ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚುಮರಾಟಿ53,7342.467%
’’ಹಿಂದಿ15,8630.728%
’’ತೆಲುಗು14,7880.679%
ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚುಮಾರ‍್ವಾರಿ3,0640.140%
’’ಗುಜರಾತಿ1,3510.062%
’’ಕನ್ನಡ-ಇತರ1,0720.049%

ಜಿಲ್ಲೆಯ ಹತ್ತು ದೊಡ್ಡ ಬಾಶೆಗಳ ಪಟ್ಟಿಯನ್ನು ಕೆಳಗೆ ಕೊಟ್ಟಿದೆ.

ಪ್ರದೇಶಜಿಲ್ಲೆಯ ಜನಸಂಕೆಬಾಶೆಮಾತುಗರುಜಿಲ್ಲೆಯ %ಜಿಲ್ಲೆಯಲ್ಲಿ ಸ್ತಾನ
ವಿಜಯಪುರ21,77,331ಕನ್ನಡ16,31,06174.911%1
ಉರ‍್ದು3,38,97415.568%2
ಲಂಬಾಣಿ1,12,8705.183%3
ಮರಾಟಿ53,7342.467%4
ಹಿಂದಿ15,8630.728%5
ತೆಲುಗು14,7880.679%6
ಮಾರ‍್ವಾರಿ3,0640.140%7
ಗುಜರಾತಿ1,3510.062%8
ಕನ್ನಡ-ಇತರ1,0720.049%9
ತೆಲುಗು-ಇತರ8770.040%10

‍ಲೇಖಕರು Admin

August 25, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: