ಈ ‘ಪ್ರೇಯಿಂಗ್ ಮ್ಯಾಂಟಿಸ್’ಗಳೇ ಹೀಗೆ!..

ಪೂರ್ಣೇಶ್ ಮತ್ತಾವರ

ಈ ‘ಪ್ರೇಯಿಂಗ್ ಮ್ಯಾಂಟಿಸ್’ಗಳೇ ಹೀಗೆ! ಸ್ವಲ್ಪವೂ ಅಲುಗಾಡದೇ  ಕೈ ಮುಗಿದುಕೊಂಡು  ಧ್ಯಾನಸ್ಥ ಸ್ಥಿತಿಯಲ್ಲಿರುವಂತೆ ಪೋಸ್ ನೀಡುತ್ತಿರುತ್ತವೆ. ಹಾಗೆಂದು ಅವು ನಿಜಕ್ಕೂ ಧ್ಯಾನ ಮಾಡುತ್ತಿರುತ್ತವೆಂದಲ್ಲ. ಯಾವುದಾದರೂ ಕೀಟಗಳು ಯಾಮಾರಿ ತಮ್ಮ ಇಕ್ಕುಳಗಳಂತಹ ಮುಂಗಾಲುಗಳ ಬಳಿ  ಬರಲಿ ಎಂಬುದಷ್ಟೇ ಅವುಗಳ ಧ್ಯಾನಸ್ಥ ಸ್ಥಿತಿಯ ಉದ್ದೇಶ.ಅಷ್ಟೇ ಅಲ್ಲ, ಹಸಿರು ಅಥವಾ ಒಣಗಿದ ಎಲೆಗಳ ರೂಪದ ಮೈಕಟ್ಟನ್ನು ಹೊಂದಿರುವುದರಿಂದ ಇವುಗಳನ್ನು ನಾವಾಗಲಿ ಅಥವಾ ಬೇರಾವುದೇ ಕೀಟಭಕ್ಷಕಗಳಾಗಲೀ ಗುರುತಿಸುವುದೂ ಕಷ್ಟ.   

ಮೊನ್ನೆ ದಿನ ಗೆಳೆಯರಾದ ಲೋಕಣ್ಣ ಕರೆ ಮಾಡಿ “ಸರ್, ನಮ್ ಗ್ಯಾರೇಜ್ ಹತ್ರ ಒಂದು ಸ್ಪೆಷಲ್ ಹುಳ ಇದೆ.. ಫ್ರೀ ಇದ್ರೆ ಬನ್ನಿ” ಅಂದವರು ಅದರ ವೀಡಿಯೋ ಮಾಡಿ ಕಳಿಸಿದರು. ನೋಡಿದರೆ ಪ್ರೇಯಿಂಗ್ ಮ್ಯಾಂಟಿಸ್.    ಸಾಮಾನ್ಯವಾಗಿ ಹಸಿರು ಬಣ್ಣದ ಪ್ರೇಯಿಂಗ್ ಮ್ಯಾಂಟಿಸ್ ಗಳು ಅಪರೂಪಕ್ಕಾದರೂ ಸಿಗುತ್ತವೆಯಾದರೂ ಈ ಒಣಗಿದೆಲೆ ಬಗೆಯ ಮ್ಯಾಂಟಿಸ್ ಗಳು ಕಣ್ಣಿಗೆ ಬೀಳುವುದು ತೀರಾ ಅಪರೂಪ ಎನ್ನಬಹುದು. ಹೋಗಿ ನೋಡಿದಾಗ ಈ ವಾಂಡರಿಂಗ್ ವಯೊಲಿನ್ ಮ್ಯಾಂಟಿಸ್ (Wandering Violin Mantis) ಅಲ್ಲಿಯೇ ತನ್ನ ಅಸ್ತಿತ್ವ ಮರೆಮಾಚುವವರಂತೆ ಸುಮ್ಮನೇ ಕುಳಿತಿತ್ತು. ಬಗೆಬಗೆಯಾಗಿ ಫೋಟೋಕ್ಕೂ ಪೋಸ್ ನೀಡಿತು! ಈ ಮ್ಯಾಂಟಿಸ್ ಗಳ ಕುರಿತಾಗಿ ತೇಜಸ್ವಿಯವರು ತಮ್ಮ “ನಡೆಯುವ ಕಡ್ಡಿ! ಹಾರುವ ಎಲೆ!” ಪುಸ್ತಕದಲ್ಲಿ “ಬಿಸಿಲು ಕುದುರೆ ಅಥವಾ ಪ್ರೇಯಿಂಗ್ ಮ್ಯಾಂಟಿಸ್” ಎಂಬ ವಿವರವಾದ ಲೇಖನವನ್ನೇ ಬರೆದಿದ್ದಾರೆ.

‍ಲೇಖಕರು Admin

August 25, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: