ಬಸವರಾಜ ಕೋಡಗುಂಟಿ ಅಂಕಣ – ಪಂಜಾಬಿ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ

ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ

ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಕರ‍್ನಾಟಕದ ಒಂದೊಂದು ಬಾಶೆಯ ಮೇಲೆ ಮೂವತ್ತಕ್ಕೂ

ಹೆಚ್ಚು ಬಿಡಿ ಬರಹಗಳನ್ನು ಇಲ್ಲಿ ಬರೆದಿದ್ದಾರೆ.

ರ‍್ನಾಟಕದ ಸುಮಾರು ನಲವತ್ತು ಬಾಶೆಗಳ ಹಂಚಿಕೆಯನ್ನ

ಇನ್ನು ಮುಂದೆ ಪರಿಚಯಿಸಲಾಗುವುದು.

45

ಪಂಜಾಬಿ

ಕರ‍್ನಾಟಕದಲ್ಲಿ ಪಂಜಾಬಿ ಹತ್ತೊಂಬತ್ತನೆ ದೊಡ್ಡ ಬಾಶೆಯಾಗಿದೆ. ದೇಶದ ಅನುಸೂಚಿತ ಬಾಶೆಗಳಲ್ಲಿ ಒಂದಾಗಿರುವ ಪಂಜಾಬಿಗೆ ದೇಶಮಟ್ಟದಲ್ಲಿ ದಾಕಲಾದ ಮಾತುಗರ ಸಂಕೆ ೩,೩೧,೨೪,೭೨೬ ಆಗಿದೆ. ದೇಶದಲ್ಲಿ ಪಂಜಾಬಿ ಬಾಶೆಯ ಒಳಗೆ ಬಾಗ್ರಿ, ಬತೆಅಲಿ, ಬಿಲಾಸ್ಪುರಿ ಕಹ್ಲುರಿ ಮತ್ತು ಪಂಜಾಬಿ ಎಂಬ ನಾಲ್ಕು ತಾಯ್ಮಾತುಗಳು ಮತ್ತು ಇತರ ಎಂಬ ಒಂದು ಗುಂಪು ದಾಕಲಾಗಿವೆ. ಇದರಲ್ಲಿ ಹೆಚ್ಚು ಮಂದಿ ಪಂಜಾಬಿ ತಾಯ್ಮಾತಿನ ಮಾತುಗರಾಗಿದ್ದಾರೆ. ಪಂಜಾಬಿ ಮಾತಾಡುವ ಒಟ್ಟು ೨೫,೯೮೧ ಮಂದಿ ಕರ‍್ನಾಟಕದಲ್ಲಿ ದಾಕಲಾಗಿದ್ದಾರೆ. ಇದು ದೇಶದ ಒಟ್ಟು ಪಂಜಾಬಿ ಸಮುದಾಯದ ೦.೦೭೮% ಆಗುತ್ತದೆ. ಇದು ಕರ‍್ನಾಟಕದ 0.042% ಆಗುತ್ತದೆ. 

ಕರ‍್ನಾಟಕದಲ್ಲಿ ದಾಕಲಾದ ಬಹುತೇಕರು ಅಂದರೆ ೨೫,೯೧೦ ಪಂಜಾಬಿ ಮಾತುಗರು. ಇದರೊಂದಿಗೆ ಬಾಗ್ರಿ (3) ಮತ್ತು ಇತರ (68) ಎಂಬ ಗುಂಪು ಕಡಿಮೆ ಮಾತುಗರನ್ನು ಒಳಗೊಂಡು ದಾಕಲಾಗಿವೆ. ಪಂಜಾಬಿ ಕರ‍್ನಾಟಕದ ಒಟ್ಟು ೦.೦೪೨% ಪ್ರತಿಶತ ಆಗುತ್ತದೆ. ಪಂಜಾಬಿ ಇಡಿಯ ಕರ‍್ನಾಟಕದ ತುಂಬ ಸಣ್ಣ ಸಣ್ಣ ಸಂಕೆಯಲ್ಲಿ ಪಸರಿಸಿಕೊಂಡಿದ್ದರೂ ಹೆಚ್ಚು ಮಂದಿ ಬೆಂಗಳೂರು ನಗರ ಜಿಲ್ಲೆಯಲ್ಲಿಯೆ ಕಂಡುಬರುತ್ತಾರೆ. ಕರ‍್ನಾಟಕದ ಒಟ್ಟು ಪಂಜಾಬಿ ಜನಸಂಕೆಯ ೬೨.೭೫೩% ಮಂದಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಕಂಡುಬರುತ್ತಾರೆ. ಜಿಲ್ಲೆಯ ಒಟ್ಟು ಪಂಜಾಬಿ ಸಂಕೆ ೧೬,೩೦೪ ಆಗಿದೆ. ಬೆಂಗಳೂರಿನ ನಂತರ ದಾರವಾಡದಲ್ಲಿ ೫,೪೪೮ ಮಂದಿ ಪಂಜಾಬಿಗಳು ದಾಕಲಾಗಿದ್ದಾರೆ. ಇದು ರಾಜ್ಯದ ಪಂಜಾಬಿಗಳ ೨೧.೦೨೬% ಆಗುತ್ತದೆ. ಇನ್ನುಳಿದಂತೆ ಎಲ್ಲ ಜಿಲ್ಲೆಗಳಲ್ಲಿ ಸಾವಿರಕ್ಕಿಂತ ಕಡಿಮೆ ಮಂದಿ ಕಾಣಿಸುತ್ತಾರೆ. ಹನ್ನೆರಡು ಜಿಲ್ಲೆಗಳಲ್ಲಿ ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮತ್ತು ಉಳಿದ ಹದಿನಾರು ಜಿಲ್ಲೆಗಳಲ್ಲಿ ನೂರಕ್ಕಿಂತ ಕಡಿಮೆ ಮಂದಿ ಇದ್ದಾರೆ.

ಇಲ್ಲಿ ಕೆಳಗೆ ಪಂಜಾಬಿ ಮಾತುಗರ ಜನಸಂಕೆಯನ್ನು ಅಟ್ಟದಲ್ಲಿ ತೋರಿಸಿದೆ. 

ಪ್ರದೇಶಜಿಲ್ಲೆಯ ಜನಸಂಕೆಮಾತುಗರು ಆ ಜಿಲ್ಲೆಯ % ಆ ಬಾಶೆಯ % 
ಕರ‍್ನಾಟಕ6,10,95,29725,9104.200%100%
ಬೆಂಗಳೂರು ನಗರ 96,21,55116,2830.169%62.844%
ದಾರವಾಡ18,47,0235,4480.294%21.026%
ಬೆಳಗಾವಿ47,79,6617050.014%2.720%
ಮಯ್ಸೂರು 30,01,1276090.020%2.350%
ಬೀದರ17,03,3004620.027%1.783%
ಬಳ್ಳಾರಿ 24,52,5953800.015%1.466%
ದಕ್ಶಿಣ ಕನ್ನಡ20,89,6492330.011%0.899%
ರಾಮನಗರ10,82,6362100.019%0.810%
ಉತ್ತರ ಕನ್ನಡ14,37,1691830.012%0.706%
ಕಲಬುರಗಿ25,66,3261830.007%0.706%
ಬಾಗಲಕೋಟೆ 18,89,7521440.007%0.555%
ಕೊಪ್ಪಳ13,89,9211120.008%0.432%
ಉಡುಪಿ11,77,3611090.009%0.420%
ತುಮಕೂರು26,78,9801030.003%0.397%
ಶಿವಮೊಗ್ಗ17,52,753940.005%0.362%
ಬೆಂಗಳೂರು ಗ್ರಾಮಂತರ9,90,923930.938%0.358%
ವಿಜಯಪುರ21,77,331920.004%0.355%
ರಾಯಚೂರು19,28,812910.004%0.351%
ಮಂಡ್ಯ18,05,769770.004%0.297%
ದಾವಣಗೆರೆ 19,45,497540.002%0.208%
ಚಿತ್ರದುರ‍್ಗ16,59,456490.002%0.189%
ಹಾವೇರಿ15,97,668390.002%0.150%
ಗದಗ 10,20,791380.003%0.146%
ಕೊಡಗು5,54,519340.006%0.131%
ಹಾಸನ17,76,421290.001%0.111%
ಯಾದಗಿರಿ11,74,271260.002%0.100%
ಕೋಲಾರ15,36,401180.001%0.069%
ಚಿಕ್ಕಮಗಳೂರು11,37,96165.272%0.023%
ಚಾಮರಾಜನಗರ10,20,79132.938%0.011%
ಚಿಕ್ಕಬಳ್ಳಾಪುರ12,55,10432.390%0.011%

ಪಂಜಾಬಿ ಮಾತುಗರ ಹಂಚಿಕೆ

D:\writings\ನೂರು ಕೊರಳು\bashe\work-sept22\done\to final\NEW maps\Distribution of Panjabi.jpg

ಮುಂದುವರಿಯುವುದು…

‍ಲೇಖಕರು avadhi

February 9, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: