ಬಸವರಾಜ ಕೋಡಗುಂಟಿ ಅಂಕಣ – ನೂರು ಕೊರಳು

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು ಅಲುಗಾಡಿಸಬಹುದು.

ಈ ವಾರದ ಅಂಕಣದಲ್ಲಿ ಉಡುಪಿ ಜಿಲ್ಲೆಯ ಬಗ್ಗೆ ಬೆಳಕು ಚೆಲ್ಲಲಾಗಿದೆ.

2

ಉಡುಪಿ ಕರ‍್ನಾಟಕದ ಸೂಕ್ಶ್ಮ ಬಾಶಿಕ ಪರಿಸರವನ್ನು ಹೊಂದಿರುವ ಜಿಲ್ಲೆಗಳಲ್ಲಿ ಒಂದು. ಉಡುಪಿ ಜಿಲ್ಲೆಯಲ್ಲಿ ಕಡಿಮೆ ಎಂದರೂ ಅಯ್ವತ್ತೊಂದು ಬಾಶೆಗಳು ಮತ್ತು ಎಂಬತ್ತಾರು ತಾಯ್ಮಾತುಗಳು ಇವೆ. ಜಿಲ್ಲೆಯಲ್ಲಿ ಕನ್ನಡದ ಪ್ರತಿಶತತೆ 42% ಇದೆ. ಕನ್ನಡ, ತುಳು ಮತ್ತು ಕೊಂಕಣಿ ಬಾಶೆಗಳಿಗೆ ಒಂದು ಲಕ್ಶಕ್ಕಿಂತಲೂ ಹೆಚ್ಚು ಮಾತುಗರು ಇದ್ದಾರೆ. ಅಯ್ದು ಬಾಶೆಗಳಲ್ಲಿ ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಮಾತುಗರು ಇದ್ದಾರೆ. ಇತರ ಎಂಬ ಗುಂಪಿನಲ್ಲಿ, ಅಂದರೆ ಬಾಶೆಗಳನ್ನು ಹೆಸರಿಸಿಲ್ಲದ ಗುಂಪಿನಲ್ಲಿ 23,712 ಮಂದಿ ಇರುವುದು ಗಮನೀಯ.

ಜನಗಣತಿ ಒದಗಿಸಿರುವ ಉಡುಪಿ ಜಿಲ್ಲೆಯ ಬಾಶಿಕ ಮಾಹಿತಿಯನ್ನು ಇಲ್ಲಿ ಕೊಟ್ಟಿದೆ. ಉಡುಪಿ ಕರ‍್ನಾಟಕದ ಅತ್ಯಂತ ಸಂಕೀರ‍್ಣ ಬಾಶಿಕ ಪರಿಸರವನ್ನು ಹೊಂದಿರುವ ಜಿಲ್ಲೆಯಾಗಿದೆ.

ಉಡುಪಿ ಜಿಲ್ಲೆಯಲ್ಲಿ ದಾಕಲಾಗಿರುವ ಒಟ್ಟು ಬಾಶೆಗಳ ಸಂಕೆ ನಲ್ವತ್ತಾರು. ಇತರ ಎಂಬ ಗುಂಪಿನಲ್ಲಿ 23,712 ಮಂದಿ ದಾಕಲಾಗಿದ್ದಾರೆ. ಇದರಲ್ಲಿ ಹತ್ತು ಸಾವಿರ ಮಾತುಗರು ಇಲ್ಲದ ಬಾಶೆಗಳು ಸೇರಿರುತ್ತಿವೆಯಾದ್ದರಿಂದ ಈ ಬಾಶೆಗಳಿಗೆ ಅತಿ ಹೆಚ್ಚು ಎಂದರೆ 9,999 ಮಂದಿ ಇರಬಹುದು. ಸಾಮಾನ್ಯವಾಗಿ ಅಶ್ಟು ಇರುವುದಿಲ್ಲ ಎನ್ನುವುದು ನಿಜವಾದರೂ 9,999 ಮಂದಿ ಲೆಕ್ಕ ಹಿಡಿದರೂ ಕನಿಶ್ಟ ಮೂರು ಬಾಶೆಗಳು ಇದರಲ್ಲಿ ಇವೆ ಎಂದು ಹೇಳಬೇಕಾಗುತ್ತದೆ.

5,000 ಮಂದಿ ಇರಬಹುದು ಎಂದು ಲೆಕ್ಕ ಹಾಕಿದರೆ ಕನಿಶ್ಟ ಅಯ್ದು ಬಾಶೆಗಳು ಇದರಲ್ಲಿ ಇವೆ ಎಂದು ಲೆಕ್ಕಿಸಬಹುದು. ಇಲ್ಲಿ ಅಯ್ದು ಬಾಶೆಗಳು ಎಂದು ಲೆಕ್ಕಿಸಿ ಉಡುಪಿ ಜಿಲ್ಲೆಯಲ್ಲಿ ಅಯ್ವತ್ತೊಂದು ಬಾಶೆಗಳು ಎಂದೆನ್ನಬಹುದು. ತಾಯ್ಮಾತುಗಳ ಲೆಕ್ಕವನ್ನು ಗಮನಿಸಿದಾಗ ಉಡುಪಿ ಜಿಲ್ಲೆಯಲ್ಲಿ ಎಂಬತ್ತೊಂದು ಇವೆ. ಹಾಗೆ ಈ ಮೇಲೆ ಮಾತನಾಡಿದಂತೆ ಇತರ ಎಂಬ ಬಾಶೆ ಗುಂಪಿನಲ್ಲಿ ಅಯ್ದು ಬಾಶೆಗಳು ಅಯ್ದು ತಾಯ್ಮಾತುಗಳು ಎಂದು ಲೆಕ್ಕಿಸಿದರೆ ಉಡುಪಿ ಜಿಲ್ಲೆಯ ತಾಯ್ಮಾತುಗಳ ಸಂಕೆ ಎಂಬತ್ತಾರು ಆಗುತ್ತದೆ. ಆದರೆ, ಕಂಡಿತವಾಗಿಯೂ ಇತರ ಗುಂಪಿನ ಈ ಮಾತುಗರು ಹಲವು ತಾಯ್ಮಾತುಗಳಿಗೆ ಸಂಬಂದಪಟ್ಟವರಿರುತ್ತಾರೆ. ಕನಿಶ್ಟ ನೂರಕ್ಕೂ ಹೆಚ್ಚು ತಾಯ್ಮಾತುಗಳು ಆಗುತ್ತವೆ.

ಉಡುಪಿ ಜಿಲ್ಲೆಯಲ್ಲಿ ಜನಸಂಕೆ 11,77,361 ಇದೆ. ಉಡುಪಿ ಜಿಲ್ಲೆಯಲ್ಲಿ ಕನ್ನಡ ಮಾತಾಡುವ ಮಂದಿ ಅರ‍್ದದಶ್ಟು ಇದ್ದಾರೆ, ಅಂದರೆ 5,02,697. ಇದು ಜಿಲ್ಲೆಯ 42.696% ಆಗುತ್ತದೆ. ಕನ್ನಡದ ನಂತರ ಅತಿಹೆಚ್ಚು ಮಂದಿ ಮಾತಾಡುವ ಬಾಶೆ ತುಳು. ತುಳು ಮಾತುಗರು 3,70,135 (31.437%) ಇದ್ದಾರೆ. ಇದರ ನಂತರ ಕೊಂಕಣಿ ಮಾತಾಡುವ 1,43,155 (12.158%) ಮಂದಿ ಇದ್ದಾರೆ. ಈ ಮೂರು ಬಾಶೆಗಳು ಒಂದು ಲಕ್ಶಕ್ಕಿಂತ ಹೆಚ್ಚು ಮಾತುಗರನ್ನು ಹೊಂದಿವೆ.

ಒಂದು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಮಾತಾಡುವ ನಾಲ್ಕು ಬಾಶೆಗಳು ಇವೆ. ಉ‌ರ‌್ದು – 54,262 (4.608%), ಮರಾಟಿ – 33,340 (2.831%), ಮಲಯಾಳಂ – 25,130 (2.134%) ಮತ್ತು ತಮಿಳು – 10,115 (0.859%). ಇವುಗಳ ಜೊತೆಗೆ ಇತರ ಗುಂಪಿನಲ್ಲಿ ದೊಡ್ಡ ಸಂಕೆಯ ಮಾತುಗರು ದಾಕಲಾಗಿದ್ದಾರೆ. ಇದರಲ್ಲಿ 23,712 (2.013%) ಮಂದಿ ಇದ್ದಾರೆ. ಇದು ಕನಿಶ್ಟ ಅಯ್ದು ಬಾಶೆಗಳಾದರೂ ಆಗಿರಬಹುದು ಎಂಬುದನ್ನು ಮೇಲೆ ಮಾತಾಡಿದೆ. ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಇರುವ ಎರಡು ಬಾಶೆಗಳು ಇವೆ, ಹಿಂದಿ – 7,322 (0.621%) ಮತ್ತು ತೆಲುಗು – 4,410 (0.374%). ಸಾವಿರಕ್ಕಿಂತ ಕಡಿಮೆ ಮತ್ತು ನೂರಕ್ಕಿಂತ ಹೆಚ್ಚು ಮಂದಿ ಮಾತುಗರು ಇರುವ ಎಂಟು ಬಾಶೆಗಳು ಇವೆ. ಅವುಗಳೆಂದರೆ ಬೆಂಗಾಲಿ, ಓಡಿಯಾ, ಕಾಶ್ಮೀರಿ, ಗುಜರಾತಿ, ಕೂರ‍್ಗಿ/ಕೊಡಗು, ನೇಪಾಲಿ, ಇಂಗ್ಲೀಶು ಮತ್ತು ಪಂಜಾಬಿ. ಇನ್ನು ನೂರಕ್ಕಿಂತ ಕಡಿಮೆ ಮಂದಿ ಮಾತಾಡುವ ಬಾಶೆಗಳ ಸಂಕೆ ಇಪ್ಪತ್ತೊಂಬತ್ತು ಇದೆ. ಈಗ ಉಡುಪಿ ಜಿಲ್ಲೆಯ ಬಾಶೆಗಳ ಸಂಕೆಯನ್ನು ಪಟ್ಟಿಸಿ ನೋಡಬಹುದು.

ಇನ್ನು ಜಿಲ್ಲೆಯ ತಾಯ್ಮಾತುಗಳನ್ನು ಗಮನಿಸಬಹುದು. ತಾಯ್ಮಾತುಗಳ ಅಂಕಿಸಂಕೆಗಳನ್ನು ಬಳಿಸಕೊಂಡಾಗ ಜಿಲ್ಲೆಯ ಬಾಶೆಗಳ ಪಟ್ಟಿಯಲ್ಲಿ ಮಹತ್ವದ ಬದಲಾವಣೆಗಳು ಕಂಡುಬರುತ್ತವೆ.

ಉಡುಪಿಯಲ್ಲಿ ಹಿಂದಿ ಬಾಶೆಗೆ 7,322 ಮಂದಿ ದಾಕಲಾಗಿದ್ದಾರೆ. ಇದರಲ್ಲಿ ಹಿಂದಿ ಮಾತಾಡುವ 5,341 (0.453%) ಮತ್ತು ಲಂಬಾಣಿ ಮಾತಾಡುವ 1,409 (0.119%) ಮಂದಿ ಇದ್ದಾರೆ. ಹತ್ತು ಸಾವಿರಕ್ಕಿಂತ ಕಡಿಮೆ ಮಾತುಗರು ಇರುವ ಬಾಶೆಗಳ ಪಟ್ಟಿಗೆ ಹಿಂದಿ ಜೊತೆಗೆ ಲಂಬಾಣಿ ಬರುತ್ತದೆ. ಕೊಂಕಣಿ ಮಾತಾಡುವ 1,43,155 ಮಂದಿ ಇದ್ದಾರೆ. ಇದರಲ್ಲಿ ಕುಡುಬಿ ಮಾತಾಡುವ 7,726 (0.656%) ಮತ್ತು ನವಾಯಿತಿ ಮಾತಾಡುವ 1,563 (0.132%) ಇದ್ದಾರೆ. ಇವೆರಡು ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಇರುವ ಬಾಶೆಗಳ ಗುಂಪಿಗೆ ಸೇರುತ್ತವೆ. ಆಗ ಕೊಂಕಣಿಯ ಮಾತುಗರ ಸಂಕೆ 1,33,195 ಆಗುತ್ತದೆ. ಆದರೆ, ಅದರ ಸ್ತಾನದಲ್ಲಿ ಯಾವುದೆ ಬದಲಾವಣೆ ಆಗುವುದಿಲ್ಲ. ಈ ಮಾಹಿತಿಯನ್ನು, ತಾಯ್ಮಾತುಗಳ ಸಂಕೆಯನ್ನು ಪರಿಗಣಿಸಿ ಮೇಲೆ ಕೊಟ್ಟ ಉಡುಪಿ ಜಿಲ್ಲೆಯ ಬಾಶೆಗಳನ್ನು ಹೀಗೆ ಚಿತ್ರಿಸಬಹುದು.

ಜಿಲ್ಲೆಯ ಹತ್ತು ದೊಡ್ಡ ಬಾಶೆಗಳ ಪಟ್ಟಿಯನ್ನು ಕೆಳಗೆ ಕೊಟ್ಟಿದೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

March 3, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Venkat

    ಭಾಷೆಗಳ ಬಗೆಗಿನ ಪ್ರಬಂಧದ ಉದ್ದಕ್ಕೂ ಇರುವ “ಬಾಶೆ” ಎಂದರೇನು?
    ಸ್ವಲ್ಪ ಮಟ್ಟಿನ ಭಾಷಾ ಶುದ್ಧತೆ ಇರಬೇಡವೇ ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: