ಬಸವರಾಜ ಕೋಡಗುಂಟಿ ಅಂಕಣ- ದೇಶದಲ್ಲಿ ಕನ್ನಡ ಬಾಶೆಯ ಅಯವತ್ತು ವರುಶಗಳ ಬೆಳವಣಿಗೆ

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ

ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ

ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಕರ‍್ನಾಟಕದ ಒಂದೊಂದು ಬಾಶೆಯ ಮೇಲೆ ಮೂವತ್ತಕ್ಕೂ

ಹೆಚ್ಚು ಬಿಡಿ ಬರಹಗಳನ್ನು ಇಲ್ಲಿ ಬರೆದಿದ್ದಾರೆ.

ರ‍್ನಾಟಕದ ಸುಮಾರು ನಲವತ್ತು ಬಾಶೆಗಳ ಹಂಚಿಕೆಯನ್ನ

ಇನ್ನು ಮುಂದೆ ಪರಿಚಯಿಸಲಾಗುವುದು.

61

ಬಾರತದಲ್ಲಿ 2011ರ ಜನಗಣತಿಯ ಪ್ರಕಾರ ಒಟ್ಟು ಜನಸಂಕೆ 1,21,08,54,977. ಬಾರತ ಮಟ್ಟದಲ್ಲಿ ಕನ್ನಡ ಬಾಶೆಯ ಪ್ರತಿಶತತೆ 3.61% ಆಗಿದ್ದು, ಕನ್ನಡವು ದೇಶಮಟ್ಟದಲ್ಲಿ ಎಂಟನೆ ಸ್ತಾನದಲ್ಲಿದೆ. ಮೊದಲಿನ ಏಳು ಬಾಶೆಗಳು ಹೀಗಿವೆ, ಹಿಂದಿ, ಬೆಂಗಾಲಿ, ಮರಾಟಿ, ತೆಲುಗು, ತಮಿಳು, ಗುಜರಾತಿ ಮತ್ತು ಉರ‍್ದು.

ಕನ್ನಡ ಬಾಶೆಯು 1971ರಲ್ಲಿ ದೇಶಮಟ್ಟದಲ್ಲಿ ಒಂಬತ್ತನೆ ಸ್ತಾನದಲ್ಲಿ ಇದ್ದಿತು. ಆಗ ಎಂಟನೆ ಸ್ತಾನದಲ್ಲಿ ಇದ್ದ ಮಲಯಾಳಂ ಕೆಳಗೆ ಇಳಿದದ್ದರಿಂದ ಎಂಟನೆ ಸ್ತಾನಕ್ಕೆ ಜಿಗಿದಿದೆ. ಈಗ ಕಳೆದ ನಲವತ್ತು ವರುಶಗಳಿಂದ ಕನ್ನಡ ಬಾಶೆಯು ಬಾರತ ಮಟ್ಟದಲ್ಲಿ ಎಂಟನೆ ಸ್ತಾನದಲ್ಲಿಯೆ ಉಳಿದುಕೊಂಡು ಬಂದಿದೆ. 1981ರ ಜನಗಣತಿಯಲ್ಲಿ ಏಳನೆಯ ಸ್ತಾನದಲ್ಲಿ ದಾಕಲಾಗಿದೆ. ಈ ಜನಗಣತಿಯಲ್ಲಿ ಅದಕ್ಕಿಂತ ಮುಂಚೆ ಮತ್ತು ಅದರ ನಂತರ ಕನ್ನಡಕ್ಕಿಂತ ಮೇಲಿನ ಸ್ತಾನದಲ್ಲಿ ಇದ್ದ ತಮಿಳಿನ ಮಾಹಿತಿ ಇಲ್ಲದ್ದರಿಂದ ತಮಿಳು ವರದಿಯಾಗಿಲ್ಲ. ಆದ್ದರಿಂದ ಕನ್ನಡ ಏಳನೆಯ ಸ್ತಾನದಲ್ಲಿ ದಾಕಲಾಗಿದೆ. ಇಲ್ಲದಿದ್ದರೆ ಎಂಟನೆಯ ಸ್ತಾನ ಎಂದು ಬಾವಿಸಿಕೊಳ್ಳಬೇಕು. ಆನಂತರ ನಿರಂತರವಾಗಿ ಕನ್ನಡವು ಎಂಟನೆಯ ಸ್ತಾನದಲ್ಲಿ ಇದೆ.

ಆದರೆ ಇಲ್ಲಿ ಒಂದು ಗಮನಿಸುವಂತ ವಿಶಯವಿದೆ. ಕಳೆದ ಸುಮಾರು ಅಯ್ವತ್ತು ವರುಶಗಳಿಂದ ಕನ್ನಡ ಮಾತಾಡುವವರ ಸಂಕೆ ನಿರಂತರ ಏರುತ್ತಾ ಬರುತ್ತಿದೆಯಾದರೂ ದೇಶಮಟ್ಟದ ಕನ್ನಡ ಬಾಶೆಯ ಪ್ರತಿಶತತೆ ಕಡಿಮೆಯಾಗುತ್ತಾ ಬರುತ್ತಿದೆ. 1981ರಿಂದ 1991ರ ನಡುವೆ ಮಾತ್ರ ತುಸು ಹೆಚ್ಚಳ ದಾಕಲಾಗಿದೆ. ಇಲ್ಲಿ ಕಳೆದ ಅಯ್ದು ಜನಗಣತಿಗಳ ಅಂದರೆ 1971ರಿಂದ 2011ರವರೆಗಿನ ಗಣತಿಗಳ ಮಾಹಿತಿಯನ್ನು, ಸಂಕೆಯ ಏರಿಕೆ, ಏರಿಕೆಯ ಪ್ರತಿಶತತೆ ಇವುಗಳನ್ನು ಕೆಳಗೆ ತೋರಿಸಿದೆ.

ಜನಗಣತಿ19711981199120012011
ಸಂಕೆ2,17,10,6492,56,97,1463,27,53,6763,79,24,0114,37,06,512
%3.96%3.86%3.91%3.69%3.61%
ಅಂತರ+39,86,497+70,56,530+51,70,335+57,82,501
18.3627.4615.0515.99

1971ರಿಂದ 1981ರ ನಡುವೆ ಕನ್ನಡ ಮಾತಾಡುವವರ ಸಂಕೆ +39,86,497ದಶ್ಟು ಏರಿಕೆ ಕಂಡಿದೆ. ಆದರೆ ದೇಶಮಟ್ಟದ ಪ್ರತಿಶತತೆಯಲ್ಲಿ ಮಾತ್ರ ಸ್ವಲ್ಪ ಕುಸಿದಿದೆ. ಆದರೆ ಆನಂತರ 1981 ಮತ್ತು 1991ರ ನಡುವೆ ಕನ್ನಡ ಮಾತಾಡುವವರ ಸಂಕೆ ಆ ಹಿಂದಿನ ಏರಿಕೆಗೆ ಹೋಲಿಸಿದಾಗ ಗಣನೀಯ ಎನಿಸುವಶ್ಟು ಮತ್ತು ಆನಂತರದ ದಶಕಗಳಲ್ಲಿನ ಏರಿಕೆಗೆ ಹೋಲಿಸಿದರೂ ಹೆಚ್ಚೆನಿಸುವಶ್ಟು ಏರಿಕೆ ಆಗಿದೆ. 1981 ಮತ್ತು 1991ರ ನಡುವಿನ ಕನ್ನಡ ಮಾತುಗರ ಏರಿಕೆ +70,56,530 ಆಗಿದೆ. ದೇಶಮಟ್ಟದಲ್ಲಿ ಕನ್ನಡದ ಪ್ರತಿಶತತೆ ಈ ಹಿಂದಿನ ದಶಕದಲ್ಲಿ ಇಳಿಕೆಯಲ್ಲಿದ್ದದ್ದು ಈ ದಶಕದಲ್ಲಿ ಹೆಚ್ಚಳವನ್ನು ಕಂಡಿದೆ. ಆನಂತರದ ದಶಕಗಳಲ್ಲಿ ಕನ್ನಡ ಜನಸಂಕೆಯ ನಿಯತ ಏರಿಕೆ ಮತ್ತು ದೇಶಮಟ್ಟದ ಪ್ರತಿಶತದಲ್ಲಿನ ನಿಯತ ಕುಸಿತವನ್ನು ತೋರಿಸುತ್ತಿದೆ. 1991 ಮತ್ತು 2001ರ ನಡುವೆ +51,70,335ದಶ್ಟು, 2001 ಮತ್ತು 2011ರ ನಡುವೆ +57,82,501ದಶ್ಟು ಜನಸಂಕೆ ಹೆಚ್ಚಾಗಿದೆ. ಈ ಜನಸಂಕೆಯ ಏರಿಕೆ ಮತ್ತು ದೇಶಮಟ್ಟದ ಪ್ರತಿಶತತೆಯಲ್ಲಿನ ಇಳಿಕೆ ಮುಂದುವರೆಯುತ್ತದೆ. 

ಕನ್ನಡ ಮಾತುಗರ ಬೆಳವಣಿಗೆ:

ಜನಸಂಕೆಯಲ್ಲಿ ಏರಿಕೆ ಇದ್ದರೂ ದೇಶದಲ್ಲಿನ ಕನ್ನಡದ ಪ್ರತಿಶತತೆ ಇಳಿಯುತ್ತಿರುವುದಕ್ಕೆ ಬೇರೆ ಬಾಶೆಗಳ ಮತ್ತು ಕನ್ನಡ ಮಾತುಗರ ಏರಿಕೆಯ ಪ್ರಮಾಣದಲ್ಲಿನ ಅಂತರ ಕಾರಣವಾಗಿರುತ್ತದೆ. ಕೊನೆಯಲ್ಲಿ ಅನುಬಂದದಲ್ಲಿ ಬಾರತದ ಎಲ್ಲ ಅನುಸೂಚಿತ ಬಾಶೆಗಳ ಮಾಹಿತಿಯನ್ನು ಓದುಗರ ಅವಗಾಹನೆಗೆ ಕೊಟ್ಟಿದೆ.

ಅಯ್ವತ್ತು ವರುಶಗಳಲ್ಲಿ ಬಾರತದಲ್ಲಿ ಕನ್ನಡ ಬಾಶೆಯ ಪ್ರತಿಶತತೆ:

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

June 1, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: