ತಪ್ಪದೆ ನೋಡಬೇಕಾದ ‘ಪಿಂಕಿ ಎಲ್ಲಿ?’

ಅನಂತ shandreya

ನಮ್ಮಲ್ಲಿ ಕಥೆ ಎಂದರೆ ಅದು ನಾಸ್ಟಾಲ್ಜಿಕ್ ಆದ ರಮ್ಯ ಕಥಾನಕವೇ ಆಗಿರುತ್ತೆ ಎಲ್ಲರೂ ತಮ್ಮ ಬಾಲ್ಯದ್ದೋ ಯೌವ್ವನದ ದಿನಗಳದ್ದೋ ಹಳೆಯ ಅನುಭವವನ್ನೇ ಕಥೆಯಾಗಿಸುತ್ತಾರೆ, ಸಮಕಾಲೀನ ತಲ್ಲಣಗಳನ್ನು ಗಟ್ಟಿಯಾದ ಕಥೆಯಾಗಿ ನಮ್ಮ ಮುಂದೆ ಇಟ್ಟವರು ತುಂಬಾ ಕಡಿಮೆ. ಅದರಲ್ಲೂ ನಗರ ಬದುಕಿನ ಸಂಕೀರ್ಣತೆಯನ್ನು ಕಥೆಯಾಗಿಸಿದ್ದು ತುಂಬಾ ಅಪರೂಪ, ಇದು ನಮ್ಮ ಸಿನಿಮಾಗಳಿಗೂ ಅನ್ವಯಿಸುತ್ತದೆ. ನಮ್ಮ ಸಿನಿಮಾಗಳೂ ಸಹ ರಮ್ಯ ಪ್ರೇಮದ ಕಥೆಗೆ, ಸೇಡು ಮಾರಾಮಾರಿಯಾ ಕಥೆಗೆ, ಅತಿಮಾನುಷ ಆಕ್ಷನ್ ಕಥೆಗೆ, ರೋಮ್ಯಾಂಟಿಕ್ ಫ್ಯಾಂಟಸಿ ಕಥೆಗಳಿಗೆ ಜೋತು ಬಿದ್ದಿರುವುದೇ ಜಾಸ್ತಿ, ಸಮಕಾಲೀನ ತವಕ ತಲ್ಲಣಗಳು, ಮನುಷ್ಯ ಸಂಬಂಧಗಳ ನಡುವಿನ ಬಿರುಕು ಬಿಕ್ಕಟ್ಟುಗಳು, ಸೂಕ್ಷ್ಮಗಳು ನಗರ ಬದುಕಿನ ಸಂಕೀರ್ಣತೆಗಳು ಸಾಂದ್ರವಾಗಿ ತೆರೆಯ ಮೇಲೆ ಬಂದದ್ದು ತುಂಬಾ ಅಪರೂಪ.

ನನಗೆ ನೆನಪಿಗೆ ಬರುವುದು ಗಿರೀಶ್ ಕಾಸರವಳ್ಳಿಯವರ ‘ಮನೆ’, ಶಂಕರ್ ನಾಗ್ ನಿರ್ದೇಶಿಸಿದ ‘ ಆಕ್ಸಿಡೆಂಟ್’, ಬಿ ಎಸ್ ಲಿಂಗದೇವರು ಅವರ ‘ನಾನು ಅವನಲ್ಲ ಅವಳು’ ಹೀಗೆ ಕೆಲವೇ ಸಿನಿಮಾಗಳು ಮಾತ್ರ. ಈ ನಿಟ್ಟಿನಲ್ಲಿ ನನಗೆ ನಗರ ಬದುಕಿನ ಸಂಕೀರ್ಣತೆಯನ್ನು ಕಟ್ಟಿಕೊಡುವ ನಿರ್ದೇಶಕರಾಗಿ ಪೃಥ್ವಿ ಕೊಣನೂರು ತುಂಬಾ ಭರವಸೆ ಹುಟ್ಟಿಸುತ್ತಾರೆ. ಅವರ ರೈಲ್ವೆ ಚಿಲ್ಡ್ರನ್, ಪಿಂಕಿ ಎಲ್ಲಿ, ಹಾಗೂ ಹದಿನೇಳೆoಟು ನಗರ ಬದುಕಿನ ಸಂಕೀರ್ಣತೆಯನ್ನು ಬಿರುಕು ಬಿಕ್ಕಟ್ಟುಗಳನ್ನು ತಣ್ಣಗೆ ಬಾವಾವೇಶವಿಲ್ಲದೆ ವಾಸ್ತವಿಕ ನೆಲೆಗಟ್ಟಿನಲ್ಲಿ ಪ್ರೇಕ್ಷಕನಿಗೆ ದಾಟಿಸುವಲ್ಲಿ ಯಶಸ್ವಿಯಾಗಿವೆ, ಆದರೆ ಇವರ ಈ ಮೂರೂ ಸಿನಿಮಾಗಳು ಫಿಲ್ಮ್ ಫೆಸ್ಟಿವಲ್ ಗಳಲ್ಲಿ ಮಾತ್ರ ನೋಡಲು ಸಿಗುತ್ತವೆ.

ಆದರೆ ಈಗ ಪಿಂಕಿ ಎಲ್ಲಿ? ಸಿನಿಮಾದ ನಿರ್ಮಾಪಕ ಕೃಷ್ಣಗೌಡರು ಈ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಭಾರತೀಯ ಪನೋರಮ ವಿಭಾಗಕ್ಕೆ ಆಯ್ಕೆಯಾಗಿದ್ದ ಪಿಂಕಿ ಎಲ್ಲಿ ಇತ್ತೀಚಿನ ದಿನಗಳಲ್ಲಿ ಬಂದ ಕನ್ನಡದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು.

ಸಂಘರ್ಷದ ವೈವಾಹಿಕ ಬದುಕಿನಲ್ಲಿರುವ ಉದ್ಯೋಗಸ್ಥ ಮಹಿಳೆಯೊಬ್ಬಳು ತನ್ನ ಮಗುವನ್ನು ಕಳೆದುಕೊಂಡು ಅದನ್ನು ಹುಡುಕಲು ಪಡುವ ಬವಣೆ, ಅವಳ ಆತಂಕಗಳು, ಎಳೆ ಕೂಸುಗಳನ್ನು ಭಿಕ್ಷಾಟನೆಗೆ ಬಳಸಿಕೊಳ್ಳುವ ಮಾಫಿಯ, ಪುಡಿಗಾಸಿಗೆ ಇದಕ್ಕೆ ಸಹಕರಿಸುವ ಹೆಂಗಸಿನ ಬಡತನ ತಲ್ಲಣಗೊಳಿಸುವ ಅವಳ ಬದುಕು, ಸಂಬಂಧಗಳ ನಡುವೆ ಇರುವ ಕ್ರೂರತನ ಇದೆಲ್ಲವನ್ನು ನಿರ್ದೇಶಕ ಪೃಥ್ವಿ ತಣ್ಣಗೆ ಪ್ರೇಕ್ಷಕರಿಗೆ ದಾಟಿಸುತ್ತಾರೆ.

ಉದ್ಯೋಗಸ್ಥ ಮಹಿಳೆಯಾಗಿ, ಮಗುವನ್ನು ಕಳೆದುಕೊಂಡ ತಾಯಿಯಾಗಿ, ವಿಘಟಿತ ಸಂಬಂಧದಲ್ಲಿ ಇರುವ, ಆದರೆ ದೈರ್ಯಸ್ಥೆಯಾಗಿರುವ ಹೆಣ್ಣಾಗಿ ಅಕ್ಷತಾ ಪಾಂಡವಪುರ ಅದ್ಭುತವಾಗಿ ನಟಿಸಿದ್ದಾರೆ. ಈ ಸಿನಿಮಾ ನಿರ್ಮಾಣ ಮಾಡಿದ ಕೃಷ್ಣೆಗೌಡ ಮತ್ತು ನಿರ್ದೇಶಿಸಿದ ಪೃಥ್ವಿ ಕೊಣನೂರು ಅಭಿನಂದನೆಗೆ ಅರ್ಹರು. ನಾಳೆಯಿಂದ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ, ತಪ್ಪದೆ ನೋಡಲೇ ಬೇಕಾದ ಸಿನಿಮಾ ಪಿಂಕಿ ಎಲ್ಲಿ?

‍ಲೇಖಕರು avadhi

June 1, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: