ಬಸವರಾಜ ಕೋಡಗುಂಟಿ ಅಂಕಣ – ಕನ್ನಡ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ

ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ

ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಕರ‍್ನಾಟಕದ ಒಂದೊಂದು ಬಾಶೆಯ ಮೇಲೆ ಮೂವತ್ತಕ್ಕೂ

ಹೆಚ್ಚು ಬಿಡಿ ಬರಹಗಳನ್ನು ಇಲ್ಲಿ ಬರೆದಿದ್ದಾರೆ.

ರ‍್ನಾಟಕದ ಸುಮಾರು ನಲವತ್ತು ಬಾಶೆಗಳ ಹಂಚಿಕೆಯನ್ನ

ಇನ್ನು ಮುಂದೆ ಪರಿಚಯಿಸಲಾಗುವುದು.

32

ಕನ್ನಡ

ಕನ್ನಡ ದೇಶದ ಮಹತ್ವದ ಬಾಶೆಯಾಗಿದ್ದು ದೇಶದಲ್ಲಿ ಒಟ್ಟು ಕನ್ನಡದ ಮಾತುಗರ ಸಂಕೆ 4,37,06,512. ಕರ‍್ನಾಟಕದಲ್ಲಿ ಕನ್ನಡಕ್ಕೆ ಅತಿ ಹೆಚ್ಚಿನ ಮಂದಿ ಮಾತುಗರು ದಾಕಲಾಗಿದ್ದಾರೆ. ಕರ‍್ನಾಟಕದಲ್ಲಿ ದಾಕಲಾದ ಕನ್ನಡಿಗರ ಸಂಕೆ 4,06,51,090, ಇದು ಒಟ್ಟು ದೇಶದ ಕನ್ನಡಿಗರ 93.009% ಆಗುತ್ತದೆ ಮತ್ತು ಕರ‍್ನಾಟಕದ 66.537% ಆಗುತ್ತದೆ. ಕನ್ನಡದಲ್ಲಿ ಒಟ್ಟು ನಾಲ್ಕು ತಾಯ್ಮಾತುಗಳು ದಾಕಲಾಗಿವೆ. ಬಡಗ (619), ಕನ್ನಡ (4,06,22,836), ಕುರುಬ/ಕುರುಂಬ (15,674), ಪ್ರಾಕ್ರುತ ಬಾಶಾ (385) ಮತ್ತು ಇತರ (11,576) ಎಂಬ ಒಂದು ಗುಂಪು ಇದೆ.

ಅತಿ ಹೆಚ್ಚು ಮಂದಿ ಕನ್ನಡ ಮಾತುಗರು ಅಂದರೆ 42,77,100 ಮಂದಿ ಬೆಂಗಳೂರು ನಗರ ಜಿಲ್ಲೆಯಲ್ಲಿ ದಾಕಲಾಗಿದ್ದಾರೆ. ಇದರ ನಂತರ ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಿನ ಸಂಕೆಯ ಅಂದರೆ 32,68,714ದಶ್ಟು ಕನ್ನಡ ಮಾತುಗರು ದಾಕಲಾಗಿದ್ದಾರೆ. ಈ ಎರಡು ಜಿಲ್ಲೆಗಳಲ್ಲಿ ಕರ‍್ನಾಟಕದ ಕನ್ನಡ ಮಾತುಗರ ಸುಮಾರು 19% ಮಂದಿ ಕಾಣಿಸುತ್ತಾರೆ. ಆನಂತರ ಮಯ್ಸೂರು (24,25,061) ಮತ್ತು ತುಮಕೂರು (22,75,796) ಎರಡು ಜಿಲ್ಲೆಗಳಲ್ಲಿ ಮೂವತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಇಪ್ಪತ್ತು ಲಕ್ಶಕ್ಕಿಂತ ಹೆಚ್ಚು ಮಂದಿ ದಾಕಲಾಗಿದ್ದಾರೆ. ಹದಿಮೂರು ಜಿಲ್ಲೆಗಳಲ್ಲಿ ಇಪ್ಪತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಹತ್ತು ಲಕ್ಶಕ್ಕಿಂತ ಹೆಚ್ಚು ಮಂದಿ ಮಾತುಗರು ದಾಕಲಾಗಿದ್ದಾರೆ. ಬಳ್ಳಾರಿ (17,62,103), ಕಲಬುರಗಿ (16,86,019), ಮಂಡ್ಯ (16,59,740), ವಿಜಯಪುರ (16,31,061), ಬಾಗಲಕೋಟೆ (16,26,325), ಹಾಸನ (15,45,832), ದಾವಣಗೆರೆ (15,13,297), ರಾಯಚೂರು (14,43,924), ಚಿತ್ರದುರ‍್ಗ (13,82,085), ದಾರವಾಡ (12,94,240), ಹಾವೇರಿ (12,34,307), ಶಿವಮೊಗ್ಗ (12,29,553), ಕೊಪ್ಪಳ (11,68,580). ಆನಂತರ ಹನ್ನೊಂದು ಜಿಲ್ಲೆಗಳಲ್ಲಿ ಹತ್ತು ಲಕ್ಶಕ್ಕಿಂತ ಕಡಿಮೆ ಮತ್ತು ಎರಡು ಲಕ್ಶಕ್ಕಿಂತ ಹೆಚ್ಚು ಮಂದಿ ಇದ್ದಾರೆ. ಗದಗ (9,08,273), ರಾಮನಗರ (9,03,741), ಬೀದರ (9,02,111), ಚಾಮರಾಜನಗರ (8,78,958), ಯಾದಗಿರಿ (8,69,432), ಚಿಕ್ಕಮಗಳೂರು (8,27,693), ಉತ್ತರ ಕನ್ನಡ (7,95,334), ಕೋಲಾರ (7,91,446), ಚಿಕ್ಕಬಳ್ಳಾಪುರ (7,45,099), ಬೆಂಗಳೂರು ಗ್ರಾಮಾಂತರ (7,10,170), ಉಡುಪಿ (5,02,613). ಎರಡು ಜಿಲ್ಲೆಗಳಲ್ಲಿ ಎರಡು ಲಕ್ಶಕ್ಕಿಂತ ಕಡಿಮೆ ಮಂದಿ ಮಾತುಗರು ಇದ್ದಾರೆ. ದಕ್ಶಿಣ ಕನ್ನಡ (1,92,810), ಕೊಡಗು (1,71,419).

ಪ್ರದೇಶಜಿಲ್ಲೆಯ ಜನಸಂಕೆಮಾತುಗರು ಆ ಜಿಲ್ಲೆಯ % ಆ ಬಾಶೆಯ %
ಕರ‍್ನಾಟಕ6,10,95,2974,06,51,09066.537%100%
ಬೆಂಗಳೂರು96,21,55142,77,10044.453%10.521%
ಬೆಳಗಾವಿ47,79,66132,68,71468.387%8.040%
ಮಯ್ಸೂರು30,01,12724,25,06180.805%5.965%
ತುಮಕೂರು26,78,98022,75,79684.950%5.598%
ಬಳ್ಳಾರಿ24,52,59517,62,10371.846%4.334%
ಕಲಬುರಗಿ25,66,32616,86,01965.697%4.147%
ಮಂಡ್ಯ18,05,76916,59,74091.913%4.082%
ವಿಜಯಪುರ21,77,33116,31,06174.911%4.012%
ಬಾಗಲಕೋಟೆ18,89,75216,26,32586.060%4.000%
ಹಾಸನ17,76,42115,45,83287.019%3.802%
ದಾವಣಗೆರೆ19,45,49715,13,29777.784%3.722%
ರಾಯಚೂರು19,28,81214,43,92474.860%3.551%
ಚಿತ್ರದುರ‍್ಗ16,59,45613,82,08583.285%3.399%
ದಾರವಾಡ18,47,02312,94,24070.071%3.183%
ಹಾವೇರಿ15,97,66812,34,30777.256%3.036%
ಶಿವಮೊಗ್ಗ17,52,75312,29,55370.149%3.024%
ಕೊಪ್ಪಳ13,89,92111,68,58084.075%2.874%
ಗದಗ10,20,7919,08,27388.977%2.234%
ರಾಮನಗರ10,82,6369,03,74183.475%2.223%
ಬೀದರ17,03,3009,02,11152.962%2.219%
ಚಾಮರಾಜನಗರ10,20,7918,78,95886.105%2.162%
ಯಾದಗಿರಿ11,74,2718,69,43274.040%2.138%
ಚಿಕ್ಕಮಗಳೂರು11,37,9618,27,69372.734%2.036%
ಉತ್ತರ ಕನ್ನಡ14,37,1697,95,33455.340%1.956%
ಕೋಲಾರ15,36,4017,91,44651.512%1.946%
ಚಿಕ್ಕಬಳ್ಳಾಪುರ12,55,1047,45,09959.365%1.832%
ಬೆಂಗಳೂರು ಗ್ರಾಮಾಂತರ9,90,9237,10,17071.667%1.746%
ಉಡುಪಿ11,77,3615,02,61342.689%1.236%
ದಕ್ಶಿಣ ಕನ್ನಡ20,89,6491,92,8109.226%0.474%
ಕೊಡಗು5,54,5191,71,41930.913%0.421%

ನಕಾಶೆ: ಕನ್ನಡ ಮಾತುಗರ ಹಂಚಿಕೆ

ಕನ್ನಡ ಮಾತುಗರ ಜಿಲ್ಲಾವಾರು ಹಂಚಿಕೆ

ಜಿಲ್ಲಾವಾರು ಕನ್ನಡದ ಪ್ರತಿಶತತೆ

ಇದರಲ್ಲಿ ಮಂಡ್ಯ ಜಿಲ್ಲೆಯಲ್ಲಿ ಅತಿಹೆಚ್ಚು ಅಂದರೆ ಕನ್ನಡ ಮಾತಾಡುವ ಪ್ರತಿಶತತೆ 91.913% ಇದೆ. ಆನಂತರ ಗದಗ (88.977%) ಮತ್ತು ಹಾಸನ (87.019%) ಜಿಲ್ಲೆಗಳು ಬರುತ್ತವೆ. ಅತಿ ಕಡಿಮೆ ಪ್ರತಿಶತತೆಯನ್ನು ಗಮನಿಸಿದಾಗ ಮಂಗಳೂರು ಜಿಲ್ಲೆ ಅತಿ ಕಡಿಮೆ ಅಂದರೆ 9.226% ಪ್ರತಿಶತತೆಯನ್ನ ಹೊಂದಿದೆ. ಆನಂತರ ಕೊಡಗು (30.913%) ಉಡುಪಿ (42.689%) ಮತ್ತು ಬೆಂಗಳೂರು ನಗರ (44.453%) ಜಿಲ್ಲೆಗಳು ಬರುತ್ತವೆ.

ಸಾಮಾನ್ಯವಾಗಿ ಕರ‍್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಕನ್ನಡ ಅತಿದೊಡ್ಡ ಬಾಶೆಯಾಗಿದ್ದರೆ, ಮಂಗಳೂರು ಜಿಲ್ಲೆಯಲ್ಲಿ ಇದು ಅಯ್ದನೆ ದೊಡ್ಡ ಬಾಶೆಯಾಗಿದೆ. 

ಕೆಳಗೆ ಕರ‍್ನಾಟಕದ ಜಿಲ್ಲೆಗಳಲ್ಲಿನ ಕನ್ನಡದ ಪ್ರತಿಶತತೆಯನ್ನು ಇಳಿಕೆ ಕ್ರಮದಲ್ಲಿ ಕೊಟ್ಟಿದೆ. ಅದರೊಟ್ಟಿಗೆ ಆ ಜಿಲ್ಲೆಯಲ್ಲಿ ಕನ್ನಡ ಹೊಂದಿರುವ ಸ್ತಾನವನ್ನೂ ಜೊತೆಗೆ ತೋರಿಸಿದೆ.

ಜಿಲ್ಲೆಜಿಲ್ಲೆಯ ಜನಸಂಕೆಮಾತುಗರು ಆ ಜಿಲ್ಲೆಯ %ಜಿಲ್ಲೆಯಲ್ಲಿ ಸ್ತಾನ
ಮಂಡ್ಯ18,05,76916,59,74091.913%1
ಗದಗ10,20,7919,08,27388.977%1
ಹಾಸನ17,76,42115,45,83287.019%1
ಚಾಮರಾಜನಗರ10,20,7918,78,95886.105%1
ಬಾಗಲಕೋಟೆ18,89,75216,26,32586.060%1
ತುಮಕೂರು26,78,98022,75,79684.950%1
ಕೊಪ್ಪಳ13,89,92111,68,58084.075%1
ರಾಮನಗರ10,82,6369,03,74183.475%1
ಚಿತ್ರದುರ‍್ಗ16,59,45613,82,08583.285%1
ಮಯ್ಸೂರು30,01,12724,25,06180.805%1
ದಾವಣಗೆರೆ19,45,49715,13,29777.784%1
ಹಾವೇರಿ15,97,66812,34,30777.256%1
ವಿಜಯಪುರ21,77,33116,31,06174.911%1
ರಾಯಚೂರು19,28,81214,43,92474.860%1
ಯಾದಗಿರಿ11,74,2718,69,43274.040%1
ಚಿಕ್ಕಮಗಳೂರು11,37,9618,27,69372.734%1
ಬಳ್ಳಾರಿ24,52,59517,62,10371.846%1
ಬೆಂಗಳೂರು ಗ್ರಾಮಾಂತರ9,90,9237,10,17071.667%1
ಶಿವಮೊಗ್ಗ17,52,75312,29,55370.149%1
ದಾರವಾಡ18,47,02312,94,24070.071%1
ಬೆಳಗಾವಿ47,79,66132,68,71468.387%1
ಕಲಬುರಗಿ25,66,32616,86,01965.697%1
ಚಿಕ್ಕಬಳ್ಳಾಪುರ12,55,1047,45,09959.365%1
ಉತ್ತರ ಕನ್ನಡ14,37,1697,95,33455.340%1
ಬೀದರ17,03,3009,02,11152.962%1
ಕೋಲಾರ15,36,4017,91,44651.512%1
ಬೆಂಗಳೂರು96,21,55142,77,10044.453%1
ಉಡುಪಿ11,77,3615,02,61342.689%1
ಕೊಡಗು5,54,5191,71,41930.913%1
ದಕ್ಶಿಣ ಕನ್ನಡ20,89,6491,92,8109.226%5

‍ಲೇಖಕರು Admin

October 20, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: