ಬಳ್ಳಾರಿಯವರ ಆ ಮುಖ, ಈ ಮುಖ

ಬಾಳಾ ದಿನಗಳಿಂದ ಜಡ್ಡುಗಟ್ಟಿ, ಗವ್ವೆನ್ನುವ ಕತ್ತಲಲ್ಲಿದ್ದ ಮನಸ್ಸು ಸಡನ್ನಾಗಿ ಎಚ್ಚರದ ಸ್ಥಿತಿಗೆ ಬಂದದ್ದು ವನರಂಗದಲ್ಲಿ.

ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಿಂದ ಎದ್ದು ಬಂದಿದ್ದ ಬಯಲು ಸಾಹಿತ್ಯ ವೇದಿಕೆಯ ಮಂದಿ ಮೈಸೂರಿನ ವನರಂಗದ ಕಲ್ಲು ಬೆಂಚುಗಳನ್ನು ಆಲಿಸುವ ಕಿವಿಗಳಿಂದ ತುಂಬಿಸಿಬಿಟ್ಟಿದ್ದರು.

ಅಲ್ಲಿ ನಡೆದದ್ದು

ವರ್ತಮಾನ ಕರ್ನಾಟಕ ವಿಷಯವನ್ನಿಟ್ಟುಕೊಂಡು ರಾಜಕೀಯಆರ್ಥಿಕ ಸಾಹಿತ್ಯ ವರ್ತಮಾನಗಳ ಬಗ್ಗೆ ಮಾತು, ಬಂದಿದ್ದ ಮಾತುಗಾರರ ಮೇಲೆ ಪ್ರಶ್ನೆಗಳ ಜುಗಲ್ ಬಂದಿ.

ಎರಡು ದಿನ ಭಾನುಮುಷ್ತಾಕ್, ಬಂಜಗೆರೆ ಜಯಪ್ರಕಾಶ್, ಡಾ.ಸು,  ಎಂ.ವಿ. ರಹಮತ್ ತರೀಕೆರೆ, ಜಿ.ಪಿ ಬಸವರಾಜು, ಪೀರ್ ಬಾಷಾ, ತಾರಿಣಿ ಶುಭದಾಯಿನಿ, ಡಾ.ರಂಗನಾಥ್ ಕುಂಟನಕುಂಟೆ,  ಕೇಶವ ಮಳಗಿ, ಅಶೋಕ್ ಹೆಗಡೆ, ಮಂಜುನಾಥ್ ಲತಾ, ಸೇರಿದಂತೆ 20 ಕ್ಕೂ ಹೆಚ್ಚು ಮಂದಿ ವಿಷಯ ಮಂಡನೆ ಮಾಡಿದರು.

ಸಮಾರೋಪಕ್ಕೆ ಬಂದಿದ್ದ ಅನಂತಮೂರ್ತಿ ಬರೆಯುವ ಸಂಕಟದ ಬಗ್ಗೆ ಯಾವ ಪರಿ ಮಾತಿಗೆ ಇಳಿದರೆಂದರೆ ಆದೇ ವೇದಿಕೆಯಲ್ಲಿ ಮಾತನಾಡಬೇಕಿದ್ದ ಇನ್ನೂ ನಾಲ್ಕು ಮಂದಿ ತಂತಮ್ಮ ಸಮಯವನ್ನೆಲ್ಲ ಅವರಿಗೆ ಕೊಟ್ಟು ಬರೇ ಪ್ರೇಕ್ಷಕರಾಗಿ ಉಳಿದರು.

ಇಂತದ್ದೊಂದು ಪ್ರಯತ್ನಕ್ಕೆ ಕಾರಣರಾದ ನಿರಂಜನ ಕೊಟ್ಟೂರು, ಉಷಾ, ಭಾರತೀದೇವಿ, ಸುಧೀಂದ್ರ ಕುಮಾರ್, ಅಕ್ಷತಾ,ಅರುಣ್ ಜೋಳದ ಕೂಡ್ಲಿಗಿ, ಗೋವಿಂದ ರಾಜು ಮುಂತಾದವರಿಗೆಲ್ಲ ಥ್ಯಾಂಕ್ಸ್ ಹೇಳಲೇ ಬೇಕು….

]]>

‍ಲೇಖಕರು avadhi

July 12, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ತಪ್ಪು

ತಪ್ಪು

3 ಪ್ರತಿಕ್ರಿಯೆಗಳು

  1. siddu devaramani

    ಇಲ್ಲಿನ ಫೋಟೋಸ್ ನೋಡಿ ಖುಶಿ ಆತು. ನಾನು ಬ೦ದಿದ್ರೆ ಅನಿಸಿತು.
    ಅರುಣ್ ನ ಅಮ್ಮಕಾಣಿಸಿಕೊ೦ಡಿದ್ದು ನನಗೆ ಬಲು ಇಷ್ಟ ಆತು.
    ಅಲ್ ದಿ ಬೆಸ್ಟ್ ಅರುಣ್.

    ಪ್ರತಿಕ್ರಿಯೆ
  2. ಡಿ.ಎಸ್.ರಾಮಸ್ವಾಮಿ

    ಈ ಕಾರ್ಯಕ್ರಮನ್ನು ಆಗುಮಾಡಿದ ಅರುಣ್ ಜೋಳದಕೂಡ್ಲಿಗಿ, ಭಾರತೀದೇವಿ ಮತ್ತು ಸುಧೀಂದ್ರಕುಮಾರ್ ಹಾಗೇ ನಿರಂಜನ-ಉಷಾ, ಅಂಚೆ ಕೊಟ್ರೇಶ ಎಲ್ಲರನ್ನೂ ಅಭಿನಂದಿಸಲೇಬೇಕು. ಚರ್ಚೆಗೆ ಸಮಯದ ಕೊರತೆ ಇದ್ದರೂ ಸರ್ಕಾರೀ ಪ್ರಾಯೋಜಿತ ಕಾರ್ಯಕ್ರಮಗಳಿಗಿಂತ ತೀರ ಭಿನ್ನವಾಗಿತ್ತು. ಅಶೋಕ ಹೆಗಡೆ, ವಸು ಮತ್ತು ಕೇಶವ ಶರ್ಮ ನಮ್ರವಾಗಿ, ವಿಷಯದ ಆಳವನ್ನು ತಳಸ್ಪರ್ಶಿಯಾಗಿ ಕಾಣಿಸಿದರು. ಕರ್ನಾಟಕ ವರ್ತಮಾನ ಸಾಹಿತ್ಯ ಎಂದಿನಂತೆ ಸಾಹಿತ್ಯ ಸಮ್ಮೇಳನಗಳ ಅದೇ ಅದೇ ಹಾಡು ಹಾಡಿದರೂ ಇದ್ದುದರಲ್ಲಿ ಮಂಜುನಾಥ ಲತಾ ವರ್ತಮಾನದ ಕೆಲವು ಸಂಗತಿಗಳನ್ನು ಚರ್ಚಿಸಿದರು. ಜಿಪಿಬಿ ಸಂವಾದದಲ್ಲಿ, ಬಂಜಗೆರೆ ತಮ್ಮ ಎಂದಿನ ಅದ್ಭುತ ಶೈಲಿಯಲ್ಲಿ ಮನಸೂರೆಗೊಂಡರು. ಬಹಳ ದಿನಗಳ ನಂತರ ’ನಿಜವಾದ ಸಾಹಿತ್ಯ’ ಕುರಿತು ಚರ್ಚೆ, ಮಾತು ಕತೆ, ಸ್ನೇಹಿತರ ಭೇಟಿ really it was very good. thanks again to all who r behind this

    ಪ್ರತಿಕ್ರಿಯೆ
    • ಡಿ.ಎಸ್.ರಾಮಸ್ವಾಮಿ

      ಕೇಶವ ಶರ್ಮ ಅಲ್ಲ ಕೇಶವ ಮಳಗಿ ಎಂದಾಗಬೇಕು.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: