ಬರೆಯುವುದನ್ನೇ ನಿಲ್ಲಿಸಿಬಿಟ್ಟಿದ್ದೇನೆ ನಾನು..

ರಂಜನಾ ಭಟ್

ಅಸಂಖ್ಯ ಖುಷಿಗಳು ಫಕ್ಕನೆ
ತೇಲಿ ಹೋಗಿವೆ ಗಾಳಿಯಲಿ
ಅದೆಷ್ಟೋ ದುಃಖಗಳು ಹೇಳದೆ ಮರೆಯಾಗಿವೆ ಮನದಲಿ
ಬರಿದಾಗಿದೆಯೇ ಭಾವಗಳ ಖಜಾನೆ?
ಊಹಿಸಲಾಗದೇ ಮುಂದಿನ ಯೋಜನೆ?…
ಗಿಜಿಗುಡುವ ಸಂತೆಯಲಿ ಕಳೆದುಹೋದ
ಪುಟಾಣಿ ಪಾದದ ಹುಡುಗಿಯಂತೆ ನಾನು
ವಿಳಾಸ ಹೇಳಲೂ ಬಾರದಷ್ಟು ಸಣ್ಣ ಬಾಲೆ
ಮೌನ ತಳೆದಿವೆ ತುದಿಯಿರದ ಪಟಪಟ ಮಾತುಗಳು
ಮುಚ್ಚಿಹೋಗಿವೆ ಮೊದಲಿನ ಅಚ್ಚರಿ ತುಂಬಿದ ಕಣ್ಣುಗಳು
ಸಂತೆಯ ತಿರುವಿನಲ್ಲೆಲ್ಲೋ ಕಳೆದುಹೋಗಿದೆ ಮುಗುಳ್ನಗು
ಹುಡುಕಿಕೊಡಬಹುದೇ ಕಳೆದುಹೋದ ಎಲ್ಲವನು ಯಾರಾದರೂ?

ಮರಳಿ ದೊರೆಯಬಹುದೇ ಹಳೆಯ ಎಲ್ಲ ನೆನಪುಗಳು?…
ಬಹುಶಃ ಹಿಂದೆ ಅತಿ ಭಾವುಕಳಾಗಿದ್ದೆನೇನೋ
ಈಗಲೂ ಭಾವುಕಳಾಗುತ್ತೇನೆ ಆಗೊಮ್ಮೆ ಈಗೊಮ್ಮೆ
ಆದರೆ ಪಟ್ಟಿಯ ಹಾಳೆ ಹರಿಯುವುದಿಲ್ಲ, ಅನಿಸಿದ್ದು ಗೀಚುವುದಿಲ್ಲ
ಅದೊಂಥರಾ ಹೇಳಲಾಗದ ಖಾಲಿ ಖಾಲಿ ಭಾವ
ಅನುಭವಗಳ, ಅನಿಸಿಕೆಗಳ ಅಕ್ಷರಕ್ಕಿಳಿಸಲಾಗದೇ….
ಇತ್ತೀಚೆಗೆ ಯಾಕೋ ಬರೆಯುವುದನ್ನೇ ನಿಲ್ಲಿಸಿಬಿಟ್ಟಿದ್ದೇನೆ ನಾನು !!

‍ಲೇಖಕರು nalike

May 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: