–ರಂಗಸ್ವಾಮಿ ಸಿದ್ದಯ್ಯ
ಗಜಲ್
ಬರುವೆ ಎಂದರೂ ಕೇಳದೆ ಹೋದೆ ಏನಿತ್ತೋ ಅವಸರ
ಎಂದೂ ಮರಳದ ಊರಿಗೆ ಹೋದೆ ಏನಿತ್ತೋ ಅವಸರ
ಬೆರೆತ ಜೀವ ಮಧುರ ಭಾವ ಮರೆತು ಹೋದೆ ಏತಕೆ
ಕಾಣದ ಕಡಲನು ಸೇರಲು ಹೋದೆ ಏನಿತ್ತೋ ಅವಸರ
ನೀ ಹೇಳಬೇಕಾಗಿದ್ದ ಮನದ ಮಾತು ಹೇಳದೆ ಮೌನದೊಳಗೆ ಮುಳುಗಿದೆ
ನೀ ನಡೆದ ಹೆಜ್ಜೆ ಗುರುತುಗಳನ್ನು ಅಳಿಸಿ ಹೋದೆ ಏನಿತ್ತೋ ಅವಸರ
ಹೃದಯದ ಹಕ್ಕಿ ಗೂಡಿಲ್ಲದೆ ಆಕಾಶದಲಿ ಅಲೆದಾಡಿದೆ
ಆಸೆಗಳ ಮರೀಚಿಕೆ ಬೆನ್ನಟ್ಟಿ ಹೋದೆ ಏನಿತ್ತೋ ಅವಸರ
ನಿನ್ನ ನಾಮ ಜಪಿಸುತ್ತಲೇ ಉಸಿರು ಮಿಡುಕಾಡಿದೆ
ನಿಂತ ಹೃದಯದ ನಾದವಾಗಿ ಹೋದೆ ಏನಿತ್ತೋ ಅವಸರ






0 Comments