–ಕೆ ಲಕ್ಷ್ಮಿ
ಮುತ್ತಿಟ್ಟು ಹಾರಿದ ಭ್ರಮರದ ತುಂಟಾಟ
ನೆನೆದು ಕೆಂಪಾದ ಸುಮ ತೊನೆಯ ತಂಗಾಳಿಗೆ
ಇನಿಯನ ಲೀಲೆಗೆ ಕೆಂಪಾದ ಗಲ್ಲವನು
ತೀಡುತ್ತ ಕುಸುಮಕ್ಕೆ ಪಿಸುಗುಡುತ ನುಡಿದಳು..
ನಾನೂ.. ನಿನ್ನ ಹಾಗೇ.. ನನಗು ನಿನ್ನ ಹಾಗೇ..
ನಲ್ಲ ಹಿಂಡಿದ ಗಲ್ಲ ಕೆಂಪು ಸುಮದ ಹಾಗೇ..
ಬೆಳದಿಂಗಳಾ ಇರುಳು ತಾರೆ ವಜ್ರದ ಹರಳು
ತಾಪದಲಿ ಮಲಗಿದ ನಲ್ಲೆಯನ್ನು ತಬ್ಬೀ..
ಚುಂಬನದ ಸಿಂಚನದಿ ತಂಪಾಗಿಸಿದ ನಲ್ಲ
ನಗುತ ನುಡಿದನು ಬೆಳ್ಳಿ ಚುಕ್ಕಿ ನೀನೇ..
ರಸ ಘಳಿಗೆ ರಸ ನಿಮಿಷ ರಸಭರಿತ ಬಾಳಿಗೆ
ಒಲವ ಬಂಧವು ಸತತ ಪ್ರೇಮ ಲೀಲೇ
ಸವಿಮಾತ ರಸ ಧಾರೆ ಝರಿಯಾಗಿ ಹರಿಯುತ್ತಿರೆ
ಕೆಂಪಡರುತಿದೆ ಗಲ್ಲ ಸುಮದ ಹಾಗೇ .. ಕೆಂಪು ಸುಮದ ಹಾಗೇ..






0 Comments