~ ಚೇತನ ಭಾರ್ಗವ
ಮುಸ್ಸಂಜೆ ಮಾತು
ಬದುಕು ಮುಗಿಯದ ಹಾದಿ
ಹುಡುಕುತ ಯಶಸ್ಸಿನ ಗಾದಿ
ಏಳು ಬೀಳಿನ ಈ ಪಯಣ
ಹೇಳಿದರೂ ಮುಗಿಯದ ಕಥನ
ಜೊತೆಯಲೇ ಸಾಗಿದ ಜೀವ
ಮರೆಸುತ ನೋವಿನ ಭಾವ
ದಿಗಂತವ ನೋಡುತ ಕುಳಿತು
ಆಡುತಾ ಮುಸ್ಸಂಜೆಯ ಮಾತು
ನೆನಪಿನ ಪುಟಗಳ ತೆರೆದು
ಸುಖ ದುಃಖವ ಕೂಡಿಸಿ ಕಳೆದು
ಹುಡುಕುತ ಬಾಳಿನ ಅರ್ಥ
ಅರಿಯುವ ಒಳಗಿನ ಯಥಾರ್ಥ
ಕರಗದ ಕರ್ಮದ ಗಂಟು
ಇರಲಿ ಪ್ರೇಮದ ನಂಟು
ಜನುಮಕು ಇರಲಿ ನಲುಮೆ
ನಿತ್ಯ ಚೈತನ್ಯದ ಚಿಲುಮೆ






0 Comments