ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರೀತಿ ಹೊಸ ಕವಿತೆ- ಅವಳು

ಪ್ರೀತಿ

—-

ಮತ್ತೆ ನವರಾತ್ರಿ ಕಳೆದಿದೆ,

ವಿಜಯಕ್ಕೆ ದಶಮಿಯೂ ಮುಗಿದಿದೆ,

ಕಾಳಿ, ದುರ್ಗೆಯರೆಲ್ಲ ಅಡುಗೆಮನೆಗೆ ಮರಳಿದ್ದಾರೆ,

ತಮ್ಮ ಶಸ್ತ್ರಗಳನ್ನು ತ್ರಿಶೂಲದಿಂದ ತಾಳ್ಮೆಗೆ ಬದಲಾಯಿಸಿ ಕೊಂಡಿದ್ದಾರೆ,

ಪ್ರತಿಬಾರಿ ಕೆಣಕಲು ರಾವಣನೇ ಆಗಬೇಕಿಲ್ಲ,

ಬದುಕಿನ ಜಂಜಾಟಗಳೇ ಸಾಕು,

ಒಳ್ಳೆಯದು ಕೆಟ್ಟದ್ದು ಎಲ್ಲದರಲ್ಲೂ ಪರೀಕ್ಷೆಗೆ ಬೀಳುವುದು ಅವಳ ಸ್ತ್ರೀ ಶಕ್ತಿ,

ಯಾವುದೇ ಸವಾಲಿನ ಅಂತ್ಯದಲ್ಲಿ,

ಅವಳಿಗೆ ಪಟ್ಟ ಬೇಕಿರುವುದಿಲ್ಲ,

ಅವಳು ಬಯಸುವುದು ಬರೀ ಶಾಂತಿ,

ಪ್ರತೀ ಸಲ ಪ್ರೀತಿಯ ಅಸ್ತ್ರ ಪ್ರಯೋಗಿಸುತ್ತಾಳೆ,

ನಗೆಯ,ಅಳುವಿನ, ಮಾತಿನ ಬಾಣಗಳ ಮೂಲಕ!

ಆದರೆ ಅಸುರನ ವಧೆಗಲ್ಲ, ಜೀವನದ ಗೆಲುವಿಗೆ!

‍ಲೇಖಕರು avadhi

26 October, 2023

1 Comment

  1. Kotresh Arsikere

    ಬಹಳ ಚಂದದ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading