ಶೋಭಾ ದಿನೇಶ್
ಸದಾ ಎದೆಯಲ್ಲಿ ಅಗ್ನಿಪರ್ವತವನ್ನು ಹೊತ್ತಂತೆ ಹಬೆಯಾಡುತ್ತಿದ್ದ ನಿನ್ನಂತ ನೀನು
ಈ ಪ್ರೀತಿಯ ಕುಳಿರ್ಗಾಳಿಗೆ ಸಿಕ್ಕು ತಣ್ಣಗಾಗುತ್ತಿರುವುದು ಸೋಜಿಗವೇ ಸರಿ
ಸದಾ ಮೇಲೇರುವ ಧಾವಂತದಲ್ಲಿದ್ದ ನೀನು, ಬದುಕಿನ ಹಾದಿಯನ್ನು ವೇಗದ ಹೈವೇಯಿಂದ
ಆಚೆಗೆಳೆದು ತಣ್ಣನೆಯ ಸಣ್ಣ ದಾರಿಗೆ ತಂದು ನಿಲ್ಲಿಸಿದ್ದು ಸೋಜಿಗವೇ ಸರಿ
ಕಂಪ್ಯೂಟರಿಗೆ ಭಾಷೆ ಉಣಿಸಲು ಕಲಿತಿದ್ದ ನೀನು, ನಿಧಾನವಾದರೂ ಸರಿಯೇ ಪ್ರೀತಿ ಸಾಧ್ಯತೆಯ ಮೇಲೆ,
ನಿರೀಕ್ಷೆಯ ಮೇಲೆ, ನಂಬಿಕೆಯ ಮೇಲೆ ಬದುಕತ್ತದೆ ಎಂಬುದನ್ನ ಕಲಿತ ನೀನು ಸೋಜಿಗವೇ ಸರಿ
ಪ್ರೀತಿಯೆಂದರೆ ದಿವ್ಯ ಮಡಿವಂತೆಕೆ ತೋರುತ್ತಿದ್ದ ಧುಮುಗುಡುತ್ತಿದ್ದ ಮುಖದಲ್ಲೀಗ ಎಳೆ ಬಿಸಿಲ ನಗೆ,
ಮನದಂಗಳದ ತುಂಬಾ ಬೆಳದಿಂಗಳ ಚೆಲ್ಲುವ ತುಂಬು ಪ್ರೀತಿಯ ಹುಡುಗನಾಗಿದ್ದು ಸೋಜಿಗವೇ ಸರಿ
ಗಂಭೀರತೆಯ ಶಿಲುಬೆಯನ್ನೇರಿಸಿಕೊಂಡು ಕಡು ಮೌನವಾಗಿದ್ದ ಹುಡುಗ, ಇಂದು ಪ್ರೀತಿಯನ್ನು ಇಷ್ಟೊಂದು ಸಹಜವಾಗಿ ತೆರೆದಿಡುತ್ತಿರುವುದು ಸೋಜಿಗವೇ ಸರಿ
ಹಿಮಾಲಯ ಕೂಡ ಕರಗಿ ಹರಿದಿದ್ದುಂಟು, ಆದರೆ ನೀ ಕರಗದ ಗಡ್ಡೆಯಾಗಿದ್ದೆ
ಪ್ರೀತಿಗೆ ಮುಖಾಮುಖಿಯಾದೊಡನೆ ಸರಾಗವಾಗಿ ಹರಿಯತೊಡಗಿದ್ದು ಸೋಜಿಗವೇ ಸರಿ
0 ಪ್ರತಿಕ್ರಿಯೆಗಳು