ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಕಣ್ಣ ಇದ್ದಷ್ಟೂ ಸಮಯ

-ಡಾ. ಗೋವಿಂದ ಹೆಗಡೆ

ಗೋಕುಲ ನಿರ್ಗಮನ: ಹನಿ ಹನಿಯಾಗಿ

ಈ ಕಣ್ಣ ಇದ್ದಷ್ಟೂ ಸಮಯ
ನಮ್ಮ ಪ್ರೀತಿಯನು
ಅಪಹರಿಸಿದ;
ಈಗ ಗೋಕುಲದಿಂದ ತೆರಳಿ
ನಮ್ಮ ಸಂತಸವ
ಅಪಹರಿಸಿದ್ದಾನೆ…
★

ಇಷ್ಟು ದಿನ
ಬೆಣ್ಣೆಯ ಗಡಿಗೆ
ಒಡೆಯುವನೆಂದು
ದೂರುತ್ತಿದ್ದೆವು…
ಈಗ- ಈ ಕಣ್ಣ
ನಮ್ಮ ಹೃದಯವನ್ನೇ
ಒಡೆದು ಹೋದನಲ್ಲ!
★

ನಮ್ಮ ಎದೆಯೇ
ಒಡೆದಿದೆ!
ಇನ್ನು ಈ ಕೊಳಲಿನ
ಪಾಡೇನು?!
★

ಈ ಯಮುನೆಯ ತೀರ
ಈ ಬೆಳದಿಂಗಳು
ಈ ಕದಂಬ…
ಎಲ್ಲ ಹೇಗೆ ಬೆಳಗಿದ್ದವು ಆಗ!
ಈಗ?
★

ಈ ಕಣ್ಣ ಎಂಥ ಹೃದಯವಂತ
ಎನ್ನುತ್ತಿದ್ದೆವು
ಎಂಥ ಕಲ್ಲೆದೆಯವನು ಎಂದು
ಈಗಲೇ ತಿಳಿದಿದ್ದು…
★

ಈ ಗೋವುಗಳು
ಹುಲ್ಲು- ನೀರು ಮರೆತು ನಿಂತಿವೆ,
ಕರುಗಳು ಗೋಳಿಡಲೂ
ಆಗದೇ ಕುಸಿದಿವೆ;
ಮರಳಿ ಬಂದು ಅವನು ಸಂತೈಸದೇ
ಕಣ್ಣಾ, ಗೋಪಾಲ ಹೇಗೆ ನೀನು!

‍ಲೇಖಕರು Admin

13 November, 2026

1 Comment

  1. govind hegde

    ಧನ್ಯವಾದಗಳು.

    Reply

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading